ಯುರೋಪ್‌ನಲ್ಲಿ ಯುದ್ಧದ ಭೀತಿ: ಉಕ್ರೇನ್‌ನಲ್ಲಿರುವ ಭಾರತದ ಬಿಲಿಯನೇರ್‌ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!

ಉಕ್ರೇನಿಯನ್ ಡ್ರೋನ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದರು, 14 ಕಾರ್ಮಿಕರು ಗಾಯಗೊಂಡಿದ್ದಾರೆ
Russia Hits Indian Billionaire's Factory In Ukraine As War Spills In Europe
ಆರ್ಸೆಲರ್ ಮಿತ್ತಲ್ ಉಕ್ಕು ತಯಾರಿಕಾ ಘಟಕದ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
Updated on

ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತೊಮ್ಮೆ ಅಪಾಯಕಾರಿ ಘಟ್ಟ ತಲುಪಿದ್ದು, ಉಕ್ರೇನ್‌ನ ಅತಿದೊಡ್ಡ ಸಂಯೋಜಿತ ಉಕ್ಕಿನ ಘಟಕವಾದ ಕ್ರಿವಿ ರಿಹ್‌ನಲ್ಲಿರುವ ಭಾರತೀಯ ಮೂಲದ ಬಿಲಿಯನೇರ್ ಲಕ್ಷ್ಮಿ ಮಿತ್ತಲ್ ಅವರ ಆರ್ಸೆಲರ್ ಮಿತ್ತಲ್ ಉಕ್ಕು ತಯಾರಿಕಾ ಘಟಕದ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.

ಉಕ್ರೇನಿಯನ್ ಡ್ರೋನ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದರು, 14 ಕಾರ್ಮಿಕರು ಗಾಯಗೊಂಡಿದ್ದಾರೆ ಮತ್ತು ಕೋರ್ ಎನರ್ಜಿ ಹಾಗೂ ಬ್ಲಾಸ್ಟ್-ಫರ್ನೇಸ್ ಕಾರ್ಯಾಚರಣೆಗಳಿಗೆ ಹಾನಿಯಾದ ನಂತರ ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ.

ಉಕ್ರೇನ್ ಈ ಹಿಂದೆ ರಷ್ಯಾದಾದ್ಯಂತ ನೂರಾರು ಡ್ರೋನ್‌ಗಳನ್ನು ಹಾರಿಸಿತ್ತು, ಕೈವ್‌ನ ಯುದ್ಧದ ಅತಿದೊಡ್ಡ ವೈಮಾನಿಕ ದಾಳಿಗಳಲ್ಲಿ ಒಂದರಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದರು. ಮಾಸ್ಕೋದ ಪ್ರಾದೇಶಿಕ ಗವರ್ನರ್ ಆಂಡ್ರೆ ವೊರೊಬಿಯೊವ್ ಈ ದಾಳಿಯನ್ನು "ಇತ್ತೀಚಿನ ಬೃಹತ್ ಡ್ರೋನ್ ದಾಳಿಗಳಲ್ಲಿ ಒಂದಾಗಿದೆ" ಎಂದು ಹೇಳಿದ್ದಾರೆ.

Russia Hits Indian Billionaire's Factory In Ukraine As War Spills In Europe
ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ: 13 ಮಂದಿ ಬಲಿ, 75 ಜನರಿಗೆ ಗಾಯ; ಇದು 4 ವರ್ಷಗಳಲ್ಲೇ ಅತ್ಯಂತ ಡೆಡ್ಲಿ ಅಟ್ಯಾಕ್!

ಕೀವ್ ಸೇರಿದಂತೆ ಹಲವು ನಗರಗಳ ಮೇಲೆಯೂ ರಷ್ಯಾ ದಾಳಿ ತೀವ್ರಗೊಳಿಸಿದ್ದರೆ, ಇತ್ತ ಉಕ್ರೇನ್ ಸಹ ಮಾಸ್ಕೋ ಸೇರಿದಂತೆ ರಷ್ಯಾದ ವಿವಿಧ ಪ್ರಮುಖ ತಾಣಗಳ ಮೇಲೆ 800ಕ್ಕೂ ಹೆಚ್ಚು ಡ್ರೋನ್‌ ಹಾರಿಸಿ ದಾಳಿಗೆ ಮುಂದಾಗುತ್ತಿದ್ದು, ಇದರಿಂದ ಅಲ್ಲಿ ನೆಲೆಗೊಂಡ ಸಂಸ್ಥೆಗಳ ಆರ್ಥಿಕತೆಗೆ ಭಾರಿ ಹೊಡೆತ ಬೀಳುವಂತಾಗಿದೆ.

ಆರ್ಸೆಲರ್ ಮಿತ್ತಲ್ ಉಕ್ಕಿನ ಕಾರ್ಖಾನೆ ಧ್ವಂಸ

ಕಂಪನಿಯ ಪ್ರಕಾರ, ಈ ದಾಳಿಯು ವಿದ್ಯುತ್ ಉತ್ಪಾದನೆ ಮತ್ತು ಬ್ಲಾಸ್ಟ್ ಫರ್ನೇಸ್‌ಗಳಿಗೆ ಸಂಬಂಧಿಸಿದ ನಿರ್ಣಾಯಕ ಸೌಲಭ್ಯಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡಿದೆ. ಈ ಹಾನಿಗಳು ಸ್ಥಾವರದ ಉತ್ಪಾದನಾ ಪ್ರಕ್ರಿಯೆಯನ್ನು ಅಡ್ಡಿಪಡಿಸಿದವು. ಈ ಸ್ಥಾವರ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿಯವರ ತವರು ಪಟ್ಟಣವಾದ ಕ್ರಿವಿ ರಿಹ್‌ನಲ್ಲಿದೆ. ಆದ್ದರಿಂದ, ಈ ಕೈಗಾರಿಕಾ ಕೇಂದ್ರದ ಮೇಲಿನ ದಾಳಿಯನ್ನು ಮಹತ್ವದ್ದಾಗಿ ಪರಿಗಣಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com