
ಮಾಸ್ಕೋ: ಇರಾನ್ ವಿರುದ್ಧ ಇಸ್ರೇಲ್ ತನ್ನ ಸೇನಾ ದಾಳಿಯನ್ನು ಇಮ್ಮಡಿಗೊಳಿಸಿದ್ದು, ಉಭಯ ದೇಶಗಳ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೆನಿ ಇಸ್ರೇಲ್ ವಾಯುದಾಳಿಯಲ್ಲಿ ಹತನಾಗಿರಬಹುದು ಎಂದು ಹೇಳಲಾಗಿದೆ.
ಇಸ್ರೇಲ್ ಸೇನಾದಾಳಿ ಹಿನ್ನಲೆಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೆನಿಯನ್ನು ಅತ್ಯಂತ ಸುರಕ್ಷಿತ ಬಂಕರ್ ಗೆ ರವಾನಿಸಲಾಗಿದೆ ಎಂದು ಇರಾನ್ ಮೂಲಗಳು ತಿಳಿಸಿವೆ. ಮತ್ತೆ ಕೆಲವು ಮೂಲಗಳು ಖಮೆನಿಯನ್ನು ರಾಜಧಾನಿ ಟೆಹ್ರಾನ್ ನಿಂದ ದೂರದ ಅತ್ಯಂತ ಸುರಕ್ಷಿತ ಅಜ್ಞಾತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಹೇಳಿದೆ.
ಈ ಎಲ್ಲ ಊಹಾಪೋಹಗಳ ನಡುವೆ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೆನಿ ಇಸ್ರೇಲ್ ವಾಯುದಾಳಿಯಲ್ಲಿ ಹತನಾಗಿರಬಹುದು ಎಂಬ ಮತ್ತೊಂದು ಚರ್ಚೆ ಕೂಡ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ರಷ್ಯಾ ಅಧ್ಯಕ್ಷ Putin ಹೇಳಿದ್ದೇನು?
ಇನ್ನು ಇರಾನ್-ಇಸ್ರೇಲ್ ಯುದ್ಧದಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆಯ ಸಾಧ್ಯತೆಯ ಬಗ್ಗೆ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಕ್ರಿಯೆ ನೀಡಿದ್ದಾರೆ. 'ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಇಸ್ರೇಲ್ ಕೊಲ್ಲುವ ಸಾಧ್ಯತೆಯ ಬಗ್ಗೆ ಚರ್ಚಿಸಲು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.
"ನಾನು ಅಂತಹ ಸಾಧ್ಯತೆಯ ಬಗ್ಗೆ ಚರ್ಚಿಸಲು ಸಹ ಬಯಸುವುದಿಲ್ಲ" ಎಂಬ ನಿಮ್ಮ ಪ್ರಶ್ನೆಗೆ ಇದು ಅತ್ಯಂತ ಸರಿಯಾದ ಉತ್ತರವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಅವರು TASS ಆಯೋಜಿಸಿದ ವಿಶ್ವದ ಪ್ರಮುಖ ಸುದ್ದಿ ಸಂಸ್ಥೆಗಳ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಹೇಳಿದರು. ಇಸ್ರೇಲ್ ಅಯತೊಲ್ಲಾ ಅವರನ್ನು ಹತ್ಯೆ ಮಾಡಿದರೆ ರಷ್ಯಾದ ಪ್ರತಿಕ್ರಿಯೆ ಏನಾಗಿರುತ್ತದೆ ಎಂದು ಕೇಳಿದಾಗ ಪುಟಿನ್ ಈ ರೀತಿ ಉತ್ತರಿಸಿದ್ದಾರೆ ಎನ್ನಲಾಗಿದೆ.
ಜೂನ್ 13 ರ ರಾತ್ರಿ, ಇರಾನ್‌ನ ಪರಮಾಣು ಕಾರ್ಯಕ್ರಮದ ವಿರುದ್ಧ ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ ಅನ್ನು ಪ್ರಾರಂಭಿಸಿತ್ತು. ಈ ದಾಳಿಗೆ ಪ್ರತೀಕಾರವಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಇರಾನ್ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿತು. ನಂತರದ ದಿನಗಳಲ್ಲಿ, ಟೆಲ್ ಅವಿವ್ ಮತ್ತು ಟೆಹ್ರಾನ್ ಮತ್ತೆ ದಾಳಿಗಳನ್ನು ವಿನಿಮಯ ಮಾಡಿಕೊಂಡವು.
ಈ ದಾಳಿಗಳಿಂದ ಉಂಟಾದ ಸಾವುನೋವುಗಳನ್ನು ಎರಡೂ ಕಡೆಯವರು ವರದಿ ಮಾಡಿದ್ದಾರೆ ಮತ್ತು ತಮ್ಮ ಪ್ರದೇಶದೊಳಗಿನ ಹಲವಾರು ಗುರಿಗಳ ಮೇಲೆ ದಾಳಿಗಳನ್ನು ಒಪ್ಪಿಕೊಂಡರು, ಆದರೂ ಹಾನಿ ಸೀಮಿತವಾಗಿದೆ ಉಭಯ ದೇಶಗಳು ಹೇಳಿಕೊಂಡಿವೆ.
ಖಮೇನಿ ಸುಲಭ ಗುರಿ.. ಹತ್ಯೆ ಮಾಡುವ ಯಾವುದೇ ಯೋಜನೆ ಇಲ್ಲ: ಅಮೆರಿಕ
ಇನ್ನು ಇದಕ್ಕೂ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಸರ್ವೋಚ್ಚ ನಾಯಕನನ್ನು ನಿರ್ಮೂಲನೆ ಮಾಡುವ ಯಾವುದೇ ಯೋಜನೆಗಳಿಲ್ಲ. ಖಮೇನಿ ಸುಲಭದ ಗುರಿ ಎಂದು ಹೇಳಿದರು.
Advertisement