'ನಾನೇ ಲಾಸ್ಟ್, ಇನ್ನು ಇರಾನ್ ನಂಬಲ್ಲ, ಹಾರ್ಮುಜ್ ಅಮೆರಿಕ ನಿಯಂತ್ರದಣದಲ್ಲಿದೆ': Donald Trump

ಇನ್ನು ಮುಂದೆ ಇರಾನ್ ನ ನಂಬಲ್ಲ.. ಅದು ನಮ್ಮನ್ನು ನಿರಂತರವಾಗಿ ವಂಚಿಸಿದೆ. ಇರಾನ್‌ನ್ನು ನಂಬುವ ಕೊನೆಯ ವ್ಯಕ್ತಿ ನಾನೇ. ಅವರು ನನ್ನೊಂದಿಗೆ ನಿರಂತರವಾಗಿ ಸುಳ್ಳು ಹೇಳಿದ್ದಾರೆ..
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಇರಾನ್ ವಿರುದ್ಧದ ಸಂಘರ್ಷದ ನಿಲುವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತಷ್ಟು ತೀವ್ರಗೊಳಿಸಿದ್ದು, ಇರಾನ್ ಆಡಳಿತದ ಮೇಲೆ ತಮಗೆ ಶೂನ್ಯ ವಿಶ್ವಾಸವಿದೆ ಎಂದು ತಿಳಿಸಿದರು.

ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸೇನೆ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಹೇಳಿದ ಟ್ರಂಪ್ ಇನ್ನು ಮುಂದೆ ಇರಾನ್ ನ ನಂಬಲ್ಲ.. ಅದು ನಮ್ಮನ್ನು ನಿರಂತರವಾಗಿ ವಂಚಿಸಿದೆ. ಇರಾನ್‌ನ್ನು ನಂಬುವ ಕೊನೆಯ ವ್ಯಕ್ತಿ ನಾನೇ. ಅವರು ನನ್ನೊಂದಿಗೆ ನಿರಂತರವಾಗಿ ಸುಳ್ಳು ಹೇಳಿದ್ದಾರೆ” ಎಂದು ಜಾಯಿಂಟ್ ಬೇಸ್ ಆ್ಯಂಡ್ರ್ಯೂಸ್‌ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.

ಸಮುದ್ರ ಮಾರ್ಗದಲ್ಲಿ ಹಲವು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷ ಮತ್ತು ಆರ್ಥಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಟ್ರಂಪ್ ಅವರ ಈ ಹೇಳಿಕೆ ರಾಜತಾಂತ್ರಿಕ ಹಾಗೂ ಸೇನಾ ವಾಗ್ದಾಳಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Donald Trump
ಇರಾನ್ ಹತ್ಯೆ ಭೀತಿ; ಕೊನೆಯ ಕ್ಷಣದಲ್ಲಿ ವಿಮಾನ ಬದಲಿಸಿದ ಡೊನಾಲ್ಡ್ ಟ್ರಂಪ್; ಏರ್‌ ಫೋರ್ಸ್‌ ಒನ್‌ ಬದಲು C-32A ವಿಮಾನದಲ್ಲಿ ರಹಸ್ಯ ಪ್ರಯಾಣ..!

‘ಅದು ನಮ್ಮ ನಿಯಂತ್ರಣದಲ್ಲಿದೆ’

ಹೋರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸೇನೆ “ಸಂಪೂರ್ಣ ನಿಯಂತ್ರಣ” ಸಾಧಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಪರ್ಷಿಯನ್ ಕೊಲ್ಲಿ ಮತ್ತು ಗಲ್ಫ್ ಆಫ್ ಓಮನ್ ನಡುವಿನ ಈ ಕಿರಿದಾದ ಜಲಮಾರ್ಗದ ಮೂಲಕ ವಿಶ್ವದ ಒಟ್ಟು ಪೆಟ್ರೋಲಿಯಂ ಪೂರೈಕೆಯ ಐದನೇ ಒಂದು ಭಾಗ ಸಾಗುತ್ತದೆ.

“ಅದು ನಮ್ಮ ನಿಯಂತ್ರಣದಲ್ಲಿದೆ” ಎಂದು ಟ್ರಂಪ್ ಘೋಷಿಸಿದ್ದು, ಅಂತಾರಾಷ್ಟ್ರೀಯ ಹಡಗು ಸಂಚಾರಕ್ಕೆ ಅಡ್ಡಿಪಡಿಸದಂತೆ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇರಾನ್ ಸೇನೆ ಯಾವುದೇ ಆಕ್ರಮಣಕಾರಿ ಕ್ರಮ ಕೈಗೊಂಡರೆ ಅದಕ್ಕೆ ಭಾರೀ ಪ್ರತೀಕಾರ ಎದುರಾಗಲಿದೆ ಎಂದು ಟ್ರಂಪ್ ನೇರ ಸೇನಾ ಎಚ್ಚರಿಕೆ ನೀಡಿದ್ದಾರೆ.

“ಅವರನ್ನು ಸಂಪೂರ್ಣವಾಗಿ ಹೊಡೆದುರುಳಿಸಲಾಗುವುದು” ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ “ಇನ್ನು ಮುಂದೆ ಮಧ್ಯಪ್ರಾಚ್ಯದ ಬೆದರಿಸುವ ಶಕ್ತಿಯಲ್ಲ” ಎಂದೂ ಅವರು ಹೇಳಿದ್ದಾರೆ.

ಇರಾನ್ ನಾಯಕತ್ವದ ವಿರುದ್ಧ ವಾಗ್ದಾಳಿ

ಇರಾನ್ ನಾಯಕತ್ವವು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಟ್ರಂಪ್ ಆರೋಪಿಸಿದ್ದು, ಅವರ ನಡೆ “ಅತ್ಯಂತ ದ್ವಿಮುಖ”ವಾಗಿದೆ ಎಂದು ಟೀಕಿಸಿದ್ದಾರೆ.

ಇರಾನ್ ಅಧಿಕಾರಿಗಳು ರಹಸ್ಯ ರಾಜತಾಂತ್ರಿಕ ಮಾರ್ಗಗಳ ಮೂಲಕ ವಾಷಿಂಗ್ಟನ್ ಸಂಪರ್ಕಿಸಿ, ನಿರ್ಬಂಧಗಳನ್ನು ಸಡಿಲಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಬಯಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

ಆದರೆ ಇದೇ ವೇಳೆ ಇರಾನ್‌ನ ಸರ್ಕಾರಿ ಮಾಧ್ಯಮಗಳಲ್ಲಿ ಅಮೆರಿಕದೊಂದಿಗೆ ಅಂತಹ ಯಾವುದೇ ಸಂಪರ್ಕ ನಡೆದಿಲ್ಲ ಎಂದು ಸಾರ್ವಜನಿಕವಾಗಿ ನಿರಾಕರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Donald Trump
‘ನಿಮಗೆ ಆದ ಹಾನಿಗೆ ಪರಿಹಾರ ಬೇಕಾ? ಹಾಗಾದರೆ ನಮ್ಮ ಸಾವುಗಳಿಗೂ ಹಣ ಕೊಡಿ’: ಇರಾನ್‌ ಪರಿಹಾರ ಬೇಡಿಕೆಗೆ ಟ್ರಂಪ್‌ ತಿರುಗೇಟು

ವಾಷಿಂಗ್ಟನ್ ಹೇಳಿಕೆ ತಳ್ಳಿಹಾಕಿದ ಟೆಹ್ರಾನ್

ಟ್ರಂಪ್ ಹೇಳಿಕೆಗೆ ಇರಾನ್ ತಕ್ಷಣವೇ ಪ್ರತಿಕ್ರಿಯಿಸಿದೆ. ಈ ಪ್ರದೇಶದಲ್ಲಿ ಅಮೆರಿಕ ಪ್ರಾಬಲ್ಯ ಸಾಧಿಸಿದೆ ಎಂಬ ಟ್ರಂಪ್ ಹೇಳಿಕೆಯನ್ನು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯೀ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಪ್ರದೇಶದಲ್ಲಿ ಅಸ್ಥಿರತೆ ಉಂಟಾಗಲು ಅಮೆರಿಕ ಸೇನೆಯ ಉಪಸ್ಥಿತಿಯೇ ಪ್ರಮುಖ ಕಾರಣ ಎಂದು ಬಘಾಯೀ ತಿರುಗೇಟು ನೀಡಿದ್ದಾರೆ. ಪ್ರಸ್ತುತ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳಲು ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಸೇನಾ ಕಾರ್ಯಾಚರಣೆಗಳೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಹೋರ್ಮುಜ್ ಜಲಸಂಧಿಯಲ್ಲಿ ಸೇನಾ ತಪ್ಪು ಲೆಕ್ಕಾಚಾರಗಳು ಅಥವಾ ತಪ್ಪು ನಿರ್ಧಾರಗಳ ಸಾಧ್ಯತೆ ಹೆಚ್ಚಿರುವುದರಿಂದ, ಅಮೆರಿಕ-ಇರಾನ್ ನಡುವಿನ ಈ ವಾಗ್ವಾದ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಮತ್ತಷ್ಟು ಅಸ್ಥಿರತೆ ಉಂಟುಮಾಡುವ ಅಪಾಯವಿದೆ ಎಂದು ಭೌಗೋಳಿಕ ರಾಜಕೀಯ ವಿಶ್ಲೇಷಕರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com