ಇರಾನ್‌ನ ಉನ್ನತಾಧಿಕಾರಿ ಅರಘ್ಚಿ, ಗಾಲಿಬಾಫ್'ರನ್ನು ಕೊಲ್ಲದಂತೆ ಇಸ್ರೇಲ್ ತಡೆದಿದ್ದೇ ನಾವು: Pakistan

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಲಿಬಾಫ್ ಅವರ ಮೇಲೆ ದಾಳಿ ಮಾಡುವುದಿಲ್ಲ ಎಂದು ಇಸ್ರೇಲ್ ಭರವಸೆ ನೀಡಿದೆ. ಅಮೆರಿಕದ ಆಜ್ಞೆಯ ಮೇರೆಗೆ ಇಸ್ರೇಲ್ ಈ ಇಬ್ಬರು ನಾಯಕರ ಹೆಸರುಗಳನ್ನು ಹಿಟ್ ಲಿಸ್ಟ್ ನಿಂದ ತೆಗೆದುಹಾಕಿದೆ ಎಂದು ವರದಿಯಾಗಿದೆ.
Abbas Araghchi-Qalibaf-shehbaz sharif
ಅಬ್ಬಾಸ್ ಅರಘ್ಚಿ-ಮೊಹಮ್ಮದ್ ಬಘರ್ ಗಲಿಬಾಫ್-ಶೆಹಬಾಜ್ ಷರೀಷ್
Updated on

ಇಸ್ಲಾಮಾಬಾದ್: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಲಿಬಾಫ್ ಅವರ ಮೇಲೆ ದಾಳಿ ಮಾಡುವುದಿಲ್ಲ ಎಂದು ಇಸ್ರೇಲ್ ಭರವಸೆ ನೀಡಿದೆ. ಅಮೆರಿಕದ ಆಜ್ಞೆಯ ಮೇರೆಗೆ ಇಸ್ರೇಲ್ ಈ ಇಬ್ಬರು ನಾಯಕರ ಹೆಸರುಗಳನ್ನು ಹಿಟ್ ಲಿಸ್ಟ್ ನಿಂದ ತೆಗೆದುಹಾಕಿದೆ ಎಂದು ವರದಿಯಾಗಿದೆ. ನಾವು ಅಮೆರಿಕಕ್ಕೆ ವಿನಂತಿ ಮಾಡಿದ್ದೇವು ಪಾಕಿಸ್ತಾನ ಹೇಳಿಕೊಂಡಿದೆ. ಇಸ್ರೇಲ್ ಅಬ್ಬಾಸ್ ಅರಘ್ಚಿ ಮತ್ತು ಮೊಹಮ್ಮದ್ ಬಘರ್ ಗಲಿಬಾಫ್ ಅವರನ್ನು 'ಹಿಟ್ ಲಿಸ್ಟ್' ನಿಂದ ತೆಗೆದುಹಾಕಿದೆ. ಪಾಕಿಸ್ತಾನವು ವಾಷಿಂಗ್ಟನ್ ಅವರನ್ನು ಇಸ್ರೇಲ್ ಗುರಿಯಾಗಿಸದಂತೆ ಒತ್ತಡ ಹೇರುವಂತೆ ಒತ್ತಾಯಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಪಾಕಿಸ್ತಾನದ ಮೂಲವೊಂದು 'ಅರಘ್ಚಿ ಮತ್ತು ಗಾಲಿಬಾಫ್ ಇರುವ ಸ್ಥಳದ ಬಗ್ಗೆ ಇಸ್ರೇಲಿಗೆ ಮಾಹಿತಿ ಇದ್ದು ಅವರನ್ನು ಹತ್ಯೆ ಮಾಡಲು ಬಯಸಿದ್ದರು. ಈ ಇಬ್ಬರನ್ನು ಹತ್ಯೆ ಮಾಡಿದರೆ, ಮಾತುಕತೆಗೆ ಯಾವುದೇ ಪ್ರಮುಖ ನಾಯಕರು ಉಳಿಯುವುದಿಲ್ಲ ಎಂದು ಪಾಕಿಸ್ತಾನ ಅಮೆರಿಕಕ್ಕೆ ತಿಳಿಸಿದೆ. ಇದರ ನಂತರ, ಈ ನಾಯಕರನ್ನು ಗುರಿಯಾಗಿಸಿಕೊಳ್ಳುವುದನ್ನು ಅಮೆರಿಕ, ಇಸ್ರೇಲ್ ತಡೆದಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಮಿಲಿಟರಿ ಮತ್ತು ವಿದೇಶಾಂಗ ಸಚಿವಾಲಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಸ್ರೇಲಿ ಮಿಲಿಟರಿ ಮತ್ತು ಬೆಂಜಮಿನ್ ನೆತನ್ಯಾಹು ಅವರ ಕಚೇರಿ ರಾಯಿಟರ್ಸ್ ವರದಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಾಂತಿ ಮಾತುಕತೆಗಾಗಿ ಈ ಇಬ್ಬರು ಉನ್ನತ ಇರಾನಿನ ಅಧಿಕಾರಿಗಳ ಮೇಲೆ "ಕೆಲವು ದಿನಗಳವರೆಗೆ" ದಾಳಿ ಮಾಡುವುದನ್ನು ತಡೆಹಿಡಿಯಲು ನಿರ್ಧರಿಸಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಕೂಡ ಹೇಳಿಕೊಂಡಿದೆ.

Abbas Araghchi-Qalibaf-shehbaz sharif
'ಧನ್ಯವಾದ ಭಾರತ' ಎಂದು ಬರೆದು ಇಸ್ರೇಲ್ ಮೇಲೆ ಕ್ಷಿಪಣಿ ಉಡಾಯಿಸಿದ ಇರಾನ್; ಹಲವು ಕಟ್ಟಡಗಳು ಧ್ವಂಸ, Video!

ಈಜಿಪ್ಟ್ ಮತ್ತು ಟರ್ಕಿ ಇರಾನ್ ಯುದ್ಧವನ್ನು ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಪಾಕಿಸ್ತಾನ ವಾಷಿಂಗ್ಟನ್ ಮತ್ತು ಟೆಹ್ರಾನ್ ಎರಡರೊಂದಿಗೂ ನೇರ ಸಂಪರ್ಕವನ್ನು ಉಳಿಸಿಕೊಂಡಿದೆ. ಇಸ್ಲಾಮಾಬಾದ್ ಶಾಂತಿ ಮಾತುಕತೆಗೆ ಸಂಭಾವ್ಯ ಸ್ಥಳವೆಂದು ಪರಿಗಣಿಸಲಾಗುತ್ತಿದೆ. ಅಮೆರಿಕ ಪಾಕಿಸ್ತಾನದ ಮೂಲಕ ಇರಾನ್‌ಗೆ 15 ಅಂಶಗಳ ಶಾಂತಿ ಪ್ರಸ್ತಾವನೆಯನ್ನು ಕಳುಹಿಸಿತ್ತು. ಇರಾನ್‌ನ ಹೆಚ್ಚು ಸಂಸ್ಕರಿಸಿದ ಯುರೇನಿಯಂ ದಾಸ್ತಾನು ತೆಗೆದುಹಾಕುವುದು, ಸಂಸ್ಕರಣೆಯನ್ನು ನಿಲ್ಲಿಸುವುದು. ಅದರ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಮೇಲೆ ನಿಷೇಧ ಹೇರುವುದು ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳಿಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸುವುದು ಈ ಪ್ರಸ್ತಾವನೆಯಲ್ಲಿ ಸೇರಿದೆ. ಆದಾಗ್ಯೂ, ಇರಾನ್ ಈ ಪ್ರಸ್ತಾವನೆಯನ್ನು ಸ್ವೀಕರಿಸಲು ನಿರಾಕರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com