ಭಾರತದೊಂದಿಗಿನ ಸಂಘರ್ಷ: ಪಾಕ್ ಬಳಸಿದ್ದ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆ ಬಗ್ಗೆ ಪ್ರತಿಕ್ರಿಯಿಸಲು ಚೀನಾ ನಕಾರ..!

ಭಾರತವು ಸ್ಫೋಟಗೊಳ್ಳದ PL-15E ಕ್ಷಿಪಣಿಯನ್ನು ವಶಪಡಿಸಿಕೊಂಡ ವರದಿಗಳನ್ನು ತಳ್ಳಿಹಾಕಿದ್ದು, ಇದು, ಚೀನಾ ತಯಾರಿಕೆಯ ಅತ್ಯುನ್ನತ ರಾಕೆಟ್ ಆಗಿದೆ.
Chinese Defence Ministry Spokesperson Sr. Col. Zhang Xiaogang
ಚೀನಾ ರಕ್ಷಣಾ ಸಚಿವಾಲಯ ವಕ್ತಾರ ಕರ್ನಲ್ ಜಾಂಗ್ ಷಿಯೋಗಾಂಗ್
Updated on

ಬೀಜಿಂಗ್: ಭಾರತದೊಂದಿಗಿನ ಇತ್ತೀಚಿನ ಸಂಘರ್ಷದಲ್ಲಿ ಪಾಕಿಸ್ತಾನ ಬಳಸಿದ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯಿಸಲು ಚೀನಾ ಸೇನೆ ಗುರುವಾರ ನಿರಾಕರಿಸಿದೆ.

ಚೀನಾ ರಕ್ಷಣಾ ಸಚಿವಾಲಯ ವಕ್ತಾರ ಕರ್ನಲ್ ಜಾಂಗ್ ಷಿಯೋಗಾಂಗ್ ಮಾತನಾಡಿ, ಭಾರತವು ಸ್ಫೋಟಗೊಳ್ಳದ PL-15E ಕ್ಷಿಪಣಿಯನ್ನು ವಶಪಡಿಸಿಕೊಂಡ ವರದಿಗಳನ್ನು ತಳ್ಳಿಹಾಕಿದ್ದು, ಇದು, ಚೀನಾ ತಯಾರಿಕೆಯ ಅತ್ಯುನ್ನತ ರಾಕೆಟ್ ಆಗಿದೆ’ ಎಂದು ಹೇಳಿದ್ದಾರೆ.

ನೀವು ಉಲ್ಲೇಖಿಸುತ್ತಿರುವ ಕ್ಷಿಪಣಿಯು ರಫ್ತು ಪರಿಕರವಾಗಿದೆ. ಇದನ್ನು ಹಲವು ಬಾರಿ ದೇಶದ ಒಳಗೆ ಮತ್ತು ಹೊರಗೆ ಹಲವು ಬಾರಿ ರಕ್ಷಣಾ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

ಚೀನಾವು ಪಾಕಿಸ್ತಾನಕ್ಕೆ ವಾಯು ರಕ್ಷಣಾ ವ್ಯವಸ್ಥೆ ಮತ್ತು ಉಪಗ್ರಹ ನೆರವು ಒದಗಿಸಿದೆ’ ಎಂಬ ಭಾರತದ ಅಧಿಕಾರಿಗಳ ಕುರಿತು ಗಮನಸೆಳೆದಾಗ, ನೇರ ಉತ್ತರ ನೀಡದ ಅವರು ‘ಭಾರತ–ಪಾಕ್‌ ನೆರೆ ರಾಷ್ಟ್ರಗಳು. ಅದನ್ನು ಬದಲಿಸಲಾಗದು ಎಂದರು.

ಉಭಯ ದೇಶಗಳು ಸಂಯಮ ಕಾಯ್ದುಕೊಳ್ಳಲಿವೆ ಮತ್ತು ಉದ್ವಿಗ್ನ ಪರಿಸ್ಥಿತಿಗೆ ಆಸ್ಪದ ನೀಡುವುದಿಲ್ಲ ಎಂದು ಚೀನಾ ಆಶಿಸಲಿದೆ ಎಂದು ಹೇಳಿದ್ದಾರೆ.

Chinese Defence Ministry Spokesperson Sr. Col. Zhang Xiaogang
Watch | ಭಾರತ-ಪಾಕಿಸ್ತಾನ ಯುದ್ಧ: ರಷ್ಯಾ ನಿರ್ಮಿತ ಶಸ್ತ್ರಾಸ್ತ್ರಗಳ ಬಗ್ಗೆ ಪುಟಿನ್ ಹೆಮ್ಮೆ

ಚೀನಾ ಪಾಕಿಸ್ತಾನದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರರಾಗಿದ್ದು, 2020 ಮತ್ತು 2024ರ ನಡುವೆ ತನ್ನ ಮಿಲಿಟರಿ ಉಪಕರಣಗಳಲ್ಲಿ ಶೇ.81ರಷ್ಟು ಪೂರೈಸುತ್ತಿದೆ. ಇವುಗಳಲ್ಲಿ ಫೈಟರ್​ಜೆಟ್​, ಕ್ಷಿಪಣಿಗಳು, ರಾಡಾರ್​ಗಳು ಮತ್ತು ಜಲಾಂತಗರ್ಗಮಿ ನೌಕೆಗಳು ಸೇರಿವೆ. ಚೀನಾ ಮತ್ತು ಪಾಕಿಸ್ತಾನ ಕೂಡ ಜೆಎಫ್ -17 ಯುದ್ಧವಿಮಾನವನ್ನು ಒಟ್ಟಾಗಿ ನಿರ್ಮಿಸುತ್ತವೆ, ಇದು ಪಾಕಿಸ್ತಾನದ ವಾಯುಪಡೆಯ ಪ್ರಮುಖ ಭಾಗವಾಗಿದೆ.

ಮೇ 7-10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ನಂತರ ಚೀನಾದ ರಕ್ಷಣಾ ಸಚಿವಾಲಯದ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ.

ಶಾಶ್ವತ ಕದನ ವಿರಾಮ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಚೀನಾ ತನ್ನ ಕಡೆಯಿಂದ ರಚನಾತ್ಮಕ ಪಾತ್ರವನ್ನು ವಹಿಸುವುದನ್ನು ಮುಂದುವರಿಸಲು ಸಿದ್ಧವಿದೆ ಎಂದು ಜಾಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಚೀನಾದ ರಕ್ಷಣಾ ಸಚಿವಾಲಯ ತಿಂಗಳಿಗೊಮ್ಮೆ ಪತ್ರಿಕಾಗೋಷ್ಠಿ ನಡೆಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com