ಮೇ ತಿಂಗಳ ಭಾರತ-ಪಾಕಿಸ್ತಾನ ಸಂಘರ್ಷ ವೇಳೆ ಮಧ್ಯಸ್ಥಿಕೆ ವಹಿಸಿದ್ದು ನಾವೇ: ಚೀನಾ

ಕಳೆದ ಮೇ 7ರಿಂದ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಎರಡೂ ದೇಶಗಳ ಸೇನೆಗಳ ಡಿಜಿಎಂಒಗಳ (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ನೇರ ಮಾತುಕತೆಯ ಮೂಲಕ ಪರಿಹರಿಸಲಾಗಿದೆ ಎಂದು ಭಾರತ ಹೇಳಿಕೊಂಡಿದೆ.
The Jamia Masjid Subhan Allah, the Jaish e Mohammad's operational headquarters in Bahawalpur, which was struck by Indian missiles during Operation Sindoor
ಬಹಾವಲ್ಪುರದಲ್ಲಿರುವ ಜೈಶ್ ಇ ಮೊಹಮ್ಮದ್‌ನ ಕಾರ್ಯಾಚರಣಾ ಪ್ರಧಾನ ಕಚೇರಿಯಾದ ಜಾಮಿಯಾ ಮಸೀದಿ ಸುಭಾನ್ ಅಲ್ಲಾ, ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಕ್ಷಿಪಣಿಗಳಿಂದ ದಾಳಿಗೊಳಗಾಗಿತ್ತು.
Updated on

ಈ ವರ್ಷ ಚೀನಾ ಮಧ್ಯಸ್ಥಿಕೆ ವಹಿಸಿದ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳ ಉದ್ವಿಗ್ನತೆಯೂ ಸೇರಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ಕಳೆದ ಮೇ 7ರಿಂದ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಎರಡೂ ದೇಶಗಳ ಸೇನೆಗಳ ಡಿಜಿಎಂಒಗಳ (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ನೇರ ಮಾತುಕತೆಯ ಮೂಲಕ ಪರಿಹರಿಸಲಾಗಿದೆ ಎಂದು ಭಾರತ ಹೇಳಿಕೊಂಡಿದೆ.

ಮೇ 13 ರ ಪತ್ರಿಕಾಗೋಷ್ಠಿಯಲ್ಲಿ, ವಿದೇಶಾಂಗ ಸಚಿವಾಲಯವು ಕದನ ವಿರಾಮ ಮತ್ತು ಇತರ ದೇಶಗಳು ಯಾವ ರೀತಿಯ ಪಾತ್ರವನ್ನು ವಹಿಸಿವೆ ಇತ್ಯಾದಿಗಳ ಕುರಿತು ವಿವರಣೆ ನೀಡಿತ್ತು. ಎರಡೂ ದೇಶಗಳ ಡಿಜಿಎಂಒಗಳ ನಡುವೆ ಕಳೆದ ಮೇ 10 ರಂದು ಅಪರಾಹ್ನ 3:35ರ ಹೊತ್ತಿಗೆ ಪ್ರಾರಂಭವಾದ ದೂರವಾಣಿ ಮಾತುಕತೆಯಲ್ಲಿ ತಿಳುವಳಿಕೆಯ ನಿರ್ದಿಷ್ಟ ದಿನಾಂಕ, ಸಮಯ ಮತ್ತು ಮಾತುಗಳನ್ನು ರೂಪಿಸಲಾಯಿತು.

ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಪ್ರವೇಶಿಸುವಿಕೆ ಸ್ಥಳವಿಲ್ಲ ಎಂದು ಭಾರತ ಹೇಳಿಕೊಂಡು ಬರುತ್ತಲೇ ಇದೆ.

The Jamia Masjid Subhan Allah, the Jaish e Mohammad's operational headquarters in Bahawalpur, which was struck by Indian missiles during Operation Sindoor
Operation Sindoor: ಭಾರತ-ಪಾಕಿಸ್ತಾನ ಯುದ್ಧವನ್ನು ಚೀನಾ ತನ್ನ ಯುದ್ಧೋಪಕರಣ ಪರೀಕ್ಷೆಗೆ ಬಳಸಿತ್ತು; ಅಮೆರಿಕ ವರದಿ

ಎರಡನೇ ಮಹಾಯುದ್ಧ ನಂತರ ಸ್ಥಳೀಯ ಯುದ್ಧಗಳು ಮತ್ತು ಗಡಿಯಾಚೆಗಿನ ಘರ್ಷಣೆಗಳು ಭುಗಿಲೆದ್ದವು. ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಹರಡುತ್ತಲೇ ಇದ್ದವು ಎಂದು ಬೀಜಿಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡುವ ವೇಳೆ ವಾಂಗ್ ಹೇಳಿದ್ದಾರೆ.

ಶಾಶ್ವತ ಶಾಂತಿಯನ್ನು ನಿರ್ಮಿಸಲು, ನಾವು ವಸ್ತುನಿಷ್ಠ ಮತ್ತು ನ್ಯಾಯಯುತ ನಿಲುವನ್ನು ತೆಗೆದುಕೊಂಡಿದ್ದೇವೆ. ಮೂಲ ಕಾರಣಗಳನ್ನು ಪರಿಹರಿಸುವತ್ತ ಗಮನಹರಿಸಿದ್ದೇವೆ ಎಂದು ಹೇಳಿದರು.

ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಚೀನಾ ವಿಧಾನವನ್ನು ಅನುಸರಿಸಿ, ನಾವು ಉತ್ತರ ಮ್ಯಾನ್ಮಾರ್‌ನಲ್ಲಿ, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ ಎಂದು ಅವರು ಹೇಳಿದರು.

The Jamia Masjid Subhan Allah, the Jaish e Mohammad's operational headquarters in Bahawalpur, which was struck by Indian missiles during Operation Sindoor
ಭಾರತ-ಅಮೆರಿಕ ಸಂಬಂಧ ಹಳ್ಳಹಿಡಿಸಲು ಯತ್ನ ಆರೋಪ: ಚೀನಾ ಹೇಳಿದ್ದೇನು?

ಕಳೆದ ಮೇ 7-10 ರಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಆಪರೇಷನ್ ಸಿಂದೂರ್ ಸಂಘರ್ಷದಲ್ಲಿ ಚೀನಾದ ಪಾತ್ರವು ಗಂಭೀರ ಪರಿಶೀಲನೆ ಮತ್ತು ಟೀಕೆಗೆ ಒಳಗಾಯಿತು. ವಿಶೇಷವಾಗಿ ಚೀನಾ ಪಾಕಿಸ್ತಾನಕ್ಕೆ ಮಾಡಿದ ಮಿಲಿಟರಿ ಸಹಾಯದಿಂದ.

ರಾಜತಾಂತ್ರಿಕ ರಂಗದಲ್ಲಿ, ಚೀನಾ, ಮೇ 7 ರಂದು, ಭಾರತದ ವಾಯುದಾಳಿ ಬಗ್ಗೆ ವಿಷಾದ ವ್ಯಕ್ತಪಡಿಸುವಾಗಲೂ ಭಾರತ ಮತ್ತು ಪಾಕಿಸ್ತಾನ ಸಂಯಮವನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿತು.

ಭಾರತದ ವಾಯುದಾಳಿ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ, ಆಪರೇಷನ್ ಸಿಂದೂರ್ ಮೊದಲ ದಿನದಂದು ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆಯು ಇಂದು ಬೆಳಗಿನ ಜಾವ ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು ವಿಷಾದಕರವೆಂದು ಪರಿಗಣಿಸಿದೆ ಎಂದು ಹೇಳಿದೆ.

ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆಯು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಹೇಳಿದೆ. ಶಾಂತಿಯ ಹಿತದೃಷ್ಟಿಯಿಂದ ಎರಡೂ ಕಡೆಯವರು ಸಂಯಮವನ್ನು ಕಾಯ್ದುಕೊಳ್ಳುವಂತೆ ಒತ್ತಾಯಿಸಿದೆ.

ಮೇ ತಿಂಗಳಲ್ಲಿ ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನಕ್ಕೆ ಚೀನಾದ ಸಕ್ರಿಯ ಮಿಲಿಟರಿ ಬೆಂಬಲವು ಚೀನಾ-ಪಾಕಿಸ್ತಾನದ ನಿಕಟ ಸಂಬಂಧಗಳು ಚೀನಾ ಭಾರತದ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಬಗ್ಗೆ ತೀಕ್ಷ್ಣವಾದ ಜ್ಞಾಪನೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com