'ನಮಗೆ ಒಳ್ಳೆಯ ಉದ್ದೇಶ ಇದೆ, ಆದರೆ ಅಮೆರಿಕಾವನ್ನು ನಂಬಲು ಸಾಧ್ಯವಿಲ್ಲ': ಇರಾನ್

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರ ನೇತೃತ್ವದ ಪ್ರತಿನಿಧಿ ಮಂಡಳಿ, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗೆ, ಇಸ್ಲಾಮಾಬಾದ್ ಮಾತುಕತೆಯಲ್ಲಿ ಭಾಗವಹಿಸಲಿದೆ.
Security in Islamabad
ಇಸ್ಲಾಮಾಬಾದ್ ನಲ್ಲಿ ಭದ್ರತೆ ಹೆಚ್ಚಳ
Updated on

ಇರಾನ್ ಪ್ರತಿನಿಧಿ ಮಂಡಳಿ ಇಂದು ಶನಿವಾರ ಮುಂಜಾನೆ ಇಸ್ಲಾಮಾಬಾದ್ ಗೆ ಆಗಮಿಸಿದ್ದು, ಅಮೆರಿಕದೊಂದಿಗೆ ಮಾತುಕತೆಗಳಿಗೆ ಸಜ್ಜಾಗಿದೆ. ಎರಡು ದೇಶಗಳ ನಡುವಿನ ಸಂಘರ್ಷ ಅಂತ್ಯಗೊಳ್ಳುವ ಒಪ್ಪಂದದ ನಿರೀಕ್ಷೆಯಲ್ಲಿ ಜಗತ್ತು ಕಾತರದಿಂದ ಕಾದಿದೆ.

ಮೊನ್ನೆ ಬುಧವಾರ ಎರಡು ವಾರಗಳ ಯುದ್ಧ ವಿರಾಮ ಘೋಷಿಸಿದ ವೇಳೆ, ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಅಮೆರಿಕಾ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್‌ನಲ್ಲಿ ಮಾತುಕತೆಗಳು ನಡೆಯಲಿವೆ ಎಂದು ತಿಳಿಸಿದ್ದರು.

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರ ನೇತೃತ್ವದ ಪ್ರತಿನಿಧಿ ಮಂಡಳಿ, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗೆ, ಇಸ್ಲಾಮಾಬಾದ್ ಮಾತುಕತೆಯಲ್ಲಿ ಭಾಗವಹಿಸಲಿದೆ.

ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದಂತೆ, ಇರಾನ್ ಪ್ರತಿನಿಧಿ ಮಂಡಳಿಯನ್ನು ಉಪ ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್, ರಾಷ್ಟ್ರೀಯ ಸಭೆಯ ಸ್ಪೀಕರ್ ಆಯಾಜ್ ಸಾದಿಕ್, ರಕ್ಷಣಾ ಪಡೆಗಳ ಮುಖ್ಯಸ್ಥ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸಯ್ಯದ್ ಆಸಿಂ ಮುನೀರ್, ಮತ್ತು ಗೃಹ ಸಚಿವ ಸಯ್ಯದ್ ಮೊಹ್ಸಿನ್ ರಝಾ ನಕ್ವಿ ಅವರು ಸ್ವಾಗತಿಸಿದರು.

ಇರಾನ್ ಇಸ್ಲಾಮಿಕ್ ಗಣರಾಜ್ಯದ ಉನ್ನತ ಮಟ್ಟದ ಪ್ರತಿನಿಧಿ ಮಂಡಳಿ, ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರ ನೇತೃತ್ವದಲ್ಲಿ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗೆ, ಇಂದೇ ಇಸ್ಲಾಮಾಬಾದ್‌ಗೆ ಆಗಮಿಸಿದ್ದು, ಇಸ್ಲಾಮಾಬಾದ್ ಮಾತುಕತೆಯಲ್ಲಿ ಭಾಗವಹಿಸಲಿದೆ ಎಂದು ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

Security in Islamabad
ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಇಂದು ಸಂಧಾನ ಮಾತುಕತೆ; Video

ಇರಾನ್‌ಗೆ ಸದಭಿಪ್ರಾಯ ಇದೆ, ಆದರೆ ಅಮೆರಿಕದ ಮೇಲೆ ವಿಶ್ವಾಸ ಇಲ್ಲ: ಸಂಸತ್ ಸ್ಪೀಕರ್

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಕರ್ ಖಾಲಿಬಾಫ್ ಅವರು, ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇಂದು ನಡೆಯಲಿರುವ ಇರಾನ್–ಅಮೆರಿಕಾ ಮಾತುಕತೆಗಳ ಹಿನ್ನೆಲೆ, ಅಮೆರಿಕದ ಮೇಲೆ ಇರುವ ಅವಿಶ್ವಾಸವನ್ನು ಪುನರುಚ್ಚರಿಸಿದ್ದಾರೆ ಎಂದು ಇರಾನ್‌ನ ತಸ್ನೀಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಒಂದು ವರ್ಷದೊಳಗೆ ಎರಡು ಬಾರಿ, ಮಾತುಕತೆಗಳ ಮಧ್ಯದಲ್ಲಿಯೇ, ಇರಾನ್ ಉತ್ತಮ ನಂಬಿಕೆ ತೋರಿದ್ದರೂ ಅವರು ನಮ್ಮ ಮೇಲೆ ದಾಳಿ ನಡೆಸಿ ಅನೇಕ ಅಪರಾಧಗಳನ್ನು ಎಸಗಿದ್ದಾರೆ ಎಂದು ಅವರು ಹೇಳಿದರು.

ನಮಗೆ ಸದಭಿಪ್ರಾಯ ಇದೆ, ಆದರೆ ಅಮೆರಿಕದ ಮೇಲೆ ವಿಶ್ವಾಸ ಇಲ್ಲ ಎಂದು ಖಾಲಿಬಾಫ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.

Security in Islamabad
Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ, ಇರಾನ್ ಪ್ರತಿನಿಧಿ ಮಂಡಳಿಯನ್ನು ನೇತೃತ್ವ ವಹಿಸಿರುವ ಮೊಹಮ್ಮದ್ ಬಾಕರ್ ಖಾಲಿಬಾಫ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅಮೆರಿಕದೊಂದಿಗೆ ನಡೆದ ಹಿಂದಿನ ಅನುಭವಗಳನ್ನು ಉಲ್ಲೇಖಿಸಿದರು.

“ನಮಗೆ ಸದಭಿಪ್ರಾಯ ಇದೆ, ಆದರೆ ಅಮೆರಿಕದ ಮೇಲೆ ವಿಶ್ವಾಸ ಇಲ್ಲ ಎಂದರು. ಖಾಲಿಬಾಫ್ ಅವರು, ಅಮೆರಿಕಾ ಇರಾನ್ ಜನರ ಹಕ್ಕುಗಳನ್ನು ಒಪ್ಪಿಕೊಂಡರೆ ಮಾತ್ರ ಒಪ್ಪಂದ ಸಾಧ್ಯವಾಗಬಹುದು ಎಂದು ಹೇಳಿ, ಮಾತುಕತೆಯಲ್ಲಿ ಮುಂದುವರಿಯಲು ಷರತ್ತಿನೊಂದಿಗೆ ಸಿದ್ಧತೆ ತೋರಿಸಿದರು.

ಆದರೆ, ಮಾತುಕತೆಯನ್ನು ಅಮೆರಿಕಾ “ನಾಟಕ” ಅಥವಾ “ಮೋಸದ ಕಾರ್ಯಾಚರಣೆ” ಎಂದು ಬಳಸಿದರೆ, ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಇರಾನ್ ತನ್ನ ಸ್ವಂತ ಸಾಮರ್ಥ್ಯಗಳ ಮೇಲೆ ಅವಲಂಬಿಸಲಿದೆ ಎಂದು ಅವರು ಎಚ್ಚರಿಸಿದರು. ಇತ್ತೀಚಿನ ಸಂಘರ್ಷದ ವೇಳೆ ಇರಾನ್ ಕೈಗೊಂಡ ರಕ್ಷಣಾತ್ಮಕ ಮತ್ತು ಪ್ರತಿಕ್ರಿಯಾತ್ಮಕ ಕ್ರಮಗಳು ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಮತ್ತು ಬೆದರಿಕೆಗಳಿಗೆ ಕಠಿಣ ಪ್ರತಿಕ್ರಿಯೆ ನೀಡಲು ಸಿದ್ಧತೆ ಹೊಂದಿರುವುದನ್ನು ತೋರಿಸುತ್ತವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com