ತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡ ಟ್ರಂಪ್: ಜೀಸಸ್‌ ರೂಪದಲ್ಲಿ ಫೋಟೋ ಪೋಸ್ಟ್, ಭಾರೀ ಟೀಕೆ

ಚಿತ್ರದಲ್ಲಿ ಟ್ರಂಪ್ ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ. ಇದು ಬೈಬಲ್‌ನಲ್ಲಿ ಯೇಸು ಕ್ರಿಸ್ತ ಲಾಜರಸ್‌ರನ್ನು ಜೀವಂತಗೊಳಿಸಿದ ಘಟನೆಯನ್ನು ಹೋಲುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
Trump social media post
ಟ್ರಂಪ್ ಪೋಸ್ಟ್
Updated on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ತಾವು ಯೇಸು ಕ್ರಿಸ್ತನಂತೆ ಬಿಂಬಿಸುವ ಎಐ-ಸೃಷ್ಟಿತ (AI-generated) ಚಿತ್ರವೊಂದನ್ನು ಹಂಚಿಕೊಂಡಿದ್ದು, ಈ ಚಿತ್ರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಚಿತ್ರದಲ್ಲಿ ಟ್ರಂಪ್ ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ. ಇದು ಬೈಬಲ್‌ನಲ್ಲಿ ಯೇಸು ಕ್ರಿಸ್ತ ಲಾಜರಸ್‌ರನ್ನು ಜೀವಂತಗೊಳಿಸಿದ ಘಟನೆಯನ್ನು ಹೋಲುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಚಿತ್ರದ ಹಿನ್ನೆಲೆಯಲ್ಲಿ ಅಮೆರಿಕದ ಧ್ವಜ, ಯುದ್ಧ ವಿಮಾನಗಳು ಮತ್ತು ದೇವದೂತರ ಆಕೃತಿಗಳಿರುವುದು ಕಂಡು ಬಂದಿದೆ.

ಪೋಪ್ ಲಿಯೋ XIV (Pope Leo XIV) ಅವರು ಇರಾನ್ ಯುದ್ಧದ ವಿಷಯದಲ್ಲಿ ಅಮೆರಿಕದ ಕ್ರಮಗಳನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್ ಅವರು ಪೋಪ್ ಅವರನ್ನು "ದುರ್ಬಲ" ಎಂದು ಕರೆದಿದ್ದರು.

Trump social media post
ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

“ಪೋಪ್ ಅವರನ್ನು ದುರ್ಬಲ ಎಂದು ಟೀಕಿಸಿದ್ದ ಅವರು, ವಿದೇಶಾಂಗ ನೀತಿಯ ಕುರಿತು ಏನೂ ಗೊತ್ತಿಲ್ಲ. ನಾನು ಅವರ ಅಭಿಯಾನಿಯಲ್ಲ, ಅವರು ಪೋಪ್ ಆಗಿ ತಮ್ಮ ಕಾರ್ಯವನ್ನು ಮಾಡಿದರೆ ಸಾಕು ಎಂದು ಹೇಳಿದ್ದರು. ಅಲ್ಲದೆ, “ನಾನು ಅಧ್ಯಕ್ಷನಾಗಿರದಿದ್ದರೆ ಲಿಯೋ ಪೋಪ್ ಆಗಿರಲಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ವಿವಾದಾತ್ಮಕ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅನೇಕ ಕ್ರಿಶ್ಚಿಯನ್ ಗುಂಪುಗಳು ಮತ್ತು ಟೀಕಾಕಾರರು ಇದು ಧರ್ಮಕ್ಕೆ ಮಾಡಿದ ಅಪಮಾನ ಎಂದು ಹೇಳುತ್ತಿದ್ದರೆ, ಅವರ ಬೆಂಬಲಿಗರು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com