ISS: 'ಈಗಲೂ ಸಾರೆ ಜಹಾನ್ ಸೇ ಅಚ್ಚಾ'; ಬೀಳ್ಕೊಡುಗೆ ಭಾಷಣದಲ್ಲಿ ಭಾರತ ಸ್ಮರಿಸಿದ Shubhanshu Shukla

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳನ್ನು ಕಳೆದ ನಂತರ ಜುಲೈ 15 ರಂದು ಭೂಮಿಗೆ ಮರಳುತ್ತಿದ್ದಾರೆ.
Shuks at ISS farewell
ಶುಭಾಂಶು ಶುಕ್ಲಾIANS
Updated on

ವಾಷಿಂಗ್ಟನ್: ಬಾಹ್ಯಾಕಾಶದಿಂದ ಭಾರತವು ಮಹತ್ವಾಕಾಂಕ್ಷೆ, ನಿರ್ಭೀತ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ತುಂಬಿದಂತೆ ಕಾಣುತ್ತದೆ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಭಾನುವಾರ ಹೇಳಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳನ್ನು ಕಳೆದ ನಂತರ ಜುಲೈ 15 ರಂದು ಭೂಮಿಗೆ ಮರಳುತ್ತಿದ್ದಾರೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಆಕಾಶ ಗಂಗಾ ಎಂಬ ಯಶಸ್ವಿ ಕಾರ್ಯಾಚರಣೆಯ ನಂತರ ಭೂಮಿಗೆ ಮರಳಲು ಸಿದ್ಧತೆ ನಡೆಸುತ್ತಿರುವಾಗ, ಭಾರತವು ತನ್ನ ಬಾಹ್ಯಾಕಾಶ ಯಾತ್ರೆಯಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ.

ಇನ್ನು ಸೋಮವಾರ ಭೂಮಿಗೆ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ದಲ್ಲಿರುವ ಆಕ್ಸಿಯಮ್ -4 ಮಿಷನ್ ಗಗನಯಾತ್ರಿಗಳಿಗೆ ವಿದಾಯ ಸಮಾರಂಭದಲ್ಲಿ ಶುಕ್ಲಾ ಮಾತನಾಡಿದರು.

ಈ ವೇಳೆ "ಇಂದಿಗೂ ಸಹ, ಭಾರತವು ಮೇಲಿನಿಂದ 'ಸಾರೆ ಜಹಾಂ ಸೆ ಅಚ್ಚಾ' ಎಂದು ಕಾಣುತ್ತದೆ ಎಂದು ಶುಕ್ಲಾ 1984 ರಲ್ಲಿ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರ ಸಾಂಪ್ರದಾಯಿಕ ಮಾತುಗಳನ್ನು ಪುನರಾವರ್ತಿಸುತ್ತಾ ಹೇಳಿದರು.

Shuks at ISS farewell
ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಜುಲೈ 14ರಂದು ವಾಪಸ್: NASA

"ಇದು ನನಗೆ ಬಹುತೇಕ ಮಾಂತ್ರಿಕವಾಗಿ ತೋರುತ್ತದೆ... ಇದು ನನಗೆ ಅದ್ಭುತ ಪ್ರಯಾಣವಾಗಿದೆ" ಎಂದು ಜೂನ್ 26 ರಂದು ಪ್ರಾರಂಭವಾದ ISS ನಲ್ಲಿ ತಮ್ಮ ವಾಸ್ತವ್ಯದ ಬಗ್ಗೆ ಶುಕ್ಲಾ ಹೇಳಿದರು. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ತಮ್ಮೊಂದಿಗೆ ಬಹಳಷ್ಟು ನೆನಪುಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಮತ್ತು ಅವರು ತಮ್ಮ ದೇಶವಾಸಿಗಳೊಂದಿಗೆ ಹಂಚಿಕೊಳ್ಳುವದನ್ನು ಕಲಿಯುತ್ತಿರುವುದಾಗಿ ಹೇಳಿದರು.

ಅಂದಹಾಗೆ ಆಕ್ಸಿಯಮ್ -4 ಮಿಷನ್ ಸೋಮವಾರ ISS ನಿಂದ ತೆಗೆಯಲ್ಪಡುತ್ತದೆ ಮತ್ತು ಮಂಗಳವಾರ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಬೀಳುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅನ್‌ಡಾಕ್ ಮಾಡುವ ಮೊದಲು, ನಾಲ್ವರು ಗಗನಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭವು ಜುಲೈ 13ರಂದು ಭಾರತೀಯ ಕಾಲಮಾನ ಸಂಜೆ 7.25ಕ್ಕೆ ನಡೆಯಲಿದೆ.

ನಾಲ್ಕು ಗಗನಯಾತ್ರಿಗಳು, 580 ಪೌಂಡ್‌ಗಳಿಗಿಂತ ಹೆಚ್ಚು (ಸುಮಾರು 263 ಕೆಜಿ) ಸರಕು, ನಾಸಾ ಹಾರ್ಡ್‌ವೇರ್ ಮತ್ತು 60 ಕ್ಕೂ ಹೆಚ್ಚು ಪ್ರಯೋಗಗಳ ದತ್ತಾಂಶದೊಂದಿಗೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಜುಲೈ 15 ರಂದು ಐಎಸ್‌ಎಸ್‌ನಿಂದ ಭೂಮಿಗೆ ಮರಳಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಶನಿವಾರ ತಿಳಿಸಿದೆ.

ಆಕ್ಸಿಯಮ್ -4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪೋಸ್ಟ್‌ನಲ್ಲಿ ಅವರು ಮತ್ತು ಅವರ ತಂಡವು ಐಎಸ್‌ಎಸ್‌ನಲ್ಲಿ ಕೊನೆಯ ದಿನದಂದು ಕಾಕ್‌ಟೇಲ್‌ಗಳು ಮತ್ತು ಅತ್ಯುತ್ತಮ ಜನರ ಸಹವಾಸ ಖುಷಿ ತಂದಿದೆ.. ಶುಕ್ಲಾ ಕ್ಯಾರೆಟ್ ಹಲ್ವಾ ಮತ್ತು ಆಮ್ರಾಸ್ ತಂದಿದ್ದಾರೆ. ಅದು ಎಲ್ಲರ ಹೃದಯವನ್ನು ಗೆದ್ದಿದೆ ಎಂದು ಬಣ್ಣಿಸಿದ್ದಾರೆ.

ಭಾರತ ಮೂಲದ ವ್ಯೋಮಗಾಮಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳಾದ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಈ ಪ್ರಯಾಣದಲ್ಲಿ ಸೇರಿದ್ದಾರೆ. ಎಲ್ಲರೂ ಜೂನ್ 26 ರಂದು ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com