ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ: ಸಿಂಧೂ ನದಿ ನೀರು ಬಿಡದಿದ್ದರೇ... ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿದ ಬಿಲಾವಲ್ ಭುಟ್ಟೋ!

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ದಾಳಿಯ ನಂತರ, ಭಾರತ ಕಠಿಣ ನಿಲುವು ತಳೆದು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ.
bilawal bhutto
ಬಿಲಾವಲ್ ಭುಟ್ಟೋ
Updated on

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ದಾಳಿಯ ನಂತರ, ಭಾರತ ಕಠಿಣ ನಿಲುವು ತಳೆದು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ. ಅಂದಿನಿಂದ, ಪಾಕಿಸ್ತಾನ ಅದನ್ನು ಪುನಃಸ್ಥಾಪಿಸಲು ಹೆಣಗಾಡುತ್ತಿದ್ದು ಹಲವಾರು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ದುಃಸ್ಥಿತಿಯ ಬಗ್ಗೆ ವಿಷಾದಿಸಿದೆ. ಆದರೆ ಪಾಕಿಸ್ತಾನ ಭಯೋತ್ಪಾದಕ ಅಡಗುತಾಣಗಳನ್ನು ಕೆಡವಿ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸುವವರೆಗೆ ಪಾಕ್ ಜೊತೆ ಮಾತುಕತೆ ನಡೆಸುವುದಿಲ್ಲ, ಸಿಂಧೂ ಜಲ ಒಪ್ಪಂದವನ್ನು ಪುನಃಸ್ಥಾಪಿಸುವುದಿಲ್ಲ ಎಂದು ಭಾರತ ಸ್ಪಷ್ಟವಾಗಿದೆ ಹೇಳಿದೆ. ಏತನ್ಮಧ್ಯೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಭಾರತದ ವಿರುದ್ಧ ಪದೇ ಪದೇ ಯುದ್ಧ ಬೆದರಿಕೆಗಳನ್ನು ಹಾಕುತ್ತಲೇ ಇದ್ದಾರೆ.

ಬಿಲಾವಲ್ ಭುಟ್ಟೋ ಮತ್ತೆ ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿದ್ದಾನೆ. ಪಾಕಿಸ್ತಾನವು ಪ್ರತಿ ರಂಗದಲ್ಲೂ ಭಾರತದ ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದು ಹೇಳಿದ್ದಾನೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಮುಂದುವರಿಸುವವರೆಗೆ ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಅಮಾನತುಗೊಂಡಿರುತ್ತದೆ ಎಂದು ನವದೆಹಲಿ ಕಳೆದ ವಾರ ಪುನರುಚ್ಚರಿಸಿದ ನಂತರ ಬಿಲಾವಲ್ ಅವರ ಹೇಳಿಕೆ ಬಂದಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಜನರನ್ನು ಕೊಂದಿದ್ದಕ್ಕೆ ಪ್ರತಿಯಾಗಿ ಭಾರತ 1960 ರ ಒಪ್ಪಂದವನ್ನು 2025 ರವರೆಗೆ ಸ್ಥಗಿತಗೊಳಿಸಿತು. ಶುಕ್ರವಾರ, ವಿದೇಶಾಂಗ ಸಚಿವಾಲಯ (MEA) ಒಪ್ಪಂದದ ಬಗ್ಗೆ ಭಾರತದ ನಿಲುವು ಬದಲಾಗಿಲ್ಲ ಎಂದು ಪುನರುಚ್ಚರಿಸಿತು.

bilawal bhutto
20 ವರ್ಷಗಳ ಬಳಿಕ ಗಾಜಾದಲ್ಲಿ Hamas 'ಉಗ್ರ' ಆಡಳಿತ ಅಂತ್ಯ; ಅಮೆರಿಕ ಸ್ಥಾಪಿತ NCAG ಗೆ ಅಧಿಕಾರ ಹಸ್ತಾಂತರ!

ಸೋಮವಾರ ಪಾಕಿಸ್ತಾನದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಭುಟ್ಟೋ, ಭಾರತ ಸಿಂಧೂ ನದಿಯ ನೀರನ್ನು ಅಸ್ತ್ರವಾಗಿ ಬಳಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದು ಪಾಕಿಸ್ತಾನವು ನದಿಯ ಮೇಲಿನ ತನ್ನ ಹಕ್ಕುಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿತ್ತು. ಇದೀಗ ಭುಟ್ಟೋ ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಿದೆ. ಅದು ಸಿಂಧೂ ನದಿಯ ಹಕ್ಕುಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದು ನಮ್ಮ ವಿರುದ್ಧ ನದಿಯ ನೀರನ್ನು ಅಸ್ತ್ರವನ್ನಾಗಿ ಮಾಡುವ ಪ್ರಯತ್ನವಾಗಿದೆ ಎಂದು ಹೇಳುವ ಮೂಲಕ ತೀವ್ರ ಬೆದರಿಕೆ ಹಾಕಿದ್ದಾರೆ. ಆದಾಗ್ಯೂ, ಬಿಲಾವಲ್ ಭುಟ್ಟೋ ಭಾರತದ ವಿರುದ್ಧ ವಿಷವನ್ನು ಕಾರುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರ, ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿ ಸಿಂಧೂ ನದಿಯ ಮೇಲೆ ಅಣೆಕಟ್ಟುಗಳನ್ನು ನಿರ್ಮಿಸಿದರೆ ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು.

ಉನ್ನತ ಗುಪ್ತಚರ ಮೂಲಗಳು ಭುಟ್ಟೋ ಅವರ ಹೇಳಿಕೆಗಳು ಉದ್ವಿಗ್ನತೆಯನ್ನು ಉಂಟುಮಾಡುವ ಮತ್ತು ಸಿಂಧೂ ನದಿ ನೀರಿನ ಭಾರತದ ನಿರ್ವಹಣೆಯ ಬಗ್ಗೆ ಸುಳ್ಳುಗಳನ್ನು ಹರಡುವ ಉದ್ದೇಶದಿಂದ ಪ್ರಚೋದನಕಾರಿ ಮತ್ತು ಆಧಾರರಹಿತ ಹೇಳಿಕೆ ಎಂದು ತಿಳಿಸಿವೆ. ಭುಟ್ಟೋ ಅವರ ಹೇಳಿಕೆ ಪ್ರಚೋದನಕಾರಿ ಮತ್ತು ಆಧಾರರಹಿತವಾಗಿದೆ. ಉದ್ವಿಗ್ನತೆಯನ್ನು ಹೆಚ್ಚಿಸಲು ಮತ್ತು ಸಿಂಧೂ ನದಿ ನೀರಿನ ಒಪ್ಪಂದದ ಅಡಿಯಲ್ಲಿ ಭಾರತದ ನೀರಿನ ಶಾಂತಿಯುತ ನಿರ್ವಹಣೆಯ ಬಗ್ಗೆ ಸುಳ್ಳುಗಳನ್ನು ಹರಡಲು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com