ಯುದ್ಧದಲ್ಲಿ ಭಾಗಿಯಾಗದಂತೆ ಯುರೋಪಿಯನ್ ದೇಶಗಳಿಗೆ ಇರಾನ್ ಎಚ್ಚರಿಕೆ; ಲೆಬನಾನ್ ಮೇಲೆ ಇಸ್ರೇಲ್ ದಾಳಿ

ಇದರಿಂದ ಆಕ್ರೋಶಗೊಂಡಿರುವ ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್, ಇರಾನ್‌ನ ಕ್ಷಿಪಣಿ ಉಡಾವಣಾ ಸಾಮರ್ಥ್ಯ ನಾಶಮಾಡಲು "ರಕ್ಷಣಾತ್ಮಕ ಕ್ರಮ" ತೆಗೆದುಕೊಳ್ಳಬಹುದು ಹೇಳಿವೆ.
Iran warns European countries against joining war
ಮಧ್ಯಪ್ರಾಚ್ಯ ಉದ್ವಿಗ್ನ
Updated on

ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದ ಬಳಿಕ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಪ್ರತಿಕಾರವಾಗಿ ಟೆಹ್ರಾನ್, ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿಗಳನ್ನು ಮುಂದುವರೆಸಿದೆ.

ಇದರಿಂದ ಆಕ್ರೋಶಗೊಂಡಿರುವ ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್, ಇರಾನ್‌ನ ಕ್ಷಿಪಣಿ ಉಡಾವಣಾ ಸಾಮರ್ಥ್ಯ ನಾಶಮಾಡಲು "ರಕ್ಷಣಾತ್ಮಕ ಕ್ರಮ" ತೆಗೆದುಕೊಳ್ಳಬಹುದು ಹೇಳಿವೆ. ಆದರೆ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಯುದ್ಧದಲ್ಲಿ ಭಾಗಿಯಾಗದಂತೆ ಇರಾನ್ ಮಂಗಳವಾರ ಯುರೋಪಿಯನ್ ದೇಶಗಳಿ ಎಚ್ಚರಿಕೆ ನೀಡಿದೆ.

"ಇದು ಯುದ್ಧದ ಸಮಯವಾಗಿದೆ. ಇರಾನ್ ವಿರುದ್ಧದ ಯಾವುದೇ ಕೃತ್ಯವನ್ನು ಆಕ್ರಮಣಕಾರರೊಂದಿಗೆ ಕೈಜೋಡಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ಇರಾನ್ ವಿರುದ್ಧದ ಯುದ್ಧದ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ" ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Iran warns European countries against joining war
ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುವ ಹಡಗುಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ; ಅಮೆರಿಕ ಹೇಳಿದ್ದೇನು?

ಯುದ್ಧವು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ತನ್ನ ಪಡೆಗಳು ಇಸ್ರೇಲ್ ಮತ್ತು ಕತಾರ್‌ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಯ ಮೇಲೆ ದಾಳಿ ನಡೆಸಿವೆ ಎಂದು ಇರಾನ್ ಸೇನೆ ಹೇಳಿದೆ.

ಇರಾನ್ ಅಧ್ಯಕ್ಷರ ಕಚೇರಿ, ಭದ್ರತಾ ಮಂಡಳಿ ಕಟ್ಟಡದ ಮೇಲೆ ದಾಳಿ: ಇಸ್ರೇಲ್

ಇಸ್ರೇಲ್ ಸೇನೆಯು ಮಂಗಳವಾರ ಇರಾನ್ ಅಧ್ಯಕ್ಷರ ಕಚೇರಿ ಮತ್ತು ಟೆಹ್ರಾನ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಮಂಡಳಿ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ಹೇಳಿದೆ.

"ಇಸ್ರೇಲಿ ವಾಯುಪಡೆ... ಟೆಹ್ರಾನ್‌ನ ಹೃದಯಭಾಗದಲ್ಲಿರುವ ಇರಾನಿನ ಭಯೋತ್ಪಾದಕ ಆಡಳಿತದ ಸೌಲಭ್ಯಗಳನ್ನು ರಾತ್ರೋರಾತ್ರಿ ಹೊಡೆದುರುಳಿಸಿದೆ" ಎಂದು ಸೇನೆ ತಿಳಿಸಿದೆ.

ಲೆಬನಾನ್ ಮೇಲೆ ಇಸ್ರೇಲ್ ಭೂದಾಳಿ

ಇಸ್ರೇಲ್ ರಕ್ಷಣಾ ಸಚಿವರು ತಮ್ಮ ಸೈನಿಕರಿಗೆ "ಲೆಬನಾನ್‌ನಲ್ಲಿ ಹೆಚ್ಚುವರಿ ಕಾರ್ಯತಂತ್ರದ ಸ್ಥಾನಗಳ ಮೇಲೆ ಹಿಡಿತ ಸಾಧಿಸುವಂತೆ" ಸೂಚಿಸಿದ ಸ್ವಲ್ಪ ಸಮಯದ ನಂತರ, ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್‌ನ ಗಡಿ ಪ್ರದೇಶಕ್ಕೆ ಧಾವಿಸಿವೆ ಎಂದು ಲೆಬನಾನ್ ಸೇನೆ ಮಂಗಳವಾರ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com