ಪಾಕ್‌ನಲ್ಲೂ ಖಮೇನಿ ಹತ್ಯೆ ಸಂಚಲನ; ಕರಾಚಿಯ ಅಮೆರಿಕ ದೂತಾವಾಸದ ಬಳಿ ಭದ್ರತಾ ಪಡೆಯೊಂದಿಗೆ ಪ್ರತಿಭಟನಾಕಾರರ ಘರ್ಷಣೆ; 8 ಮಂದಿ ಸಾವು

ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಒಬ್ಬ ಪ್ರತಿಭಟನಾಕಾರ ಸಾವಿಗೀಡಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
Hundreds of people storm US Consulate in Karachi
ಕರಾಚಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು
Updated on

ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕದ ದೂತಾವಾಸದ ಬಳಿ ಭಾನುವಾರ ಭದ್ರತಾ ಪಡೆಗಳು ಮತ್ತು ಇರಾನ್ ಬೆಂಬಲಿಸಿ ನಡೆದ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

'ಘಟನೆಯಲ್ಲಿ ನಾವು ಕನಿಷ್ಠ ಎಂಟು ಮೃತದೇಹಗಳನ್ನು ಕರಾಚಿಯ ನಾಗರಿಕ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದೇವೆ. ಆದರೆ, 20 ಜನರು ಗಾಯಗೊಂಡಿದ್ದಾರೆ. ಹೆಚ್ಚಿನವರಿಗೆ ಗುಂಡೇಟಿನ ಗಾಯಗಳಾಗಿವೆ' ಎಂದು ಎಧಿ ಫೌಂಡೇಶನ್ ರಕ್ಷಣಾ ಸೇವೆಯ ವಕ್ತಾರ ಮುಹಮ್ಮದ್ ಅಮೀನ್ ಹೇಳಿದ್ದಾರೆ.

ಶನಿವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ, ಜಗತ್ತಿನಾದ್ಯಂತ ಶಿಯಾ ಮುಸ್ಲಿಮರಿಂದ ಪೂಜಿಸಲ್ಪಡುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ, ಇರಾನ್ ಅನ್ನು ಬೆಂಬಲಿಸಿ ನೂರಾರು ಪ್ರತಿಭಟನಾಕಾರರು ಅಮೆರಿಕ ರಾಯಭಾರ ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದರು.

ಯುವಕರ ಗುಂಪೊಂದು ಮುಖ್ಯ ದ್ವಾರವನ್ನು ಹತ್ತಿ ಕಾನ್ಸುಲರ್ ಕಟ್ಟಡದ ಡ್ರೈವ್‌ವೇಗೆ ಪ್ರವೇಶ ಪಡೆದು, ಕೆಲವು ಕಿಟಕಿಗಳನ್ನು ಒಡೆದು ಹಾಕಿತ್ತು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಮತ್ತು ಶ್ರುವಾಯು ಹಾರಿಸಿದರು ಎಂದು ಎಎಫ್‌ಪಿ ಪತ್ರಕರ್ತರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿನ ವಿಡಿಯೋಗಳಲ್ಲಿ ಯುವಕರು ಕಾನ್ಸುಲೇಟ್ ಕಚೇರಿಯ ಮುಖ್ಯ ಕಟ್ಟಡದ ಕಿಟಕಿಗಳನ್ನು ಒಡೆದು ಹಾಕುತ್ತಿರುವುದನ್ನು ನೋಡಬಹುದು.

Hundreds of people storm US Consulate in Karachi
ಖಮೇನಿ ಹತ್ಯೆ: 'ಪ್ರತೀಕಾರ ಬರುತ್ತೆ.. ನಿಮ್ಮನ್ನು ಬೇಟೆಯಾಡುತ್ತೆ'.. ಲೈವ್ ನಲ್ಲೇ ಬಿಕ್ಕಿ ಬಿಕ್ಕಿ ಅತ್ತ ನಿರೂಪಕಿ, ಇಸ್ರೇಲ್-ಅಮೆರಿಕಗೆ ಎಚ್ಚರಿಕೆ

'ನಾವು ಒಗ್ಗಟ್ಟಿನಿಂದ ಇರಬೇಕು. ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ' ಎಂದು ಯುವ ಪ್ರತಿಭಟನಾಕಾರರೊಬ್ಬರು ಹೇಳಿದರೆ, 'ನಾವು ಕರಾಚಿಯಲ್ಲಿರುವ ಅಮೆರಿಕದ ಕಾನ್ಸುಲೇಟ್ ಕಚೇರಿಗೆ ಬೆಂಕಿ ಹಚ್ಚುತ್ತಿದ್ದೇವೆ. ದೇವರು ಬಯಸಿದರೆ, ನಮ್ಮ ನಾಯಕನ ಹತ್ಯೆಗೆ ನಾವು ಸೇಡು ತೀರಿಸಿಕೊಳ್ಳುತ್ತಿದ್ದೇವೆ' ಎಂದು ಮತ್ತೊಬ್ಬ ಪ್ರತಿಭಟನಾಕಾರ ಹೇಳಿರುವುದು ಸೆರೆಯಾಗಿದೆ. ಇದೇ ವಿಡಿಯೋದಲ್ಲಿ ಇತರರು ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಪೂರ್ವ ನಗರವಾದ ಲಾಹೋರ್ ಮತ್ತು ಉತ್ತರ ಸ್ಕಾರ್ದುನಲ್ಲಿ ಸಾವಿರಾರು ಜನರು ಬೀದಿಗಿಳಿಯುತ್ತಿದ್ದಾರೆ. ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಇರುವ ರಾಜತಾಂತ್ರಿಕ ಪ್ರದೇಶದ ಬಳಿ ಮಧ್ಯಾಹ್ನ ಪ್ರದರ್ಶನ ನಡೆಯಲಿದೆ.

ಲಾಹೋರ್ ಮತ್ತು ಸ್ಕಾರ್ದುವಿನಲ್ಲಿಯೂ ದೊಡ್ಡ ಜನಸಮೂಹ ಪ್ರತಿಭಟನೆ ನಡೆಸುತ್ತಿದೆ ಮತ್ತು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಇರುವ ರಾಜತಾಂತ್ರಿಕ ಪ್ರದೇಶದ ಬಳಿ ಸಂಜೆಯ ವೇಳೆ ಮತ್ತೊಂದು ಪ್ರತಿಭಟನೆಯನ್ನು ಯೋಜಿಸಲಾಗಿದೆ.

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡಿ ದೇಶದ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಕೊಂದ ನಂತರ ಭಾನುವಾರ ಪಾಕಿಸ್ತಾನದ ಬಂದರು ನಗರವಾದ ಕರಾಚಿಯಲ್ಲಿರುವ ಅಮೆರಿಕ ದೂತಾವಾಸಕ್ಕೆ ನುಗ್ಗಿದ ನೂರಾರು ಜನರು, ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Hundreds of people storm US Consulate in Karachi
ಇರಾನ್ ಮೇಲೆ ಅಮೆರಿಕಾ–ಇಸ್ರೇಲ್ ಯುದ್ಧ: ಭಾರತ ಸೇರಿ ವಿಶ್ವದ ಬೇರೆ ದೇಶಗಳ ಮೇಲೆ ಪರಿಣಾಮವೇನು?

ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದು, ಅಶ್ರುವಾಯು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ಜವಾದ್ ಹೇಳಿದ್ದಾರೆ.

ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಒಬ್ಬ ಪ್ರತಿಭಟನಾಕಾರ ಸಾವಿಗೀಡಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಪ್ರಮುಖ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸಾವಿಗೀಡಾದ ಕೆಲವೇ ಗಂಟೆಗಳ ನಂತರ ಕಾನ್ಸುಲೇಟ್ ಮೇಲೆ ದಾಳಿ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com