ಭಾರತ-ಪಾಕ್ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ: ಡೊನಾಲ್ಡ್ ಟ್ರಂಪ್ ಮತ್ತೆ ಅದೇ ರಾಗ!

ಅಮೆರಿಕ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರ. ನನ್ನ ಮೊದಲ ಅವಧಿಯಲ್ಲಿ ಸೈನ್ಯವನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಿದ್ದೇನೆ. ಸ್ಪೇಸ್ ಫೋರ್ಸ್ ಸ್ಥಾಪಿಸಿದ್ದೇನೆ. ಈಗಲೂ ಇತಿಹಾಸದಲ್ಲೇ ಎಂದೂ ಕಾಣದ ಮಟ್ಟದಲ್ಲಿ ಸೈನ್ಯವನ್ನು ಬಲಪಡಿಸುತ್ತಿದ್ದೇನೆ.
PM Modi with Donald Trump Casual Images
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್/ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ ಎಂಬ ತಮ್ಮ ಹೇಳಿಕೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಪುನರುಚ್ಛರಿಸಿದ್ದಾರೆ.

ನ್ಯಾಷನಲ್ ಪ್ರೇಯರ್ ಬ್ರೇಕ್‌ಫಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಟ್ರಂಪ್, ನಾನು ಒಂದು ವರ್ಷದೊಳಗೆ ಎಂಟು ಉಗ್ರ ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಹೇಳಿ, ಕಾಂಬೋಡಿಯಾ–ಥೈಲ್ಯಾಂಡ್, ಕೊಸೊವೊ–ಸರ್ಬಿಯಾ, ಅರ್ಮೇನಿಯಾ–ಅಜರ್ಬೈಜಾನ್, ಇಸ್ರೇಲ್-ಇರಾನ್, ಹಾಗೂ ಭಾರತ–ಪಾಕಿಸ್ತಾನ ನಡುವಿನ ಸಂಘರ್ಷಗಳೆಂದು ಪಟ್ಟಿ ಮಾಡಿದ್ದಾರೆ.

ಅಲ್ಲದೆ, ಸಾಮಾಜಿಕ ಜಾಲತಾಣ ಟ್ರೂತ್ ನಲ್ಲೂ ಪೋಸ್ಟ್ ಮಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಪರಮಾಣು ಯುದ್ಧ ನಿಲ್ಲಿಸಿದ್ದು ನಾನು ಎಂದು ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ಅಮೆರಿಕ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರ. ನನ್ನ ಮೊದಲ ಅವಧಿಯಲ್ಲಿ ಸೈನ್ಯವನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಿದ್ದೇನೆ. ಸ್ಪೇಸ್ ಫೋರ್ಸ್ ಸ್ಥಾಪಿಸಿದ್ದೇನೆ. ಈಗಲೂ ಇತಿಹಾಸದಲ್ಲೇ ಎಂದೂ ಕಾಣದ ಮಟ್ಟದಲ್ಲಿ ಸೈನ್ಯವನ್ನು ಬಲಪಡಿಸುತ್ತಿದ್ದೇನೆ. 2ನೇ ಮಹಾಯುದ್ಧದ ಕಾಲದ ಯುದ್ಧನೌಕೆಗಳಿಗಿಂತ ನೂರು ಪಟ್ಟು ಹೆಚ್ಚು ಶಕ್ತಿಯುತ ಯುದ್ಧನೌಕೆಗಳನ್ನು ಸೇರಿಸುತ್ತಿದ್ದೇನೆ. ನಾನು ಪಾಕಿಸ್ತಾನ–ಭಾರತ, ಇರಾನ್–ಇಸ್ರೇಲ್ ಮತ್ತು ರಷ್ಯಾ–ಉಕ್ರೇನ್ ನಡುವಿನ ಅಣುಯುದ್ಧಗಳನ್ನು ತಡೆದಿದ್ದೇನೆಂದು ಹೇಳಿದ್ದಾರೆ.

PM Modi with Donald Trump Casual Images
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ: ಡೊನಾಲ್ಡ್ ಟ್ರಂಪ್

ಸಾರ್ವಜನಿಕ ಭಾಷಣಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ಈವರೆಗೂ 90 ಕ್ಕೂ ಹೆಚ್ಚು ಬಾರಿ ಈ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com