ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಟ್ರಕ್ ಡಿಕ್ಕಿ, 9 ಬೌದ್ಧ ಭಿಕ್ಷುಗಳು ಸಾವು! ಚೆಲ್ಲಾಪಿಲ್ಲಿಯಾಗಿ ರಸ್ತೆ ಮೇಲೆ ಬಿದ್ದ ಮೃತದೇಹಗಳು, Video

ಮೃತದೇಹಗಳು ರಸ್ತೆ ಮೇಲೆಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವುದು ವಿಡಿಯೋದಲ್ಲಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೂ ಮುನ್ನ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
rescue team at accident site
ಅಪಘಾತ ನಡೆದ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ
Updated on

ಬ್ಯಾಂಕಾಕ್‌: 11 ವರ್ಷದ ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಟ್ರಕ್ ಹರಿದು ಬೌದ್ಧ ಭಿಕ್ಷುಗಳು ಸಾವನ್ನಪ್ಪಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. ರಾಜಧಾನಿ ಬ್ಯಾಂಕಾಕ್ ನಿಂದ ಸುಮಾರು 650 ಕಿ. ಮೀ ದೂರದಲ್ಲಿರುವ ಮುಕ್ದಹಾನ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ರಕ್ಷಣಾ ತಂಡ ಈ ಕುರಿತ ಭಯಾನಕ CCTV ದೃಶ್ಯಾವಳಿಗಳನ್ನು ಹಂಚಿಕೊಂಡಿದೆ. ಕಿತ್ತಳೆ ಬಣ್ಣದ ನಿಲುವಂಗಿ ಧರಿಸಿದ್ದ ಬೌದ್ಧ ಭಿಕ್ಷುಗಳು ರಸ್ತೆಯಲ್ಲಿ ಸಾಗುತ್ತಿದ್ದಾಗ ಹಠಾತ್ತನೇ ಬಂದ ಟ್ರಕ್ ಅವರ ಮೇಲೆ ಹರಿದಿದೆ.

ಮೃತದೇಹಗಳು ರಸ್ತೆ ಮೇಲೆಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವುದು ವಿಡಿಯೋದಲ್ಲಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೂ ಮುನ್ನ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

34 ಬೌದ್ಧ ಭಿಕ್ಷುಗಳು ಮತ್ತು ಐದು ಅನುಯಾಯಿಗಳ ಗುಂಪು ಉಬೊನ್ ರಚಥಾನಿಯಲ್ಲಿರುವ ಒಂದು ದೇವಾಲಯದಿಂದ ಮತ್ತೊಂದು ದೇವಾಲಯಕ್ಕೆ ರಸ್ತೆಯ ಪಕ್ಕದಲ್ಲಿ ಸಾಗುತ್ತಿದ್ದಾಗ ಟ್ರಕ್ ಹರಿದು ಈ ಅಪಘಾತ ಸಂಭವಿಸಿದೆ ಎಂದು ಮುಕ್ದಹಾನ್ ಪ್ರಾಂತ್ಯದ ಗವರ್ನರ್ ವೊರಾಯನ್ ಬುನಾರತ್ ಹೇಳಿದ್ದಾರೆ. ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿರುವುದಾಗಿ ಮುಕ್ದಹಾನ್ ಪ್ರಾಂತೀಯ ಕಚೇರಿ ತಿಳಿಸಿದೆ.

rescue team at accident site
ಪಾಕಿಸ್ತಾನದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಉರುಳಿ ಬಿದ್ದ ಬಸ್‌; 40 ಮಂದಿ ದುರ್ಮರಣ, ಹಲವರಿಗೆ ಗಾಯ..!

ಅಪ್ರಾಪ್ತ ಬಾಲಕ ಪೋಷಕರ ಅನುಮತಿಯಿಲ್ಲದೆ ಟ್ರಕ್ ಚಲಾಯಿಸುತ್ತಿದ್ದಾಗ ಅದು ನಿಯಂತ್ರಣ ತಪ್ಪಿ ಬೌದ್ಧ ಭಿಕ್ಷುಗಳಿಗೆ ಡಿಕ್ಕಿ ಹೊಡೆದಿದೆ. ಬಾಲಕ ಸಹ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com