ಪಾಕಿಸ್ತಾನಕ್ಕೆ Iran ರಹಸ್ಯ ಸಂದೇಶ: Asim Munir ಜೊತೆ ಮಹತ್ವದ ಮಾತುಕತೆ, Khamenei ಕಳುಹಿಸಿದ ಆ ರಹಸ್ಯ ಪತ್ರದಲ್ಲೇನಿದೆ?

ಇರಾನ್‌ ಸಚಿವ ಎಸ್ಕಂದರ್ ಮೊಮೆನಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಅವರನ್ನು ರಾವಲ್ಪಿಂಡಿಯ ಜನರಲ್ ಹೆಡ್‌ಕ್ವಾರ್ಟರ್ಸ್‌ (GHQ) ನಲ್ಲಿ ಭೇಟಿಯಾಗಿ, ಇರಾನ್‌ನ ಪರವಾಗಿ ಮಹತ್ವದ ಸಂದೇಶವೊಂದನ್ನು ಹಸ್ತಾಂತರಿಸಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಇಸ್ಲಾಮಾಬಾದ್: ಅಮೆರಿಕ–ಇರಾನ್ ಸಂಘರ್ಷ ತೀವ್ರಗೊಂಡಿರುವ ನಡುವೆಯೇ ಮಧ್ಯಪ್ರಾಚ್ಯದ ರಾಜತಾಂತ್ರಿಕ ಬೆಳವಣಿಗೆಗಳು ಹೊಸ ತಿರುವು ಪಡೆದುಕೊಂಡಿವೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಅವರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ, ಇರಾನ್ ತನ್ನ ಉನ್ನತ ನಾಯಕತ್ವದ ಪರವಾಗಿ ಗೌಪ್ಯ ಸಂದೇಶವೊಂದನ್ನು ರವಾನಿಸಿದೆ ಎಂದು ಪಾಕಿಸ್ತಾನದ ಭದ್ರತಾ ಮೂಲಗಳು ಹೇಳಿವೆ.

ಈ ಸಂದೇಶದಲ್ಲಿ ಏನಿದೆ, ಅದು ಅಮೆರಿಕ–ಇರಾನ್ ಉದ್ವಿಗ್ನತೆಯನ್ನು ತಗ್ಗಿಸುವ ಪ್ರಯತ್ನದ ಭಾಗವೇ ಅಥವಾ ಹೊಸ ರಾಜತಾಂತ್ರಿಕ ಸಮೀಕರಣಕ್ಕೆ ಮುನ್ನುಡಿಯೇ ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.

ಪಾಕಿಸ್ತಾನದ ಭದ್ರತಾ ಮೂಲಗಳ ಪ್ರಕಾರ, ಇರಾನ್‌ ಸಚಿವ ಎಸ್ಕಂದರ್ ಮೊಮೆನಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಅವರನ್ನು ರಾವಲ್ಪಿಂಡಿಯ ಜನರಲ್ ಹೆಡ್‌ಕ್ವಾರ್ಟರ್ಸ್‌ (GHQ) ನಲ್ಲಿ ಭೇಟಿಯಾಗಿ, ಇರಾನ್‌ನ ಪರವಾಗಿ ಮಹತ್ವದ ಸಂದೇಶವೊಂದನ್ನು ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.

ಸುಮಾರು 50 ನಿಮಿಷಗಳ ಕಾಲ ನಡೆದ ಮುಖಾಮುಖಿ ಸಭೆಯಲ್ಲಿ, ಇರಾನ್‌ನ ಉನ್ನತ ನಾಯಕತ್ವದ ಪರವಾಗಿ ಗೌಪ್ಯ ಸಂದೇಶವೊಂದನ್ನು ಅಸೀಂ ಮುನೀರ್ ಅವರಿಗೆ ನೀಡಲಾಗಿದೆ ಎಂದು ಪಾಕಿಸ್ತಾನದ ಭದ್ರತಾ ಮೂಲಗಳು ತಿಳಿಸಿವೆ. ಈ ಸಂದೇಶದ ವಿಷಯವನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ.

ಸಭೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಗ್ಗಿಸಲು ಹೊಸ ರಾಜತಾಂತ್ರಿಕ ಮಧ್ಯಸ್ಥಿಕೆ ರೂಪಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆ ಕಾಪಾಡುವ ಕುರಿತು ಉಭಯ ದೇಶಗಳು ಅಭಿಪ್ರಾಯ ವಿನಿಮಯ ಮಾಡಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

File photo
ಅಮೆರಿಕಕ್ಕೆ ದುಬಾರಿಯಾದ Iran ಕದನ: ಬಿಲಿಯನ್ ಗಟ್ಟಲೆ ಡಾಲರ್ ನಷ್ಟ, ಹೆಚ್ಚುವರಿ ಅನುದಾನಕ್ಕೆ Trump ಮೊರೆ..!

ಈ ಸಂದರ್ಭದಲ್ಲಿ ಇರಾನ್ ನಾಯಕತ್ವವು ಉದ್ವಿಗ್ನತೆ ಕಡಿಮೆ ಮಾಡಲು ಪಾಕಿಸ್ತಾನ ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದೆ ಎನ್ನಲಾಗಿದೆ.

ಪ್ರಾದೇಶಿಕ ಭದ್ರತೆ, ಸ್ಥಿರತೆ ಮತ್ತು ಆರ್ಥಿಕ ಸಮೃದ್ಧಿಯನ್ನು ಕಾಪಾಡುವ ನಿಟ್ಟಿನಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರ ಮುಂದುವರಿಸಲು ಒಪ್ಪಿಕೊಂಡಿವೆ ಎಂದು ವರದಿಯಾಗಿದೆ.

ಇರಾನ್ ಅಧಿಕಾರಿಗಳು 'ಇಸ್ಲಾಮಾಬಾದ್ ಒಪ್ಪಂದ (Islamabad MoU)' ರೂಪಿಸುವಲ್ಲಿ ಪಾಕಿಸ್ತಾನದ ಪಾತ್ರವನ್ನು ಮೆಚ್ಚಿದ್ದು, ಪಾಕಿಸ್ತಾನವನ್ನು "ಪ್ರಾದೇಶಿಕ ಶಾಂತಿಯ ಆಧಾರಸ್ತಂಭ" ಎಂದು ಬಣ್ಣಿಸಿರುವುದಾಗಿ ಮೂಲಗಳು ಹೇಳಿವೆ. ಆದರೆ, ಆ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ಸಭೆಯಲ್ಲಿ ಪಾಕಿಸ್ತಾನ–ಇರಾನ್ ಗಡಿಭಾಗದ ಭದ್ರತೆ, ಗಡಿ ನಿರ್ವಹಣೆ ಹಾಗೂ ಉಗ್ರ ಚಟುವಟಿಕೆಗಳನ್ನು ತಡೆಯುವ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ. ಭದ್ರತಾ ವಿಚಾರಗಳಲ್ಲಿ ನಿಕಟ ಸಮನ್ವಯ ಮುಂದುವರಿಸುವ ಹಾಗೂ ಪ್ರಾದೇಶಿಕ ಸ್ಥಿರತೆಯ ಕುರಿತು ನಿರಂತರ ಸಮಾಲೋಚನೆ ನಡೆಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆಯ ನಡುವೆ ತಾನು "ಪ್ರಾಮಾಣಿಕ ಮಧ್ಯಸ್ಥ" ಆಗಿ ಕಾರ್ಯನಿರ್ವಹಿಸಲು ಸಿದ್ಧವಿರುವುದನ್ನು ಪಾಕಿಸ್ತಾನ ಮತ್ತೊಮ್ಮೆ ಪುನರುಚ್ಚರಿಸಿದೆ.

ಭದ್ರತಾ ಮೂಲಗಳ ಪ್ರಕಾರ, ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಅವರು ಮುಂದಿನ ದಿನಗಳಲ್ಲಿ ಇರಾನ್ ನಾಯಕತ್ವದ ಈ ಸಂದೇಶವನ್ನು ಅಮೆರಿಕದ ಅಧಿಕಾರಿಗಳೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಅಲ್ಲದೆ, ಅವರು ಶೀಘ್ರದಲ್ಲೇ ಸೌದಿ ಅರೇಬಿಯಾ ಮತ್ತು ಅಮೆರಿಕಕ್ಕೆ ಭೇಟಿ ನೀಡಿ, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮಾತುಕತೆಯನ್ನು ಪುನರಾರಂಭಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಎಸ್ಕಂದರ್ ಮೊಮೆನಿ, ಇರಾನ್ ಸಂವಾದ ಮತ್ತು ಸಹಕಾರಕ್ಕೆ ಸಿದ್ಧವಿದ್ದರೂ, ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಕಾರ್ಯತಂತ್ರದ ವಿಷಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನೂ ಪಾಕಿಸ್ತಾನಕ್ಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com