ತಮ್ಮ ಮಗ ಇರಾನ್‌ನ ಸರ್ವೋಚ್ಚ ನಾಯಕನಾಗುವುದು ಖಮೇನಿಗೆ ಸುತಾರಾಂ ಇಷ್ಟವಿರಲಿಲ್ಲ: 'ಉಯಿಲು' ಪತ್ರದಲ್ಲಿ ಉಲ್ಲೇಖ!

ಫೆಬ್ರವರಿ 28 ರಂದು ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಲಿ ಖಮೇನಿ, ತಮ್ಮ ಮಗ ತನ್ನ ಉತ್ತರಾಧಿಕಾರಿಯಾಗಲು ನನಗೆ ಒಪ್ಪಿಗೆಯಿಲ್ಲ ಎಂದು ತಮ್ಮ ಉಯಿಲಿನಲ್ಲಿ ಸ್ಪಷ್ಟಪಡಿಸಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ
Khamenei And his son Mojtaba
ಖಮೇನಿ ಮತ್ತು ಪುತ್ರ ಮೊಜ್ತಬಾ
Updated on

ಮೊಜ್ತಬಾ ಖಮೇನಿ ಇರಾನ್‌ನ ಮುಂದಿನ ಸರ್ವೋಚ್ಚ ನಾಯಕರಾಗಬೇಕೆಂದು ಕೆಲವೇ ಜನರು ಬಯಸಿದ್ದರು, ಆದರೆ ಅವರ ಸ್ವಂತ ತಂದೆ ಖಮೇನಿಗೆ ತನ್ನ ಪುತ್ರ ಇರಾನ್ ನ ಸರ್ವಾಧಿಕಾಯರಿಯಾಗುವುದು ಸ್ವತಃ ಇಷ್ಟವಿರಲಿಲ್ಲ ಎಂಬುದು ಬಹಿರಂಗವಾಗಿದೆ.

ಫೆಬ್ರವರಿ 28 ರಂದು ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಲಿ ಖಮೇನಿ, ತಮ್ಮ ಮಗ ತನ್ನ ಉತ್ತರಾಧಿಕಾರಿಯಾಗಲು ನನಗೆ ಒಪ್ಪಿಗೆಯಿಲ್ಲ ಎಂದು ತಮ್ಮ ಉಯಿಲಿನಲ್ಲಿ ಸ್ಪಷ್ಟಪಡಿಸಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಆದಾಗ್ಯೂ, ಪ್ರಬಲ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಂತಿಮವಾಗಿ ಮೊಜ್ತಬಾ ಅವರನ್ನು ಆ ಸ್ಥಾನದಲ್ಲಿ ಕೂರಿಸಿದೆ.

ತಜ್ಞರ ಪ್ರಕಾರ, ಖಮೇನಿ ತಮ್ಮ ಮಗನನ್ನು ಈ ಹುದ್ದೆಗೆ ಸೂಕ್ತವೇ ಎಂಬ ಬಗ್ಗೆ ಗಂಭೀರವಾಗಿ ಅನುಮಾನ ವ್ಯಕ್ತ ಪಡಿಸಿದ್ದರು, ಖಮೇನಿ ತಮ್ಮ ಉಯಿಲಿನಲ್ಲಿ, ಪುತ್ರ ಮೊಜ್ತಬಾ ಅವರನ್ನು ಉತ್ತರಾಧಿಕಾರಿಯಾಗಿ ಹೆಸರಿಸಬಾರದೆಂದು ಸ್ಪಷ್ಟವಾಗಿ ಹೇಳಿದ್ದರು" ಎಂದು ಇರಾನಿನ ಗುಪ್ತಚರ ಜಾಲಗಳೊಂದಿಗೆ ಸಂಬಂಧ ಹೊಂದಿರುವ ವಿರೋಧ ಗುಂಪಿನ ನ್ಯಾಷನಲ್ ಯೂನಿಯನ್ ಫಾರ್ ಡೆಮಾಕ್ರಸಿಯ ಸಂಶೋಧನಾ ನಿರ್ದೇಶಕ ಖೋಸ್ರೊ ಇಸ್ಫಹಾನಿ ತಿಳಿಸಿದ್ದಾರೆ.

ದೇಶವನ್ನು ನಡೆಸಲು ಅಗತ್ಯವಾದ ಅನುಭವ ಮತ್ತು ರಾಜಕೀಯ ಸ್ಥಾನಮಾನವನ್ನು ಮೊಜ್ತಬಾ ಹೊಂದಿಲ್ಲ ಎಂದು ಖಮೇನಿ ನಂಬಿದ್ದರು ಎಂದು ಇಸ್ಫಹಾನಿ ಹೇಳಿದರು. "ಮೊಜ್ತಬಾ ಒಬ್ಬ ದುರ್ಬಲ ಯುವ ಧರ್ಮಗುರು, ಅವರು ರಾಜಕೀಯ ಜೀವನದ ವಿಷಯದಲ್ಲಿ ಏನನ್ನೂ ಸಾಧಿಸಿಲ್ಲ" ಎಂದು ಇಸ್ಫಹಾನಿ ಹೇಳಿದರು. ಇಷ್ಟು ವರ್ಷಗಳಿಂದ, ಅವರು ತಮ್ಮ ತಂದೆಯ ಹೆಸರಿಲ್ಲದೆ ಏನನ್ನೂ ಸಾಧಿಸಿಲ್ಲ" ಎಂದು ಅವರು ಹೇಳಿದರು.

Khamenei And his son Mojtaba
West Asia conflict: ಇರಾನ್‌ ಪರಮೋಚ್ಛ ನಾಯಕನಾಗಿ ಮೊಜ್ತಬಾ ಖಮೇನಿ ನೇಮಕ

ಇರಾನ್‌ನ ನಾಯಕತ್ವದ ಉತ್ತರಾಧಿಕಾರವನ್ನು ಸಾಮಾನ್ಯವಾಗಿ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ಕ್ಲೆರಿಕಲ್ ಸಂಸ್ಥೆಯಾದ ತಜ್ಞರ ಸಭೆ ನಿರ್ಧರಿಸುತ್ತದೆ. ಆದರೆ ಮೊಜ್ತಬಾ ಅವರ ನೇಮಕಾತಿ ಸಾಮಾನ್ಯ ಪ್ರಕ್ರಿಯೆಯನ್ನು ಅನುಸರಿಸಲಿಲ್ಲ ಎಂದು ಇಸ್ಫಹಾನಿ ತಿಳಿಸಿದ್ದಾರೆ.

ಮೊಜ್ತಬಾ ಕೌನ್ಸಿಲ್‌ನಿಂದ ಬಹುಮತದ ಮತಗಳನ್ನು ಸಹ ಪಡೆಯಲಿಲ್ಲ ಎಂದು ಹೇಳಿದರು. ಐಆರ್‌ಜಿಸಿಯ ಒತ್ತಡವು ಹಲವಾರು ಧರ್ಮಗುರುಗಳು ಉತ್ತರಾಧಿಕಾರಿಯನ್ನು ಔಪಚಾರಿಕವಾಗಿ ಘೋಷಿಸಿದ ಅಧಿವೇಶನವನ್ನು ಬಹಿಷ್ಕರಿಸಲು ಕಾರಣವಾಯಿತು ಎಂದು ವರದಿಯಾಗಿದೆ. ಖಮೇನಿಯವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕಿದ್ದ ತಜ್ಞರ ಸಭೆಯು ಮೊಜ್ತಬಾಗೆ ಮತ ಹಾಕಲಿಲ್ಲ" ಎಂದು ಇಸ್ಫಹಾನಿ ಹೇಳಿದರು. ಅವರ ವಿರುದ್ಧ ಸಾಕಷ್ಟು ಒತ್ತಡವಿತ್ತು, ಆದರೆ ಐಆರ್‌ಜಿಸಿಯ ಒತ್ತಡದ ಅಡಿಯಲ್ಲಿ, ಅವರನ್ನು ಉತ್ತರಾಧಿಕಾರಿ ಎಂದು ಹೆಸರಿಸಲಾಯಿತು ಎಂದು ಇಸ್ಫಹಾನಿ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com