

ಟೆಹ್ರಾನ್: ವಿಶ್ವದ ದೊಡ್ಡಣ್ಣ ಅಮೆರಿಕದ ದಿಗ್ಬಂಧನವನ್ನು ಧಿಕ್ಕರಿಸಿ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಿಸಲು ಆರಂಭಿಸಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆಗೆ ವಿಧಿಸುತ್ತಿರುವ ಸುಂಕದಿಂದ ಇರಾನ್ ಮೊದಲ ಆದಾಯವನ್ನು ಪಡೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ,
ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಅಮೆರಿಕ-ಇಸ್ರೇಲಿ ಜಂಟಿಯಾಗಿ ನಡೆಸುತ್ತಿರುವ ಯುದ್ಧದಿಂದ ಇಡೀ ಜಗತ್ತಿನ ಆರ್ಥಿಕತೆ ಜರ್ಜರಿತಗೊಳ್ಳುತ್ತಿದೆ. ವೈಮಾನಿಕ ಇಂಧನ ಕೊರತೆ ಮತ್ತು ಬೆಲೆ ಹೆಚ್ಚಳದಿಂದ ವಿಮಾನಯಾನ ಸಂಸ್ಥೆಗಳು ವಿಮಾನಗಳ ಕಾರ್ಯಾಚರಣಯನ್ನೇ ರದ್ದುಗೊಳಿಸಿವೆ.
ತನ್ನ ಬಂದರುಗಳ ಮೇಲೆ ನೌಕಾ ದಿಗ್ಬಂಧನವನ್ನು ಮುಂದುವರೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಸ್ವಲ್ಪ ಸಮಯಲ್ಲೇ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಗೆ ಬಂದ್ ಮಾಡಿದೆ. ಅಲ್ಲದೆ ದಿಗ್ಬಂಧನ ತೆರವುಗೊಳಿಸುವವರೆಗೆ ಅನುಮೋದಿತ ಹಡಗುಗಳನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ.
ಇದೀಗ ಟ್ರಂಪ್ ಗೆ ಮತ್ತೊಂದು ಡಿಚ್ಚಿ ನೀಡಿರುವ ಟೆಹ್ರಾನ್, ಹಾರ್ಮುಜ್ ಅನ್ನು ದಾಟಲು ಬಯಸುವ ಹಡಗುಗಳ ಮೇಲೆ ವಿಧಿಸುತ್ತಿರುವ ಸುಂಕದಿಂದ ಇರಾನ್ ತನ್ನ ಮೊದಲ ಆದಾಯವನ್ನು ಪಡೆದುಕೊಂಡಿದೆ ಎಂದು ಗಾಲಿಬಾಫ್‌ನ ಉಪ, ಹಮೀದ್ರೆಜ್ ಹಾಜಿಬಾಬೆಯ್ ಅವರು ಹೇಳಿದ್ದಾರೆ.
Advertisement