ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನಕ್ಕೆ 'ವಿಶ್ವಾಸಾರ್ಹತೆ' ಇಲ್ಲ: ಇರಾನ್‌

ಇಸ್ಲಾಮಾಬಾದ್ ಈಗಾಗಲೇ ವಾಷಿಂಗ್ಟನ್‌ನೊಂದಿಗೆ ತುಂಬಾ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಇರಾನ್ ಮತ್ತು ಅಮೆರಿಕ ನಡುವೆ ಪರಿಣಾಮಕಾರಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸೂಚಿಸಿದ್ದಾರೆ.
Pakistan PM Shehbaz Sharif - Field Marshal Asim Munir
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ - ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್
Updated on

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗೆ ಪ್ರಗತಿ ಸಾಧಿಸಲು ರಾಜತಾಂತ್ರಿಕ ಪ್ರಯತ್ನಗಳು ಮುಂದುವರೆದಿರುವಂತೆಯೇ, ತಟಸ್ಥ ಮಧ್ಯವರ್ತಿಯಾಗಿ ಪಾಕಿಸ್ತಾನದ ಪಾತ್ರದ ಬಗ್ಗೆ ಇರಾನ್‌ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗದ ವಕ್ತಾರ ಇಬ್ರಾಹಿಂ ರೆಝಾಯಿ ಗಮನಾರ್ಹ ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ಲಾಮಾಬಾದ್ ಈಗಾಗಲೇ ವಾಷಿಂಗ್ಟನ್‌ನೊಂದಿಗೆ ತುಂಬಾ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಇರಾನ್ ಮತ್ತು ಅಮೆರಿಕ ನಡುವೆ ಪರಿಣಾಮಕಾರಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸೂಚಿಸಿದ್ದಾರೆ.

X ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ದಾಶೆಸ್ತಾನ್ ಪ್ರತಿನಿಧಿ, 'ಪಾಕಿಸ್ತಾನ ನಮ್ಮ ಉತ್ತಮ ಸ್ನೇಹಿತ ಮತ್ತು ನೆರೆ ದೇಶ. ಆದರೆ, ಅದು ಮಾತುಕತೆಗಳಿಗೆ ಸೂಕ್ತ ಮಧ್ಯವರ್ತಿಯಲ್ಲ ಮತ್ತು ಅಗತ್ಯವಾದ ವಿಶ್ವಾಸಾರ್ಹತೆಯ ಕೊರತೆಯಿದೆ. ಪಾಕಿಸ್ತಾನದ ಅಧಿಕಾರಿಗಳು 'ಯಾವಾಗಲೂ ಟ್ರಂಪ್ ಅವರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ ಮತ್ತು ಅಮೆರಿಕನ್ನರ ಇಚ್ಛೆಗೆ ವಿರುದ್ಧವಾಗಿ ಮಾತನಾಡುವುದಿಲ್ಲ' ಎಂದು ಅವರು ಆರೋಪಿಸಿದರು.

ಮಧ್ಯಸ್ಥಿಕೆ ಪ್ರಕ್ರಿಯೆಯು ಅನ್ಯಾಯ ಮತ್ತು ಪಕ್ಷಪಾತದಿಂದ ಕೂಡಿದೆ ಎಂದು ರೆಝಾಯಿ ಹೇಳುತ್ತಿದ್ದಾರೆ. ಲೆಬನಾನ್‌ಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ನಿರ್ಬಂಧಿತ ಸ್ವತ್ತುಗಳಂತಹ ಅಮೆರಿಕ ಮಾಡಿದ ಬದ್ಧತೆಗಳನ್ನು ಮಧ್ಯವರ್ತಿಗಳು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿಲ್ಲ. ಮಧ್ಯವರ್ತಿಗಳು ತಟಸ್ಥರಾಗಿರಬೇಕು, ಆದರೆ ಈ ಸಂದರ್ಭದಲ್ಲಿ, ಅವರು ಸಮತೋಲನದಿಂದ ಇರುವ ಬದಲು ಒಂದು ಕಡೆಗೆ ಒಲವು ತೋರುತ್ತಿದ್ದಾರೆ. ಮಧ್ಯವರ್ತಿಯು ನಿಷ್ಪಕ್ಷಪಾತವಾಗಿರಬೇಕು, ಯಾವಾಗಲೂ ಒಂದು ಕಡೆ ವಾಲಬಾರದು ಎಂದು ಅವರು ಗಮನಿಸಿದರು.

Pakistan PM Shehbaz Sharif - Field Marshal Asim Munir
'ನಾನು ಅತ್ಯಾಚಾರಿ, ಶಿಶುಕಾಮಿ ಅಲ್ಲ': 'ಶೂಟರ್‌ನ ಪ್ರಣಾಳಿಕೆ ಓದಿದ್ದಕ್ಕೆ' ವರದಿಗಾರನ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ

ಮಾತುಕತೆಗಳ ಮೊಮೆಂಟಮ್ ಅನ್ನು ಉಳಿಸಿಕೊಳ್ಳಲು ಇತ್ತೀಚೆಗೆ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರ ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ ಈ ಹೇಳಿಕೆಗಳು ಬಂದಿವೆ. ಈ ಸಮಯದಲ್ಲಿ, ಅರಘ್ಚಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರಾದೇಶಿಕ ಸಂಘರ್ಷವನ್ನು ಪರಿಹರಿಸುವ ಸಂಭಾವ್ಯ ಮಾರ್ಗಗಳನ್ನು ಅನ್ವೇಷಿಸಲು ತೊಡಗಿಸಿಕೊಂಡರು.

ಪಾಕಿಸ್ತಾನಕ್ಕೆ ಆಗಮಿಸುವ ಮೊದಲು, ಅರಘ್ಚಿ ಒಮಾನ್‌ನಲ್ಲಿ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅಲ್ ಸೈದ್ ಅವರೊಂದಿಗೆ ಸಮಾಲೋಚನೆಗಳನ್ನು ನಡೆಸಿದ್ದರು. ಸಮುದ್ರ ಸುರಕ್ಷತೆ ಮತ್ತು ವಿಶಾಲ ರಾಜತಾಂತ್ರಿಕ ಚೌಕಟ್ಟುಗಳ ಮೇಲೆ ಗಮನ ಕೇಂದ್ರೀಕರಿಸಿದ್ದರು. ಚರ್ಚೆಗಳು ಸಾಂಪ್ರದಾಯಿಕ ಪರಮಾಣು ಬಿಕ್ಕಟ್ಟನ್ನು ಮೀರಿ 'ಜಲಸಂಧಿಗೆ ಹೊಸ ಕಾನೂನು ಚೌಕಟ್ಟು' ಹಾಗೂ ಪರಿಹಾರ, ಭದ್ರತಾ ಭರವಸೆಗಳು ಮತ್ತು ಯುಎಸ್ ನೌಕಾ ನಿರ್ಬಂಧಗಳನ್ನು ತೆಗೆದುಹಾಕುವ ಬೇಡಿಕೆಗಳನ್ನು ಒಳಗೊಂಡಿವೆ ಎಂದು ವರದಿಯಾಗಿದೆ.

ಮಾತುಕತೆಗಳ ವೇಗ ನಿಧಾನವಾಗುತ್ತಿರುವಂತೆ ಕಂಡುಬರುತ್ತಿದ್ದರೂ, ಇರಾನ್ ವಿದೇಶಾಂಗ ಸಚಿವರು ಹೆಚ್ಚಿನ ಉನ್ನತ ಮಟ್ಟದ ಮಾತುಕತೆಗಳಿಗಾಗಿ ಮಾಸ್ಕೋಗೆ ಪ್ರಯಾಣ ಬೆಳೆಸಿದ್ದಾರೆ. ವಾಷಿಂಗ್ಟನ್‌ನ ನಿಲುವಿನಲ್ಲಿ ಇತ್ತೀಚೆಗೆ ಬದಲಾವಣೆಯಾಗಿದೆ. ಪಾಕಿಸ್ತಾನಕ್ಕೆ ಅಮೆರಿಕದ ನಿಯೋಗದ ಪ್ರಸ್ತಾವಿತ ಭೇಟಿಯನ್ನು ರದ್ದುಗೊಳಿಸಿದ್ದೇನೆ. ಇರಾನ್ ಮಾತುಕತೆ ನಡೆಸಲು ಬಯಸಿದರೆ 'ಸಂಪರ್ಕವನ್ನು ಪ್ರಾರಂಭಿಸಬಹುದು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com