'ವಿಮಾನ ಉಡುಗೊರೆ ಕೊಡಬೇಕು ಎಂದಿದ್ದೆ': ಅಮೆರಿಕ ಅಧ್ಯಕ್ಷ Trumpಗೆ ದಕ್ಷಿಣ ಆಫ್ರಿಕಾ ಅಧ್ಯಕ್ಷ Cyril Ramaphosa ಟಾಂಗ್!

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ವೇತಭವನದಲ್ಲಿ ಇಬ್ಬರು ನಾಯಕರ ನಡುವಿನ ಚರ್ಚೆ ನಡೆಯಿತು.
Donald Trump - Cyril Ramaphosa
ಡೊನಾಲ್ಡ್ ಟ್ರಂಪ್ ಮತ್ತು ಸಿರಿಲ್ ರಾಮಫೋಸಾ ಚರ್ಚೆReuters
Updated on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗೆ ತನ್ನದೇ ದೇಶದ ತನ್ನದೇ ಕಚೇರಿಯಲ್ಲಿ ಮುಜುಗರಕ್ಕೀಡಾಗಿದ್ದು, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ (Cyril Ramaphosa) ಭೇಟಿ ವೇಳೆ ಈ ಘಟನೆ ನಡೆದಿದೆ.

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ವೇತಭವನದಲ್ಲಿ ಇಬ್ಬರು ನಾಯಕರ ನಡುವಿನ ಚರ್ಚೆ ನಡೆಯಿತು.

ಈ ವೇಳೆ ಉಭಯ ನಾಯಕರು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ವ್ಯಾಪಾರದ ಕುರಿತು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ಭರವಸೆಯೊಂದಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.

ಲೈಟ್ ಆಫ್ ಮಾಡಿ, ವಿಡಿಯೋ ತೋರಿಸಬೇಕು: ಟ್ರಂಪ್

ಇನ್ನು ಈ ಚರ್ಚೆ ವೇಳೆ ದಕ್ಷಿಣ ಆಫ್ರಿಕಾ ಸರ್ಕಾರದ ವಿರುದ್ಧ ಡೊನಾಲ್ಡ್ ಟ್ರಂಪ್ ಕೊಂಚ ಅಸಮಾಧಾನಗೊಂಡಿದ್ದರು. ಆಫ್ರಿಕಾದಲ್ಲಿನ ಬಿಳಿಯರ ಮೇಲಿನ ದೌರ್ಜನ್ಯವನ್ನು ಖಂಡಿಸಿದ ಟ್ರಂಪ್ ಸಿರಿಲ್ ರಾಮಫೋಸಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಶ್ವೇತ ಭವನದಲ್ಲೇ ಪರದೆಯಲ್ಲಿ ಬಿಳಿಯರ ಮೇಲಿನ ದೌರ್ಜನ್ಯದ ವಿಡಿಯೋ ಪ್ಲೇ ಮಾಡಿದರು. ಸುಮಾರು 4 ನಿಮಿಷಗಳ ವಿಡಿಯೋದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕರಿಯ ರಾಜಕೀಯ ನಾಯಕರು ಬಿಳಿಯರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಕುರಿತ ಸಂಕ್ಷಿಪ್ತ ವಿವರವನ್ನು ಉಭಯ ನಾಯಕರು ನೋಡಿದರು.

ವಿಡಿಯೋದಲ್ಲಿರುವ ಬಿಳಿ ಶಿಲುಬೆಗಳ ಸಾಲು (ಸ್ಮಶಾಣದಲ್ಲಿರುವ ಸಮಾಧಿಗಳು) ಬಿಳಿ ರೈತರನ್ನು ಪ್ರತಿನಿಧಿಸುತ್ತದೆ ಎಂದು ಟ್ರಂಪ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ,'ರಾಜಕಾರಣಿಗಳ ಹೇಳಿಕೆಗಳನ್ನು ಅಕ್ಷರಶಃ ತೆಗೆದುಕೊಳ್ಳಬಾರದು. ದಕ್ಷಿಣ ಆಫ್ರಿಕಾದಲ್ಲಿ ನರಮೇಧ ನಡೆಯುತ್ತಿದೆ ಎಂಬ ವ್ಯಾಪಕವಾಗಿ ತಿರಸ್ಕರಿಸಲ್ಪಟ್ಟ ಹೇಳಿಕೆಗಳನ್ನು ಪ್ರಚಾರ ಮಾಡಲು ಸಂಪ್ರದಾಯವಾದಿ ಮಾಧ್ಯಮಗಳು ಅವುಗಳನ್ನು ಬಳಸುತ್ತವೆ.

ಇದು ಭಯಾನಕ ದೃಶ್ಯ. ನಾನು ಎಂದಿಗೂ ಅಂತಹದ್ದನ್ನು ನೋಡಿಲ್ಲ" ಎಂದು ಹೇಳಿದರು. ಅಲ್ಲದೆ ವಿಡಿಯೋದಲ್ಲಿನ ಅಂಶಗಳ ಬಗ್ಗೆಯೇ ರಾಮಫೋಸಾ ಸಂಶಯ ವ್ಯಕ್ತಪಡಿಸಿದರು. "ಅದು ಎಲ್ಲಿದೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಏಕೆಂದರೆ ಇದನ್ನು ನಾನು ಎಂದಿಗೂ ನೋಡಿಲ್ಲ'' ಎಂದರು.

Donald Trump - Cyril Ramaphosa
Washington DC: ಯಹೂದಿ ವಸ್ತುಸಂಗ್ರಹಾಲಯ ಬಳಿ ಗುಂಡಿನ ದಾಳಿ; ಇಸ್ರೇಲಿ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಸಾವು

"ಸಾವು. ಸಾವು. ಭಯಾನಕ ಸಾವು"

ಸಾವಿರಾರು ಬಿಳಿ ಜನರು ತಮ್ಮದೇ ತವರಿನಲ್ಲಿನ ತಾರತಮ್ಯ ಮತ್ತು ಹಿಂಸಾಚಾರಕ್ಕೆ ತುತ್ತಾಗಿ ಅಮೆರಿಕಕ್ಕೆ ವಲಸೆ ಬರುತ್ತಿದ್ದಾರೆ. "ಸಾವು. ಸಾವು. ಭಯಾನಕ ಸಾವು" .. ಎಲ್ಲಿ ನೋಡಿದರೂ ಸಾವು.. ಎಂದು ಟ್ರಂಪ್ ಹೇಳಿದರು.

ಇದಕ್ಕೆ ಉತ್ತರಿಸಿದ ರಾಮಫೋಸಾ, ದಕ್ಷಿಣ ಆಫ್ರಿಕಾದಲ್ಲಿ ನರಮೇಧದ ಆರೋಪಗಳನ್ನು ತಿರಸ್ಕರಿಸಿದರು. ಒಂದು ಕಾಲದಲ್ಲಿ ವರ್ಣಭೇದ ನೀತಿಯ ದೇಶವಾಗಿದ್ದ ಇದನ್ನು ಆಫ್ರಿಕನ್ನರು ಎಂದು ಕರೆಯಲ್ಪಡುವ ಬಿಳಿ ಅಲ್ಪಸಂಖ್ಯಾತರು ಆಳುತ್ತಿದ್ದರು. ಜನಾಂಗೀಯ ದಬ್ಬಾಳಿಕೆಯ ವ್ಯವಸ್ಥೆಯು ಮೂರು ದಶಕಗಳ ಹಿಂದೆ ಕೊನೆಗೊಂಡಿತು ಮತ್ತು ಸಮನ್ವಯಕ್ಕಾಗಿ ಹೆಚ್ಚಾಗಿ ಯಶಸ್ವಿ ಪ್ರಯತ್ನಗಳ ಹೊರತಾಗಿಯೂ ಸ್ವಲ್ಪ ಉದ್ವಿಗ್ನತೆ ಉಳಿದಿದೆ ಎಂದರು.

ವಿಮಾನ ಉಡುಗೊರೆ ಕೊಡಬೇಕು ಎಂದಿದ್ದೆ

ಇದೇ ವೇಳೆ ಸುದ್ದಿಗಾರರೊಬ್ಬರು, ಅಮೆರಿಕ ಅಧ್ಯಕ್ಷರು ಏರ್ ಫೋರ್ಸ್ ಒನ್ ಆಗಿ ಬಳಸಲು ಯೋಜಿಸಿರುವ ಕತಾರ್‌ನಿಂದ ದಾನ ಮಾಡಿದ ಬೋಯಿಂಗ್ 747 ಅನ್ನು ಪೆಂಟಗನ್ ಔಪಚಾರಿಕವಾಗಿ ಸ್ವೀಕರಿಸುವ ಬಗ್ಗೆ ಟ್ರಂಪ್ ಅವರನ್ನು ಕೇಳಿದಾಗ ಟ್ರಂಪ್ ವರದಿಗಾರನ ವಿರುದ್ಧ ವಾಗ್ದಾಳಿ ನಡೆಸಿದರು. ಬಿಳಿ ರೈತರನ್ನು ಒಳಗೊಂಡ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದೀರಿ ಎಂದು ಹೇಳಿದರು.

ಈ ವೇಳೆ ಹಾಸ್ಯಚಟಾಕಿ ಹಾರಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, 'ನಿಮಗೆ ಕೊಡಲು ನನ್ನ ಬಳಿ ವಿಮಾನವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು" ಎಂದು ಹೇಳಿದರು. ಈ ವೇಳೆ ಟ್ರಂಪ್ ಕೂಡ "ನೀವು ಕೊಡಬೇಕಿತ್ತು ಅಷ್ಟೇ.. ನಾನು ಅದನ್ನು ಸ್ವೀಕರಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com