ನೇಪಾಳ ಪ್ರವಾಹ: ಪ್ರಾಣ ಉಳಿಸಿಕೊಳ್ಳಲು ಟೆರೇಸ್ ಮೇಲೆ ಟಿ-ಶರ್ಟ್ ಬೀಸಿದ ಯುವಕ, ರೋಚಕ ಕಾರ್ಯಾಚರಣೆಯ Video!

ಮನೆಯ ಟೆರೇಸ್ ಮೇಲೆ ಸಿಲುಕಿಕೊಂಡಿದ್ದ ಯುವಕನೊಬ್ಬ ರಕ್ಷಣಾ ಹೆಲಿಕಾಪ್ಟರ್‌ ಗಮನ ಸೆಳೆಯಲು ಹತಾಶೆಯಿಂದ ತನ್ನ ಟಿ-ಶರ್ಟ್ ಬೀಸುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.
rescue operation
ರೋಚಕ ರಕ್ಷಣಾ ಕಾರ್ಯಾಚರಣೆ
Updated on

ಕಠ್ಮಂಡು: ನೇಪಾಳದಲ್ಲಿ ವಿನಾಶಕಾರಿ ಪ್ರವಾಹದಿಂದ ಬಲಿಯಾದವರ ಸಂಖ್ಯೆ 675ಕ್ಕೆ ಏರಿಕೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಈ ಮಧ್ಯೆ ಪ್ರವಾಹದ ವೇಳೆಯಲ್ಲಿ ಸಂಕಷ್ಟದಲ್ಲಿ ಸಿಲುಕಿದ ಕೆಲವರು, ತುಂಬಾ ಕಷ್ಟಪಟ್ಟು ಪ್ರಾಣಪಾಯದಿಂದ ಪಾರಾಗಿರುವ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ.

ಮನೆಯ ಟೆರೇಸ್ ಮೇಲೆ ಸಿಲುಕಿಕೊಂಡಿದ್ದ ಯುವಕನೊಬ್ಬ ಮನೆಯ ಟೆರೇಸ್ ಮೇಲೆ ನಿಂತು ತನ್ನ ಟಿ-ಶರ್ಟ್ ಬೀಸುವ ಮೂಲಕ ಸೇನಾ ಹೆಲಿಕಾಪ್ಟರ್ ಗಮನ ಸೆಳೆದು ಅಪಾಯದಿಂದ ಪಾರಾದ ದೃಶ್ಯವೊಂದು ವೈರಲ್ ಆಗಿದೆ.

ಹೆಲಿಕಾಪ್ಟರ್ ಹತ್ತಿರ ಬರುತ್ತಿರುವುದನ್ನು ಗಮನಿಸಿದ ಯುವಕ ಮನೆಯ ಟೆರೇಸ್ ಮೇಲೆ ನಿಂತು ಪದೇ ಪದೇ ತನ್ನ ಟಿ-ಶರ್ಟ್ ಬೀಸುತ್ತಿರುವುದು ಈ ದೃಶ್ಯದಲ್ಲಿ ಕಂಡುಬರುತ್ತದೆ. ಮನೆ ರಭಸದಿಂದ ಹರಿಯುತ್ತಿದ್ದ ಪ್ರವಾಹದ ನೀರಿನಿಂದ ಸುತ್ತುವರೆದಿದ್ದು, ಆತನಿಗೆ ಪಾರಾಗಲು ಹೆಚ್ಚಿನ ದಾರಿಗಳಿರಲಿಲ್ಲ.

ಆಗ ಟೆರೇಸ್ ಮೇಲೆ ನಿಂತ ಯುವಕ ಆಕಾಶದತ್ತ ಟಿ-ಶರ್ಟ್ ಬೀಸುವುದನ್ನು ಮುಂದುವರಿಸುತ್ತಾನೆ. ರಕ್ಷಣಾ ಸಿಬ್ಬಂದಿಗೆ ತನ್ನ ಇರುವಿಕೆ ಬಗ್ಗೆ ತಿಳಿಸಲು ಇದೊಂದೇ ಮಾರ್ಗವಿದ್ದಂತಿದೆ. ಅಂತಿಮವಾಗಿ ನೇಪಾಳ ಸೇನೆಯ ಹೆಲಿಕಾಪ್ಟರ್ ಮನೆಗೆ ಹತ್ತಿರ ಬಂದು ಟೆರೇಸ್ ಮೇಲೆ ಸ್ಥಿರವಾಗಿ ನಿಲ್ಲುತ್ತದೆ. ಹೆಲಿಕಾಪ್ಟರ್ ಹತ್ತಿರ ಬಂದಂತೆ ಯುವಕ ಅದನ್ನು ಕಟ್ಟಡದ ಅಂಚಿನತ್ತ ಬರುವಂತೆ ಸೂಚಿಸುತ್ತಾನೆ.

ಮೊದಲು ಆತ ಹೆಲಿಕಾಪ್ಟರ್‌ನ ಲ್ಯಾಂಡಿಂಗ್ ಸ್ಕಿಡ್‌ ಅನ್ನು ಹಿಡಿದುಕೊಳ್ಳುತ್ತಾನೆ. ನಂತರ ಹೆಲಿಕಾಪ್ಟರ್‌ನಲ್ಲಿದ್ದ ಸೇನಾ ಸಿಬ್ಬಂದಿಯ ಕೈಯನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆ ಸೈನಿಕನ ಸಹಾಯದಿಂದ, ಯುವಕ ತನ್ನನ್ನು ತಾನು ಮೇಲಕ್ಕೆ ಎಳೆದುಕೊಂಡು ಹೆಲಿಕಾಪ್ಟರ್ ಹತ್ತುತ್ತಾನೆ.

ಈ ರೋಚಕ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದವರು ಉಸಿರು ಬಿಗಿಹಿಡಿದು ನೋಡುವಂತಾಗಿತ್ತು. ಸುರಕ್ಷಿತವಾಗಿ ಹೆಲಿಕಾಪ್ಟರ್ ಏರಿದ ಕೆಲವೇ ಕ್ಷಣಗಳಲ್ಲಿ, ವೀಕ್ಷಕರು ನಿರಾಳರಾಗಿ ಹರ್ಷೋದ್ಗಾರ ಮಾಡುವುದು ಮತ್ತು ಚಪ್ಪಾಳೆ ತಟ್ಟುವುದು ಕೇಳಿಸುತ್ತದೆ.

rescue operation
Nepal floods: ಮೃತರ ಸಂಖ್ಯೆ 675ಕ್ಕೆ ಏರಿಕೆ; ರಾಸುವಾ ಜಲವಿದ್ಯುತ್ ಯೋಜನೆ ಸ್ಥಳದಿಂದ ನಾಲ್ವರು ಭಾರತೀಯರ ರಕ್ಷಣೆ!

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೇಪಾಳದಲ್ಲಿನ ವಿನಾಶಕಾರಿ ಹಠಾತ್ ಪ್ರವಾಹದ ನಡುವೆ ನಡೆದ ಈ ರೋಚಕ ರಕ್ಷಣಾ ಕಾರ್ಯಾಚರಣೆ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದು, ಬಳಕೆದಾರರು ನೇಪಾಳ ಸೇನೆಯ ಹೆಲಿಕಾಪ್ಟರ್ ಸಿಬ್ಬಂದಿಯ ಕೌಶಲ್ಯವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com