ವಾರಕ್ಕೆ 70 ಗಂಟೆ 'ಜೀತ' ಸೂತ್ರ ಹೇಳಿಕೆ ಬೆನ್ನಲ್ಲೇ ಫ್ರಾನ್ಸ್‌ನಲ್ಲಿ ಇನ್ಫೋಸಿಸ್‌ಗೆ ₹1.9 ಕೋಟಿ ದಂಡ!

ಇನ್ಫೋಸಿಸ್‌ನ ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯು ಫ್ರಾನ್ಸ್‌ ದೇಶದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂಬುದು ಕಂಡುಬಂದ ನಂತರ ಫ್ರೆಂಚ್ ಕಾರ್ಮಿಕ ಅಧಿಕಾರಿಗಳು ಇನ್ಫೋಸಿಸ್‌ಗೆ ಕೋಟಿ ದಂಡ ವಿಧಿಸಿದ್ದಾರೆ.
Infosys Narayana Murty
ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥ ನಾರಾಯಣ ಮೂರ್ತಿ
Updated on

ಭಾರತದಲ್ಲಿ ಕೆಲಸದ ಸಂಸ್ಕೃತಿ ಬದಲಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ದೇಶ ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಇತ್ತೀಚಿಗೆ ಸಲಹೆ ನೀಡಿದ್ದರು. ಅವರ ವಾರಕ್ಕೆ 70 ಗಂಟೆ ಕೆಲಸದ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಫ್ರಾನ್ಸ್‌ನ ಕಾರ್ಮಿಕ ಕಾನೂನುಗಳಿಗೆ ಅನುಗುಣವಾಗಿರದ ಉದ್ಯೋಗಿಗಳ ಕೆಲಸದ ಸಮಯ ದಾಖಲಿಸುವ(Time Tracking) ವ್ಯವಸ್ಥೆ ಹೊಂದಿದ್ದ ಕಾರಣಕ್ಕೆ ಇನ್ಫೋಸಿಸ್‌ಗೆ 1,75,000 ಯುರೋ (ಸುಮಾರು ₹1.9 ಕೋಟಿ) ದಂಡ ವಿಧಿಸಲಾಗಿದೆ.

ಇನ್ಫೋಸಿಸ್‌ನ ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯು ಫ್ರಾನ್ಸ್‌ ದೇಶದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂಬುದು ಕಂಡುಬಂದ ನಂತರ ಫ್ರೆಂಚ್ ಕಾರ್ಮಿಕ ಅಧಿಕಾರಿಗಳು ಇನ್ಫೋಸಿಸ್‌ಗೆ ಕೋಟಿ ದಂಡ ವಿಧಿಸಿದ್ದಾರೆ.

Infosys Narayana Murty
ವಾರಕ್ಕೆ 70 ಗಂಟೆ ಕೆಲಸ: ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಉದ್ಯೋಗಕ್ಕೆ ಸೇರಿದ ರಿಷಿ ಸುನಕ್; ಮೀಮ್ಸ್ ಸುರಿಮಳೆ!

ಫ್ರಾನ್ಸ್‌ನ ಪ್ರಾದೇಶಿಕ ಕಾರ್ಮಿಕ ಪ್ರಾಧಿಕಾರ DRIEETS Ile-de-France ಈ ದಂಡವನ್ನು ವಿಧಿಸಿದೆ. ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ, ಇನ್ಫೋಸಿಸ್ ಗೆ ದಂಡ ವಿಧಿಸಿದ ಕುರಿತು ಪ್ರಾಧಿಕಾರದಿಂದ ಸಂವಹನ ಸ್ವೀಕರಿಸಿದೆ ಎಂದು ಔಟ್‌ಲುಕ್ ಬ್ಯುಸಿನೆಸ್ ವರದಿ ಮಾಡಿದೆ.

ಪರಿಶೀಲನೆ ವೇಳೆ ಕೆಲ ವರ್ಗದ ಉದ್ಯೋಗಿಗಳ ಕೆಲಸದ ಸಮಯದ ದಾಖಲಾತಿ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆ, ಪರಿಶೀಲನಾ ಸಾಮರ್ಥ್ಯ ಹಾಗೂ ಸಮರ್ಪಕ ಮೇಲ್ವಿಚಾರಣೆಯ ಕೊರತೆ ಕಂಡುಬಂದಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಫ್ರಾನ್ಸ್‌ನಲ್ಲಿ ಕಂಪನಿಗಳು ಉದ್ಯೋಗಿಗಳ ಕೆಲಸದ ಸಮಯವನ್ನು ಕಡ್ಡಾಯವಾಗಿ ದಾಖಲಿಸಬೇಕು. ಉದ್ಯೋಗಿಗಳು ತಮ್ಮ ಕೆಲಸದ ಸಮಯದ ದಾಖಲೆಗಳನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದಾಗಿರಬೇಕು. ಜೊತೆಗೆ, ಅಗತ್ಯವಿದ್ದರೆ ಸರ್ಕಾರದ ಅಧಿಕಾರಿಗಳ ಮುಂದೆ ಕಂಪನಿಯು ಆ ದಾಖಲೆಗಳನ್ನು ಸಮರ್ಥಿಸಬೇಕಾಗುತ್ತದೆ. ಇನ್ಫೋಸಿಸ್ ಈ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಿಲ್ಲ ಎಂಬುದು ತನಿಖೆಯಲ್ಲಿ ಕಂಡುಬಂದಿದೆ.

ಆದರೆ, ಯಾವ ವರ್ಗದ ಉದ್ಯೋಗಿಗಳ ಕುರಿತು ಈ ಉಲ್ಲಂಘನೆ ಕಂಡುಬಂದಿದೆ ಎಂಬುದನ್ನು ಇನ್ಫೋಸಿಸ್ ಬಹಿರಂಗಪಡಿಸಿಲ್ಲ. ಅಲ್ಲದೆ, ತನ್ನ ಕೆಲಸದ ಸಮಯ ದಾಖಲಿಸುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಫ್ರಾನ್ಸ್ ಸರ್ಕಾರ ಸೂಚನೆ ನೀಡಿದೆಯೇ ಎಂಬ ಬಗ್ಗೆಯೂ ಸಂಸ್ಥೆ ಸ್ಪಷ್ಟನೆ ನೀಡಿಲ್ಲ.

ಫ್ರಾನ್ಸ್‌ನಲ್ಲಿ ಪೂರ್ಣಾವಧಿ ಖಾಸಗಿ ಉದ್ಯೋಗಿಗಳಿಗೆ ವಾರಕ್ಕೆ 35 ಗಂಟೆಗಳ ಕೆಲಸವೇ ಕಾನೂನುಬದ್ಧ ಮಾನದಂಡವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಇದನ್ನು ಗರಿಷ್ಠ 48 ಗಂಟೆಗಳವರೆಗೆ ವಿಸ್ತರಿಸಬಹುದಾದರೂ, 35 ಗಂಟೆ ಮೀರಿದ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುವುದು ಕಡ್ಡಾಯವಾಗಿದೆ. ಮೊದಲ ಎಂಟು ಗಂಟೆಗಳ ಹೆಚ್ಚುವರಿ ಕೆಲಸಕ್ಕೆ ಶೇ.125ರಷ್ಟು ಹಾಗೂ ನಂತರದ ಗಂಟೆಗಳಿಗೆ ಶೇ.150ರಷ್ಟು ಹೆಚ್ಚುವರಿ ಸಂಭಾವನೆ ನೀಡಬೇಕು ಎಂದು ಅಲ್ಲಿನ ಕಾರ್ಮಿಕ ಕಾನೂನು ಹೇಳುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com