ಶಾಂತಿ ಒಪ್ಪಂದವಾಗದಿದ್ದರೆ ಹಾರ್ಮೂಜ್ ನೌಕಾ ದಿಗ್ಬಂಧನ ಮುಂದುವರಿಕೆ: ಇರಾನ್'ಗೆ ಟ್ರಂಪ್ ತಿರುಗೇಟು

ಕದನ ವಿರಾಮವನ್ನು ಮುಂದುವರಿಸಬೇಕೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಅಮೆರಿಕಾ ಪ್ರಸ್ತುತ ಹೇರಿರುವ ನೌಕಾ ದಿಗ್ಬಂಧನವನ್ನು ಮುಂದುವರಿಸುತ್ತದೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕಾ ಇರಾನ್ ಬಂದರುಗಳ ಮೇಲೆ ವಿಧಿಸಿರುವ ನೌಕಾ ದಿಗ್ಬಂಧನ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ್ದು, ಶಾಂತಿ ಒಪ್ಪಂದವಾಗದಿದ್ದರೆ ಪ್ರಸ್ತುತದ ಕದನ ವಿರಾಮವನ್ನೂ ವಿಸ್ತರಿಸದಂತಾಗಬಹುದು ಎಂದು ಹೇಳಿದ್ದಾರೆ.

ಎರ್ ಫೋರ್ಸ್ ಒನ್ ವಿಮಾನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ಕದನ ವಿರಾಮವನ್ನು ಮುಂದುವರಿಸಬೇಕೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಅಮೆರಿಕಾ ಪ್ರಸ್ತುತ ಹೇರಿರುವ ನೌಕಾ ದಿಗ್ಬಂಧನವನ್ನು ಮುಂದುವರಿಸುತ್ತದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಶಾಂತಿ ಒಪ್ಪಂದದ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದು, “ಒಪ್ಪಂದ ಬಹುತೇಕ ಸಾಧ್ಯವಾಗುವ ಹಂತದಲ್ಲಿದೆ,” ಎಂದು ಹೇಳಿದ್ದಾರೆ.

ಇದರ ಜೊತೆಗೆ, ಮೇ ತಿಂಗಳಲ್ಲಿ ಬೀಜಿಂಗ್‌ನಲ್ಲಿ ಯೋಜಿಸಲಾದ ಶೃಂಗಸಭೆಯ ಕುರಿತು ಮಾತನಾಡಿರುವ ಟ್ರಂಪ್ ಅವರು, ಜಾಗತಿಕ ಇಂಧನ ಸರಬರಾಜು ಪುನಃ ಆರಂಭವಾದ ಹಿನ್ನೆಲೆಯಲ್ಲಿ ಚೀನಾ ಸಂತಸದಲ್ಲಿದೆ. ಚೀನಾದಲ್ಲಿ ನಡೆಯುವ ಸಭೆ ವಿಶೇಷವಾದದ್ದು ಮತ್ತು ಸಂಭಾವ್ಯವಾಗಿ ಐತಿಹಾಸಿಕವಾಗಿರುತ್ತದೆ ಎಂದು ಹೇಳಿದ್ದಾರೆ.

ಇಸ್ರೇಲ್–ಲೆಬನಾನ್ ಕದನ ವಿರಾಮದ ನಂತರ ಇರಾನ್, ಸ್ಟ್ರೇಟ್ ಆಫ್ ಹಾರ್ಮುಜ್ ಮಾರ್ಗವನ್ನು ಪುನಃ ತೆರೆದಿದ್ದು, ಈ ಬೆಳವಣಿಗೆಯಿಂದ ತಾತ್ಕಾಲಿಕವಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಆಶಾವಾದ ಮೂಡಿಸಿತ್ತು.

ಆದರೆ, ಅಮೆರಿಕಾ ತನ್ನ ನೌಕಾಪಡೆಯ ಮೂಲಕ ಇರಾನ್ ಬಂದರುಗಳಿಗೆ ಹೋಗುವ ಹಡಗುಗಳನ್ನು ತಡೆದರೆ, ಹಾರ್ಮುಜ್ ಮಾರ್ಗವನ್ನು ಮತ್ತೆ ಮುಚ್ಚಲಾಗುವುದು ಎಂದು ಇರಾನ್ ಎಚ್ಚರಿಕೆ ನೀಡಿದೆ.

Donald Trump
ಅಮೆರಿಕಾ ನೌಕಾ ದಿಗ್ಬಂಧನ ಮುಂದುವರೆಸಿದರೆ ಹಾರ್ಮುಜ್ ಜಲಸಂಧಿ ಬಂದ್: ಇರಾನ್ ಎಚ್ಚರಿಕೆ, ಇಂಧನ ಮಾರುಕಟ್ಟೆ ಮತ್ತೆ ಅಸ್ಥಿರ..!

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಅವರು ಮಾತನಾಡಿ, ಅಮೆರಿಕಾ ನೌಕಾಪಡೆಯು ಇರಾನ್ ಬಂದರುಗಳಿಗೆ ಹೋಗುವ ಹಡಗುಗಳನ್ನು ತಡೆಯುವ ಕ್ರಮ ಕೈಗೊಂಡರೆ, ಸ್ಟ್ರೇಟ್ ಆಫ್ ಹೋರ್ಮುಜ್ ತೆರೆಯಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಮಾರ್ಗ ತೆರೆಯುವುದು ಅಥವಾ ಮುಚ್ಚುವುದು ಸಾಮಾಜಿಕ ಜಾಲತಾಣಗಳಲ್ಲಿ ನಿರ್ಧಾರವಾಗುವುದಿಲ್ಲ, ನೆಲದ ಪರಿಸ್ಥಿತಿಯೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಅಗತ್ಯವಾದ ಪ್ರತಿಕ್ರಿಯೆ ನೀಡಲು ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಎಸ್ಮಾಯಿಲ್ ಬಘಾಈ ಅಮೆರಿಕಾ ತಡೆ ಕ್ರಮವನ್ನು ಯುದ್ಧ ವಿರಾಮದ ಉಲ್ಲಂಘನೆ ಎಂದು ಕರೆದಿದ್ದು, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸ್ಟ್ರೇಟ್ ಆಫ್ ಹಾರ್ಮುಜ್ ಜಾಗತಿಕ ಇಂಧನ ಸಾಗಣೆಯಲ್ಲಿ ಅತ್ಯಂತ ಪ್ರಮುಖ ಕೇಂದ್ರವಾಗಿದ್ದು, ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ದ್ರವೀಕೃತ ಪ್ರಕೃತಿ ಅನಿಲ (LNG) ಸಾಗಣೆಯ ಸುಮಾರು 20 ಶೇಕಡಾ ಈ ಮಾರ್ಗದ ಮೂಲಕವೇ ಸಾಗುತ್ತದೆ.

ಈ ಮಾರ್ಗದಲ್ಲಿ ವ್ಯತ್ಯಯ ಉಂಟಾದರೆ ತೈಲ ಬೆಲೆಗಳು ಏರಿಕೆಯಾಗುವುದು, ಸಾಗಣೆ ವ್ಯತ್ಯಯಗಳು ಮತ್ತು ಅನೇಕ ದೇಶಗಳ ಆರ್ಥಿಕತೆಗೆ ಹೊಡೆತ ಬೀಳಲಿದೆ.

ಇನ್ನೊಂದೆಡೆ, ಅಮೆರಿಕಾ ಇರಾನ್‌ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಇದನ್ನು ಟ್ರಂಪ್ ಸಾರ್ವಜನಿಕವಾಗಿ ಉಲ್ಲೇಖಿಸಿದ್ದಾರೆ. ಆದರೆ, ಈ ವಿಚಾರವನ್ನು ಇರಾನ್ ತಳ್ಳಿಹಾಕಿದ್ದು, ನಮ್ಮ ಯುರೇನಿಯಂ ಎಲ್ಲಿಯೂ ಹೋಗುವುದಿಲ್ಲ, ಅಂತಹ ಯಾವುದೇ ಪ್ರಸ್ತಾಪವು ಮಾತುಕತೆಗಳಲ್ಲಿ ಎಂದಿಗೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com