
ಕೈವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ. ಕೈವ್ ನಗರದ ಮೇಲೆ ರಷ್ಯಾ ಕಳೆದ ರಾತ್ರಿ ನಡೆಸಿದ ದಾಳಿಯಲ್ಲಿ ಒಂದು ಶಿಶು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 18 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಸರ್ಕಾರದ ಕಟ್ಟಡ ಸೇರಿದಂತೆ ನೂರಾರು ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ. ಡ್ರೋನ್ ಹಾರಾಟದ ನಂತರ ದಾಳಿ ಪ್ರಾರಂಭವಾಯಿತು. ತದನಂತರ ಕ್ಷಿಪಣಿ ದಾಳಿಗಳು ಪ್ರಾರಂಭವಾದವು ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಮಾಹಿತಿ ನೀಡಿದ್ದಾರೆ.
ಗರ್ಭಿಣಿ ಮಹಿಳೆಯೊಬ್ಬರು ಸೇರಿದಂತೆ ಐವರು ದಾಖಲಾಗಿದ್ದ ಆಸ್ಪತ್ರೆ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಶಿಶು ಮತ್ತು ಯುವತಿಯೊಬ್ಬಳ ಹತ್ಯೆಯಾಗಿದೆ ಎಂದು ಕ್ಲಿಟ್ಸ್ಕೊ ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ ನಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನಾ ಡಾರ್ನಿಟ್ಸ್ಕಿ ಜಿಲ್ಲೆಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಡಾರ್ನಿಟ್ಸ್ಕಿಯ ನಾಲ್ಕು ಮಹಡಿಯ ವಸತಿ ಕಟ್ಟಡದ ಬೆಂಕಿ ಕಾಣಿಸಿಕೊಂಡಿದ್ದು, ಭಾಗಶ: ಕಟ್ಟಡವೇ ಹಾನಿಯಾಗಿದೆ ಎಂದು ರಾಜ್ಯ ತುರ್ತುಪರಿಸ್ಥಿತಿ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ದಾಳಿಯಿಂದ 16 ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡ ಮತ್ತು ಒಂಬತ್ತು ಅಂತಸ್ತಿನ ಎರಡು ಕಟ್ಟಡಗಳಿಗೆ ಬೆಂಕಿ ಬಿದ್ದಿದೆ. ತುರ್ತು ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ ಅಪಾರ್ಟ್‌ಮೆಂಟ್ ಕಟ್ಟಡಗಳಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ತೋರಿಸಲಾಗಿದೆ. ಕೆಲವು ಮಹಡಿಗಳು ಭಾಗಶಃ ಕುಸಿದಿದ್ದು, ಮುಂಭಾಗ ಪುಡಿಪುಡಿಯಾಗಿವೆ. ಸಾರಿಗೆ ಮತ್ತು ನಗರ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ ತುರ್ತು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಕ್ಷಿಪಣಿ ದಾಳಿ ನಂತರ ಉಕ್ರೇನ್ ರಾಜಧಾನಿ ಕೈವ್‌ನಲ್ಲಿನ ಆಡಳಿತ ಕಟ್ಟಡದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆ ರಾಷ್ಟ್ರದ ಮಿಲಿಟರಿ ಆಡಳಿತದ ಮುಖ್ಯಸ್ಥ ತೈಮೂರ್ ಟ್ಕಾಚೆಂಕೊ ಭಾನುವಾರ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಉಕ್ರೇನ್ ಸರ್ಕಾರದ ಪ್ರಮುಖ ಕಟ್ಟಡದಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಹಲವು ಮಂದಿ ನೋಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಉಕ್ರೇನ್ ನಿಂದ ಪ್ರತೀಕಾರ: ಪ್ರತೀಕಾರವಾಗಿ ರಷ್ಯಾದ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಪ್ರತಿ-ಆಕ್ರಮಣ ಪ್ರಾರಂಭಿಸಿದ ಉಕ್ರೇನ್, ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಡ್ರುಜ್ಬಾ ತೈಲ ಪೈಪ್‌ಲೈನ್ ಅನ್ನು ಧ್ವಂಸಗೊಳಿಸಿದೆ. ಭಾರಿ ಬೆಂಕಿಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಉಕ್ರೇನ್ ಡ್ರೋನ್ ಪಡೆಯ ಕಮಾಂಡರ್ ರಾಬರ್ಟ್ ಬ್ರೋವ್ಡಿ ತಿಳಿಸಿದ್ದಾರೆ.
Advertisement