ವಾಣಿಜ್ಯ ಹಡಗುಗಳ ಮೇಲಿನ ದಾಳಿ ಒಪ್ಪಲು ಸಾಧ್ಯವಿಲ್ಲ, ಸಮುದ್ರ ಮಾರ್ಗಗಳ ಭದ್ರತೆ ಕಾಪಾಡಿ; ವಿಶ್ವಸಂಸ್ಥೆಯಲ್ಲಿ ಭಾರತ ಗುಡುಗು

ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಈಗ ಇತರ ರಾಷ್ಟ್ರಗಳಿಗೂ ವ್ಯಾಪಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದ ಅವರು, ಹೆಚ್ಚುತ್ತಿರುವ ಸಾವು-ನೋವು, ಜನರ ಸ್ಥಳಾಂತರ, ವ್ಯಾಪಾರ ಚಟುವಟಿಕೆಗಳ ಸ್ಥಗಿತ ಹಾಗೂ ಇಂಧನ ಭದ್ರತೆಯ ಮೇಲಿನ ಪರಿಣಾಮಗಳು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಆತಂಕ ಉಂಟುಮಾಡಿವೆ.
India's Permanent Representative to the United Nations Parvathaneni Harish.
ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಹರೀಶ್ ಪರ್ವತನೇನಿ
Updated on

ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ನಡುವೆ ವ್ಯಾಪಾರ ಹಡಗುಗಳು ಮತ್ತು ಸಮುದ್ರ ಮಾರ್ಗಗಳ ಮೇಲಿನ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯಲ್ಲಿ ಭಾರತ ಬಲವಾದ ಧ್ವನಿಯಲ್ಲಿ ಆಗ್ರಹಿಸಿದೆ.

ಈ ಪ್ರದೇಶದಲ್ಲಿ ನಡೆದ ದಾಳಿಗಳಿಂದ ಕೆಲ ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ‘ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಪಾಡುವಿಕೆ’ ಕುರಿತ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಹರೀಶ್ ಪರ್ವತನೇನಿ, ಇರಾನ್ ಮತ್ತು ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

"ರಂಜಾನ್ ಪವಿತ್ರ ಮಾಸದ ವೇಳೆ ಆರಂಭವಾದ ಈ ಸಂಘರ್ಷ ಆತಂಕಕಾರಿ ಬೆಳವಣಿಗೆಯಾಗಿದೆ. ಎಲ್ಲಾ ದೇಶಗಳು ಸಂಯಮ ಪಾಲಿಸಬೇಕು, ಉದ್ವಿಗ್ನತೆಯನ್ನು ಹೆಚ್ಚಿಸುವ ಕ್ರಮಗಳನ್ನು ತಪ್ಪಿಸಬೇಕು ಹಾಗೂ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು" ಎಂದು ಹೇಳಿದರು.

ಇದೇ ವೇಳೆ ಸಮುದ್ರ ಭದ್ರತೆ ಕುರಿತು ಮಾತನಾಡಿದ ಅವರು, ವ್ಯಾಪಾರ ಹಡಗುಗಳು ಮತ್ತು ಸಮುದ್ರ ಸಂಪರ್ಕ ಮಾರ್ಗಗಳ ಮೇಲಿನ ದಾಳಿಗಳನ್ನು ಭಾರತ ತೀವ್ರವಾಗಿ ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.

"ಈ ಪ್ರದೇಶದ ದೇಶಗಳು ಹಾಗೂ ವ್ಯಾಪಾರ ಹಡಗುಗಳ ಮೇಲಿನ ದಾಳಿಗಳ ಪರಿಣಾಮವಾಗಿ ಹಲವಾರು ಭಾರತೀಯರು ನಾಪತ್ತೆಯಾಗಿದ್ದಾರೆ" ಎಂದು ಹೇಳಿದರು.

ಇದಕ್ಕೂ ಮುನ್ನ ಒಮನ್ ಕರಾವಳಿ ಬಳಿ 24 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ 'ಸೆಟ್ಟೆಬೆಲ್ಲೊ' ವಾಣಿಜ್ಯ ಟ್ಯಾಂಕರ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಅಮೆರಿಕದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯನ್ನು ಕರೆಸಿ ತೀವ್ರ ಪ್ರತಿಭಟನೆ ದಾಖಲಿಸಿತ್ತು. ಈ ದಾಳಿಯಲ್ಲಿ ಮೂವರು ಭಾರತೀಯ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ, ಎರಡು ದಿನಗಳ ಹಿಂದೆ 24 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ಪಲಾವ್ ಧ್ವಜದ ಹಡಗಿನ ಮೇಲೂ ದಾಳಿ ನಡೆದಿತ್ತು. ಈ ಘಟನೆಗಳು ಭಾರತೀಯ ನಾಗರಿಕರ ಸುರಕ್ಷತೆ ಕುರಿತಾಗಿ ಭಾರತದ ಕಳವಳವನ್ನು ಮತ್ತಷ್ಟು ಹೆಚ್ಚಿಸಿವೆ.

India's Permanent Representative to the United Nations Parvathaneni Harish.
“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ಒಂದು ಕೋಟಿ ಭಾರತೀಯರು ವಾಸಿಸುತ್ತಿದ್ದು, ಅವರ ಸುರಕ್ಷತೆ ಭಾರತಕ್ಕೆ ಅತ್ಯುನ್ನತ ಆದ್ಯತೆಯಾಗಿದೆ ಎಂದು ಪರ್ವಥನೇನಿ ಹೇಳಿದರು.

"ಭಾರತದ ವ್ಯಾಪಾರ ಮತ್ತು ಇಂಧನ ಪೂರೈಕೆ ಸರಪಳಿಗಳು ಈ ಪ್ರದೇಶದ ಸ್ಥಿರತೆಯ ಮೇಲೆ ಅವಲಂಬಿತವಾಗಿವೆ. ಯಾವುದೇ ದೊಡ್ಡ ವ್ಯತ್ಯಯ ಭಾರತೀಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ಎಚ್ಚರಿಸಿದರು.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಈಗ ಇತರ ರಾಷ್ಟ್ರಗಳಿಗೂ ವ್ಯಾಪಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದ ಅವರು, ಹೆಚ್ಚುತ್ತಿರುವ ಸಾವು-ನೋವು, ಜನರ ಸ್ಥಳಾಂತರ, ವ್ಯಾಪಾರ ಚಟುವಟಿಕೆಗಳ ಸ್ಥಗಿತ ಹಾಗೂ ಇಂಧನ ಭದ್ರತೆಯ ಮೇಲಿನ ಪರಿಣಾಮಗಳು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಆತಂಕ ಉಂಟುಮಾಡಿವೆ ಎಂದು ಹೇಳಿದರು.

ಗಾಜಾ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಅಲ್ಲಿ ಮಾನವೀಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಶಾಶ್ವತ ಕದನ ವಿರಾಮ, ಮಾನವೀಯ ನೆರವಿನ ನಿರ್ಬಂಧರಹಿತ ಪ್ರವೇಶ ಹಾಗೂ ಎರಡು ರಾಷ್ಟ್ರಗಳ ಪರಿಹಾರದ ಆಧಾರದ ಮೇಲೆ ಶಾಂತಿ ಮಾತುಕತೆ ನಡೆಯಬೇಕೆಂದು ಪುನರುಚ್ಚರಿಸಿತು.

ಇದೇ ವೇಳೆ, ಪೂರ್ವದಲ್ಲಿರುವ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆ (UNRWA) ನೀಡಲಾಗುವ ವಾರ್ಷಿಕ 5 ಮಿಲಿಯನ್ ಡಾಲರ್ ನೆರವಿನ ಮೊದಲ ಕಂತಾಗಿ 2.5 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಭಾರತ ಘೋಷಿಸಿದೆ.

ಲೆಬನಾನ್‌ನಲ್ಲಿನ ಪರಿಸ್ಥಿತಿಯ ಕುರಿತು ಮಾತನಾಡಿದ ಭಾರತ, ಅಲ್ಲಿನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕೆಂದು ಒತ್ತಾಯಿಸಿತು.

ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ಪಡೆ ಶಾಂತಿಪಾಲನಾ ಪಡೆಯ ಭಾಗವಾಗಿ ಭಾರತೀಯ ಯೋಧರು ಸೇವೆ ಸಲ್ಲಿಸುತ್ತಿರುವುದರಿಂದ ಅವರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಭಾರತ ಆಗ್ರಹಿಸಿತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯವೈಖರಿಯ ಬಗ್ಗೆಯೂ ಭಾರತ ಪ್ರಶ್ನೆ ಎತ್ತಿದ್ದು, ಪ್ರಸ್ತುತ ಜಾಗತಿಕ ವಾಸ್ತವತೆಗಳಿಗೆ ಅನುಗುಣವಾಗಿ ಭದ್ರತಾ ಮಂಡಳಿಯಲ್ಲಿ ಸಮಗ್ರ ಸುಧಾರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿತು.

ಶಾಶ್ವತ ಮತ್ತು ತಾತ್ಕಾಲಿಕ ಸದಸ್ಯತ್ವ ವಿಭಾಗಗಳೆರಡರಲ್ಲೂ ವಿಸ್ತರಣೆ ಮಾಡಿ, ಇಂದಿನ ಜಾಗತಿಕ ರಾಜಕೀಯ ವಾಸ್ತವತೆಗಳನ್ನು ಪ್ರತಿಬಿಂಬಿಸುವಂತೆ ಭದ್ರತಾ ಮಂಡಳಿಯನ್ನು ಪುನರ್‌ರಚಿಸಬೇಕು ಎಂದು ಒತ್ತಾಯಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com