ವಿಜ್ಞಾನಿಗಳಿಗೇ ಶಾಕ್; ಸುರಕ್ಷಿತ ಸ್ಯಾಂಡ್‌ಬಾಕ್ಸ್‌ನಿಂದ ಹೊರಬಂದ ಚೀನಾದ ಅತ್ಯಂತ ಶಕ್ತಿಶಾಲಿ Ai ಮಾದರಿ: ವರದಿ

ಚೀನಾದ ಮೂನ್‌ಶಾಟ್ ಎಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಶಕ್ತಿಶಾಲಿ ಕೃತಕ ಬುದ್ಧಿಮತ್ತೆ ಮಾದರಿ ಕಿಮಿ ಕೆ3, ಸೈಬರ್‌ ಸುರಕ್ಷತಾ ಮೌಲ್ಯಮಾಪನದ ವೇಳೆ ಸುರಕ್ಷಿತ ಪರೀಕ್ಷಾ ಪರಿಸರದಿಂದ ಹೊರಬಂದು ಇಂಟರ್‌ನೆಟ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ
Most Powerful AI Models Escaped Its Secure Sandbox
ಸಾಂದರ್ಭಿಕ ಚಿತ್ರ
Updated on

ಬೀಜಿಂಗ್: ನಟ ಉಪೇಂದ್ರ ಅಭಿನಯದ ಹಾಲಿವುಡ್ ಚಿತ್ರವನ್ನೇ ನೆನಪಿಸುವ ಘಟನೆಯೊಂದು ಚೀನಾದಲ್ಲಿ ನಡೆದಿದ್ದು, ವಿಜ್ಞಾನಿಗಳು ತಯಾರಿಸಿದ್ದ ಅತ್ಯಂತ ಶಕ್ತಿಶಾಲಿ ಎಐ ಮಾದರಿಯೊಂದು ಸಂಶೋಧಕರ ಆಜ್ಞೆಗೆ ವಿರುದ್ಧವಾಗಿ ಸುರಕ್ಷಿತ ಸ್ಯಾಂಡ್‌ಬಾಕ್ಸ್‌ನಿಂದ ಹೊರಬಂದಿದೆ.

ಹೌದು.. ಚೀನಾದ ಮೂನ್‌ಶಾಟ್ ಎಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಶಕ್ತಿಶಾಲಿ ಕೃತಕ ಬುದ್ಧಿಮತ್ತೆ ಮಾದರಿ ಕಿಮಿ ಕೆ3, ಸೈಬರ್‌ ಸುರಕ್ಷತಾ ಮೌಲ್ಯಮಾಪನದ ವೇಳೆ ಸುರಕ್ಷಿತ ಪರೀಕ್ಷಾ ಪರಿಸರದಿಂದ ಹೊರಬಂದು ಇಂಟರ್‌ನೆಟ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ ಎಂದು ಸೈಬರ್‌ ಸುರಕ್ಷತಾ ಸಂಶೋಧಕರು ತಿಳಿಸಿದ್ದಾರೆ.

ಈ ಬಗ್ಗೆ ವೈರ್ಡ್ ವರದಿ ಮಾಡಿದ್ದು, ಅಮೆರಿಕದ ಸ್ಟಾರ್ಟ್‌ಅಪ್ ಫ್ರಾಂಟಿಯರ್ ಸೆಕ್ಯುರಿಟಿ ಕಿಮಿ ಕೆ3ನ ಸೈಬರ್‌ ಸುರಕ್ಷತಾ ರಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಾದರಿಯನ್ನು ಪ್ರತ್ಯೇಕವಾಗಿಡಬೇಕಿದ್ದ ಸ್ಯಾಂಡ್‌ಬಾಕ್ಸ್ ವ್ಯವಸ್ಥೆಯಲ್ಲಿನ ದೌರ್ಬಲ್ಯವನ್ನು ಕಿಮಿ ಕೆ3 ಪತ್ತೆಹಚ್ಚಿದೆ. ಬಳಿಕ ಆ ದಾರಿಯನ್ನು ಬಳಸಿಕೊಂಡು ತನಗೆ ನೀಡಲಾಗಿದ್ದ ಕಾರ್ಯಗಳಿಗೆ ಉತ್ತರ ಹುಡುಕಲು ಆನ್‌ಲೈನ್‌ನಲ್ಲಿ ಮಾಹಿತಿ ಹುಡುಕಿದೆ ಎಂದು ಸಂಶೋಧಕರು ಹೇಳಿದ್ದಾರೆ.

Most Powerful AI Models Escaped Its Secure Sandbox
ಎಗ್ಗಿಲ್ಲದ AI ಕಂಟೆಂಟ್, ಡೀಪ್‌ಫೇಕ್‌ಗಳಿಗೆ ಬ್ರೇಕ್: ಸಾಮಾಜಿಕ ಜಾಲತಾಣಗಳಿಗೆ ಕೇಂದ್ರದ ಹೊಸ ನಿಯಮ!

ದಾಳಿ ಮಾಡಿಲ್ಲ.. ಆದ್ರೆ

ಇಂಟರ್‌ನೆಟ್ ಪ್ರವೇಶಿಸಿದ ಬಳಿಕ ಕಿಮಿ ಕೆ3 ಯಾವುದೇ ಹಾನಿಕಾರಕ ದಾಳಿ ನಡೆಸಿಲ್ಲ ಎಂದು ಫ್ರಾಂಟಿಯರ್ ಸೆಕ್ಯುರಿಟಿ ತಿಳಿಸಿದೆ. ಬದಲಾಗಿ, ಪರೀಕ್ಷೆಯನ್ನು ಪೂರ್ಣಗೊಳಿಸಲು ನೆರವಾಗುವ ಮಾಹಿತಿಗಾಗಿ ಗಿಟ್‌ಹಬ್‌ನಲ್ಲಿ ಹುಡುಕಾಟ ನಡೆಸಿದೆ ಎಂದು ವರದಿಯಾಗಿದೆ.

ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುವಂತೆ ಮಾದರಿಗೆ ಯಾವುದೇ ಸೂಚನೆ ನೀಡಿರಲಿಲ್ಲ. ಅದು ಸ್ವತಃ ಈ ಅವಕಾಶವನ್ನು ಗುರುತಿಸಿಕೊಂಡಂತೆ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಪರೀಕ್ಷಾ ಪರಿಸರದಲ್ಲಿನ ಕಾನ್ಫಿಗರೇಶನ್ ದೋಷವೂ ಸ್ಯಾಂಡ್‌ಬಾಕ್ಸ್‌ನಿಂದ ಹೊರಬರಲು ಕಾರಣವಾಗಿತ್ತು ಎಂದು ವೈರ್ಡ್ ವರದಿ ಮಾಡಿದೆ. ಆದರೆ, ಇತರ ಪ್ರಮುಖ ಎಐ ವ್ಯವಸ್ಥೆಗಳಿಗೆ ಹೋಲಿಸಿದರೆ ಕಿಮಿ ಕೆ3ನಲ್ಲಿ ಆಂತರಿಕ ಸುರಕ್ಷತಾ ನಿಯಂತ್ರಣಗಳು ಕಡಿಮೆ ಇದ್ದವು. ಹೀಗಾಗಿ ಅದು ಪರಿಸ್ಥಿತಿಯ ಲಾಭ ಪಡೆಯಲು ಸಾಧ್ಯವಾಯಿತು ಎಂದು ಸಂಶೋಧಕರು ವಾದಿಸಿದ್ದಾರೆ.

ಮೊದಲೇನಲ್ಲ

ಸುಧಾರಿತ ಎಐ ಮಾದರಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ವರದಿಯಾಗಿರುವ ಹಲವು ಘಟನೆಗಳ ಬೆನ್ನಲ್ಲೇ ಈ ಪ್ರಕರಣವೂ ಬೆಳಕಿಗೆ ಬಂದಿದೆ. ಭದ್ರತಾ ಪರೀಕ್ಷೆಗಳ ವೇಳೆ ಪ್ರಾಯೋಗಿಕ ಎಐ ವ್ಯವಸ್ಥೆಗಳು ಇಂಟರ್‌ನೆಟ್ ಪ್ರವೇಶಿಸಿ ಬಾಹ್ಯ ಸೇವೆಗಳೊಂದಿಗೆ ಸಂವಹನ ನಡೆಸಿದ ಉದಾಹರಣೆಗಳನ್ನು ಓಪನ್‌ಎಐ ಮತ್ತು ಆಂಥ್ರೋಪಿಕ್ ಸಂಸ್ಥೆಗಳೂ ಬಹಿರಂಗಪಡಿಸಿವೆ.

ಕಿಮಿ ಕೆ3 ಈಗಾಗಲೇ ವ್ಯಾಪಕವಾಗಿ ಬಳಕೆದಾರರಿಗೆ ಲಭ್ಯವಿರುವುದರಿಂದ ಈ ಘಟನೆ ಹೆಚ್ಚು ಗಮನಾರ್ಹವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸಮಸ್ಯೆಗಳನ್ನು ವಿಶ್ಲೇಷಿಸಿ ಗುರಿ ಸಾಧಿಸಲು ಸ್ವತಃ ಕ್ರಮ ಕೈಗೊಳ್ಳುವ ಸಾಮರ್ಥ್ಯ ಹೊಂದಿರುವ ಎಐ ಮಾದರಿಗಳು ಮತ್ತಷ್ಟು ಶಕ್ತಿಶಾಲಿಯಾಗುತ್ತಿದ್ದಂತೆ ಅವುಗಳನ್ನು ನಿಯಂತ್ರಿಸುವುದು ಕಷ್ಟವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ವೈರ್ಡ್ ಪ್ರಕಾರ, ಈ ಪರೀಕ್ಷೆಯಲ್ಲಿ ಬಳಸಲಾದ ಸ್ಯಾಂಡ್‌ಬಾಕ್ಸ್ ಅನ್ನು ಬ್ರಿಟನ್‌ನ ಎಐ ಸೆಕ್ಯುರಿಟಿ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿತ್ತು. ಸುಧಾರಿತ ಎಐ ಮಾದರಿಗಳು ಕಾರ್ಯನಿರ್ವಹಿಸುವ ಪರಿಸರವನ್ನು ಅತ್ಯಂತ ಎಚ್ಚರಿಕೆಯಿಂದ ಸುರಕ್ಷಿತಗೊಳಿಸುವ ಅಗತ್ಯವನ್ನು ಈ ಘಟನೆ ಎತ್ತಿ ತೋರಿಸುತ್ತದೆ ಎಂದು ಸೈಬರ್‌ ಸುರಕ್ಷತಾ ತಜ್ಞರು ಹೇಳಿದ್ದಾರೆ.

Most Powerful AI Models Escaped Its Secure Sandbox
Meta ವಿವಾದ: 'ತಮ್ಮದೇ ದೇಶದ ನಾಗರಿಕರ ವಿರುದ್ಧವೇ ಹೋರಾಡುತ್ತಿದ್ದಾರೆ'; ಪ್ರಧಾನಿ ಮೋದಿ ವಿರುದ್ಧ ಕೇಜ್ರಿವಾಲ್‌ ವಾಗ್ದಾಳಿ

ಮೂಲ ವರದಿ ಪ್ರಕಟವಾದ ವೇಳೆಗೆ ಮೂನ್‌ಶಾಟ್ ಎಐ ಸಂಸ್ಥೆ ಪ್ರತಿಕ್ರಿಯೆಗಾಗಿ ಕಳುಹಿಸಲಾದ ಮನವಿಗಳಿಗೆ ಉತ್ತರಿಸಿರಲಿಲ್ಲ. ಶಕ್ತಿಶಾಲಿ ಎಐ ವ್ಯವಸ್ಥೆಗಳನ್ನು ಸುರಕ್ಷಿತವಾಗಿ ನಿಯೋಜಿಸುವಲ್ಲಿ ಎದುರಾಗುತ್ತಿರುವ ಸವಾಲುಗಳು ಹೆಚ್ಚುತ್ತಿವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ ಎಂದು ವೈರ್ಡ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com