
ಕಠ್ಮಂಡು: ನೇಪಾಳ ರಾಷ್ಟ್ರದಲ್ಲಿ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಜಾಲತಾಮಗಳ ಮೇಲೆ ನಿಷೇಧ ಹೇರಲಾಗಿದೆ.
ನೇಪಾಳ ಸರ್ಕಾರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸಲು ವಿಫಲವಾದ ಹಿನ್ನೆಲೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ನೋಂದಣಿಗೆ ನೇಪಾಳ ಸರ್ಕಾರ ಆ.28ರಂದು 7 ದಿನಗಳ ಗಡುವು ನೀಡಿತ್ತು. ಬುಧವಾರ ಸಮಯ ಅಂತ್ಯ ಹಿನ್ನೆಲೆಯಲ್ಲಿ ಮೆಟಾ ಒಡೆತನದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಯುಟ್ಯೂಬ್, ಎಕ್ಸ್, ರೆಡ್ಡಿಟ್, ಲಿಂಕ್ಸ್ ಇನ್, ಟಿಕ್‌ಟಾಕ್ ಸೇರಿದಂತೆ 26 ಸಾಮಾಜಿಕ ವೇದಿಕೆ ಗಳಿಗೆ ನಿರ್ಬಂಧ ವಿಧಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ, ಈ ಬಗ್ಗೆ ಮೆಟಾ ಸೇರಿದಂತೆ ಯಾವ ಸಂಸ್ಥೆಗಳೂ ಪ್ರತಿಕ್ರಿಯೆ ನೀಡಿಲ್ಲ.
Advertisement