ಜಗತ್ತಿನಾದ್ಯಂತ ಜನರಲ್ಲಿ ಭೀತಿ ಸೃಷ್ಟಿಸಿದ ಇರಾನ್! ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ವಿಶ್ವದಾದ್ಯಂತ ವಿಸ್ತರಿಸುವ ಸಾಧ್ಯತೆ?

ಇರಾನ್ ನ ಹಿರಿಯ ವಕ್ತಾರ ಜನರಲ್ ಅಬೋಲ್‌ಫಜಲ್ ಶೆಕರ್ಚಿ ಈ ರೀತಿಯ ಬೆದರಿಕೆ ಹಾಕಿದ್ದಾರೆ. ಇದು ಅಮೆರಿಕ ಹಾಗೂ ಇಸ್ರೇಲ್ ನಿಂದ ಇರಾನ್ ನಿರಂತರ ಮೈಮಾನಿಕ ದಾಳಿಗೆ ಒಳಗಾಗುತ್ತಿರುವಂತೆ ಸಂಘರ್ಷದ ಭಯವನ್ನು ಗಾಢವಾಗಿಸುತ್ತಿದೆ.
airstrikes from the United States and Israel,
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ದಾಳಿಯ ಚಿತ್ರ
Updated on

ಟೆಹರಾನ್: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಸದ್ಯದಲ್ಲೇ ಪ್ರಪಂಚದಾದ್ಯಂತ ವಿಸ್ತರಿಸುವ ಸಾಧ್ಯತೆಯಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಯುದ್ಧ, ಪಶ್ಚಿಮ ಏಷ್ಯಾದ ಆಚೆಗೆ ದೂರದಲ್ಲಿರುವ ನಾಗರಿಕ ಸ್ಥಳಗಳಲ್ಲಿ ದಾಳಿಯ ಕಳವಳನ್ನುಂಟು ಮಾಡಿದೆ.

ಹೌದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವಂತೆಯೇ ಇರಾನ್ ಮಿಲಿಟರಿ ನೀಡಿರುವ ವಾರ್ನಿಂಗ್ ಜಗತ್ತಿನಾದ್ಯಂತ ಜನರಲ್ಲಿ ಭೀತಿಯನ್ನುಂಟು ಮಾಡಿದೆ. ಜಗತ್ತಿನಾದ್ಯಂತ "ಉದ್ಯಾನಗಳು, ಮನರಂಜನಾ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳು ಇನ್ನು ಮುಂದೆ ತನ್ನ ಶತ್ರುಗಳಿಗೆ ಸುರಕ್ಷಿತವಾಗಿರುವುದಿಲ್ಲ ಎಂದು ಘೋಷಿಸಿದೆ.

ಇರಾನ್ ನ ಹಿರಿಯ ವಕ್ತಾರ ಜನರಲ್ ಅಬೋಲ್‌ಫಜಲ್ ಶೆಕರ್ಚಿ ಈ ರೀತಿಯ ಬೆದರಿಕೆ ಹಾಕಿದ್ದಾರೆ. ಇದು ಅಮೆರಿಕ ಹಾಗೂ ಇಸ್ರೇಲ್ ನಿಂದ ಇರಾನ್ ನಿರಂತರ ಮೈಮಾನಿಕ ದಾಳಿಗೆ ಒಳಗಾಗುತ್ತಿರುವಂತೆ ಸಂಘರ್ಷದ ಭಯವನ್ನು ಗಾಢವಾಗಿಸುತ್ತಿದೆ.

airstrikes from the United States and Israel,
ಅರ್ಮೇನಿಯಾ, ಅಜರ್‌ಬೈಜಾನ್ ಗಡಿದಾಟಿ, ಇರಾನ್ ನಿಂದ ಸ್ವದೇಶಕ್ಕೆ 913 ಭಾರತೀಯರು ವಾಪಸ್!

ಶತ್ರು ರಾಷ್ಟ್ರಗಳಿಗೆ ವಿಶ್ವದಾದ್ಯಂತ ಪಾರ್ಕ್ ಗಳು, ಟೂರಿಸ್ಟ್ ಸ್ಛಳಗಳು ಸುರಕ್ಷಿತವಲ್ಲ ಎಂದು ಹೇಳುವ ಮೂಲಕ ಪ್ರತೀಕಾರದ ಜ್ವಾಲೆ ಪಶ್ಚಿಮ ಏಷ್ಯಾದಾಚೆಗೆ ವ್ಯಾಪಿಸುವ ಸಾಧ್ಯತೆಯಿದೆ. ಪ್ರಸ್ತುತ ಯುದ್ಧ ನಡೆಯುತ್ತಿರುವ ಪ್ರದೇಶಗಳಿಂದ ಸಹಸ್ರಾರು ಮೈಲಿ ದೂರದಲ್ಲಿರುವ ನಾಗರಿಕ ಸ್ಥಳಗಳ ಮೇಲೂ ದಾಳಿಯ ಕಳವಳವನ್ನುಂಟು ಮಾಡಿದೆ.

ನಾವು ನಿಮ್ಮ ಬಗ್ಗೆ ಪಡೆದಿರುವ ಮಾಹಿತಿ ಆಧಾರದ ಮೇಲೆ ಪಾರ್ಕ್, ಮನರಂಜನಾ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳು ಸೇರಿದಂತೆ ಇನ್ಮುಂದೆ ವಿಶ್ವದ ಯಾವುದೇ ಸ್ಥಳಗಳು ನಿಮಗೆ ಸುರಕ್ಷಿತವಲ್ಲ ಎಂದು ಶತ್ರು ರಾಷ್ಟ್ರಗಳಿಗೆ ಶೆಕರ್ಚಿ ಎಚ್ಚರಿಕೆ ನೀಡಿರುವುದಾಗಿ ಇರಾನ್ ನ ಸರ್ಕಾರಿ ವಾಹಿನಿಯೊಂದು ಸುದ್ದಿ ಪ್ರಕಟಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com