ಪರಮಾಣು ಶಸ್ತ್ರಾಸ್ತ್ರ ಹೊಂದಲ್ಲ ಎಂದು ಇರಾನ್ 'ಒಪ್ಪಿಕೊಂಡಿದೆ'; $300 ಮಿಲಿಯನ್ ನಿಧಿ ಒದಗಿಸುವುದನ್ನು ತಿರಸ್ಕರಿಸಿದ ಡೊನಾಲ್ಡ್ ಟ್ರಂಪ್!

ಜೂನ್ 19ರ ಶುಕ್ರವಾರದಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ 60 ದಿನಗಳ ಮಾತುಕತೆಯ ಅವಧಿಯಲ್ಲಿ ಇರಾನ್‌ನ ಪರಮಾಣು ವಿಷಯದ ಕುರಿತು ಯಾವುದೇ ಅಂತಿಮ ಒಪ್ಪಂದಕ್ಕೆ ಬರಲಾಗುವುದು ಎಂದು ಇರಾನ್ ಮಾಧ್ಯಮ ವರದಿಗಳು ಹೇಳಿಕೊಂಡಿವೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕ-ಇರಾನ್ ನಡುವಿನ ಒಪ್ಪಂದದಲ್ಲಿ ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಭವಿಷ್ಯದ ಬಗ್ಗೆ ವಿವರಗಳು ಅಸ್ಪಷ್ಟವಾಗಿರುವ ಬೆನ್ನಲ್ಲೇ, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಇಸ್ಲಾಮಿಕ್ ಗಣರಾಜ್ಯವು ತನ್ನ ಬಾಧ್ಯತೆಗಳನ್ನು ಎತ್ತಿಹಿಡಿದರೆ ಶಾಂತಿ ಒಪ್ಪಂದದ ಭಾಗವಾಗಿ ಇರಾನ್‌ಗೆ 300 ಬಿಲಿಯನ್ ಡಾಲರ್ ಪುನರ್ನಿರ್ಮಾಣ ನಿಧಿ ಸಿಗುವುದರ ಬಗ್ಗೆಯೂ ಅಮೆರಿಕ ನಾಯಕ ಅನುಮಾನ ವ್ಯಕ್ತಪಡಿಸಿದ್ದಾರೆ.

'ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ ಎಂದು ಇರಾನ್ ಒಪ್ಪಿಕೊಂಡಿದೆ! ಅಲ್ಲದೆ, ಅಮೆರಿಕ ಇರಾನ್‌ಗೆ 300 ಮಿಲಿಯನ್ ಡಾಲರ್ ಪಾವತಿಸುತ್ತಿದೆ ಎಂಬ ಸುದ್ದಿಯು ಡುಮೋಕ್ರಾಟ್‌ಗಳು ಪ್ರಕಟಿಸಿದ ನಕಲಿ ಸುದ್ದಿಯಾಗಿದೆ' ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ

ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮೆಮೋರಾಂಡಮ್ ಆಫ್ ಅಂಡರ್‌ಸ್ಟಾಂಡಿಗ್ (MoU)ಗೆ ಸಂಬಂಧಿಸಿದಂತೆ ಲಭ್ಯವಿರುವ ವಿವರಗಳು, ಟೆಹ್ರಾನ್ ಕೆಲವು ಮಾನದಂಡಗಳನ್ನು ಪೂರೈಸಿದರೆ ಇರಾನ್‌ನ ಸ್ಥಗಿತಗೊಂಡಿರುವ ನಿಧಿಗಳು, ನಿರ್ಬಂಧಗಳ ಪರಿಹಾರ ಮತ್ತು ಇರಾನ್ ಪುನರ್ನಿರ್ಮಾಣಕ್ಕೆ ಸಹಾಯ ಮಾಡಲು $300 ಬಿಲಿಯನ್ ನಿಧಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ.

ಇರಾನ್ ಪರಮಾಣು ಕಾರ್ಯಕ್ರಮವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಟ್ರಂಪ್ ತಂಡ ಇನ್ನೂ ವಿವರಿಸಿಲ್ಲ. ಇರಾನ್ ಈ ಒಪ್ಪಂದಕ್ಕೆ ಬದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿ ಯಾರದ್ದು ಮತ್ತು ಅಮೆರಿಕದ ದಾಳಿಯಿಂದ ತೀವ್ರವಾಗಿ ಹಾನಿಗೊಳಗಾದ ಪರಮಾಣು ತಾಣಗಳ ಅಡಿಯಲ್ಲಿ ಹೂತುಹೋಗಿರುವ ಹೆಚ್ಚು ಸಮೃದ್ಧ ಯುರೇನಿಯಂ ಅನ್ನು ಯಾರು ನಾಶಪಡಿಸುತ್ತಾರೆ ಅಥವಾ ತೆಗೆದುಹಾಕುತ್ತಾರೆ ಎಂಬುದನ್ನು ಇದು ಒಳಗೊಂಡಿದೆ.

Donald Trump
ಇರಾನ್ ಶಾಂತಿ ಒಪ್ಪಂದ ಬಹುತೇಕ ಹಳಿತಪ್ಪಿದೆ, ಬೆಂಜಮಿನ್ ನೆತನ್ಯಾಹು 'ತುಂಬಾ ಕಷ್ಟಕರ ವ್ಯಕ್ತಿ': ಡೊನಾಲ್ಡ್ ಟ್ರಂಪ್

ಜೂನ್ 19ರ ಶುಕ್ರವಾರದಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ 60 ದಿನಗಳ ಮಾತುಕತೆಯ ಅವಧಿಯಲ್ಲಿ ಇರಾನ್‌ನ ಪರಮಾಣು ವಿಷಯದ ಕುರಿತು ಯಾವುದೇ ಅಂತಿಮ ಒಪ್ಪಂದಕ್ಕೆ ಬರಲಾಗುವುದು ಎಂದು ಇರಾನ್ ಮಾಧ್ಯಮ ವರದಿಗಳು ಹೇಳಿಕೊಂಡಿವೆ.

ಜೆಡಿ ವ್ಯಾನ್ಸ್ ಹೇಳಿದ್ದೇನು

ದಾಖಲೆಯ ಪ್ರತಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ವಾರ ಶ್ವೇತಭವನವು ಟಿಪ್ಪಣಿಯನ್ನು ಬಿಡುಗಡೆ ಮಾಡಲಿದೆ ಮತ್ತು ಇರಾನ್ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದ ಹೊರತು ಒಂದು ಬಿಡಿಗಾಸಿನ ಹಣವನ್ನು ಪಡೆಯುವುದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಎಬಿಸಿ ನ್ಯೂಸ್‌ಗೆ ತಿಳಿಸಿದರು.

ಇರಾನ್‌ನ ಪರಮಾಣು ಭವಿಷ್ಯದ ಕುರಿತು ಟ್ರಂಪ್ ಅವರ ನಿಲುವನ್ನು ವ್ಯಾನ್ಸ್ ಬೆಂಬಲಿಸಿದರು. ಅಧ್ಯಕ್ಷರ ರಾಜತಾಂತ್ರಿಕ ಪ್ರಯತ್ನಗಳು ಮತ್ತೊಮ್ಮೆ ಫಲಿತಾಂಶಗಳನ್ನು ನೀಡಿವೆ ಮತ್ತು ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದನ್ನು ತಡೆಯುವುದು ಒಪ್ಪಂದದ ಕೇಂದ್ರ ಉದ್ದೇಶವಾಗಿ ಉಳಿದಿದೆ ಎಂದು ಅವರು ಪುನರುಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com