ಅಮೆರಿಕದ ಪಡೆಗಳು ಇಲ್ಲಿಗೆ ಬಂದರೆ ಆಕ್ರಮಣಕಾರಿ ದಾಳಿಗೆ ನಾವು ಸಿದ್ಧ; ಇರಾನ್ ಸಂಸತ್ತಿನ ಸ್ಪೀಕರ್ ಎಚ್ಚರಿಕೆ!

ಕಳೆದ ವಾರ ಪಾಕಿಸ್ತಾನ ಇರಾನ್‌ಗೆ ರವಾನಿಸಿದ ಅಮೆರಿಕದ 15 ಅಂಶಗಳ ಯೋಜನೆಯನ್ನು ಅವರು 'ಅವರ ಇಚ್ಛೆ' ಎಂದು ಬಣ್ಣಿಸಿದರು.
 Donald Trump - Ali Khamenei
ಡೊನಾಲ್ಡ್ ಟ್ರಂಪ್ - ಅಲಿ ಖಮೇನಿAFP
Updated on

ದುಬೈ: ಅಮೆರಿಕವು ತನ್ನ ಭೂಸೇನಾ ಪಡೆಗಳನ್ನು ಇರಾನ್‌ಗೆ ಳುಹಿಸಿದರೆ, ನಮ್ಮ ಪಡೆಗಳು ಸಿದ್ಧವಾಗಿದ್ದು, ಆಕ್ರಮಣಕಾರಿಯಾಗಿ ಅವರ ಮೇಲೆ ದಾಳಿ ಮಾಡಲು ಕಾಯುತ್ತಿವೆ. ಅಲ್ಲದೆ, ಈ ಪ್ರದೇಶದಲ್ಲಿನ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಶಿಕ್ಷಿಸಲಾಗುತ್ತದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲಿಬಾಫ್ ಭಾನುವಾರ ಎಚ್ಚರಿಸಿದ್ದಾರೆ.

'ನಮ್ಮ ಗುಂಡಿನ ದಾಳಿ ಮುಂದುವರೆದಿದೆ. ನಮ್ಮ ಕ್ಷಿಪಣಿಗಳು ಸ್ಥಳದಲ್ಲಿವೆ. ನಮ್ಮ ದೃಢನಿಶ್ಚಯ ಮತ್ತು ನಂಬಿಕೆ ಹೆಚ್ಚಾಗಿದೆ' ಎಂದು ಖಲಿಬಾಫ್ ಹೇಳಿದರು.

ಹೀಗಾಗಿ, ಇರಾನ್ ನೆಲದ ಮೇಲೆ ದಾಳಿ ಮಾಡಲು ಮುಂದಾದರೆ, ಅಮೆರಿಕದ ಪಡೆಗಳು ಮತ್ತು ಈ ಪ್ರದೇಶದಲ್ಲಿ ಮಿತ್ರರಾಷ್ಟ್ರಗಳ ವಿರುದ್ಧ ತೀವ್ರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿರುವುದಾಗಿ ಇರಾನ್ ಅಧಿಕೃತ ಮಾಧ್ಯಮಗಳು ತಿಳಿಸಿವೆ.

ಕಳೆದ ವಾರ ಪಾಕಿಸ್ತಾನ ಇರಾನ್‌ಗೆ ರವಾನಿಸಿದ ಅಮೆರಿಕದ 15 ಅಂಶಗಳ ಯೋಜನೆಯನ್ನು ಅವರು 'ಅವರ ಇಚ್ಛೆ' ಎಂದು ಬಣ್ಣಿಸಿದರು ಮತ್ತು ಟ್ರಂಪ್ ಆಡಳಿತವು ಬಲವಂತವಾಗಿ ಸಾಧಿಸಲು ವಿಫಲವಾದದ್ದನ್ನು ಈ ಯೋಜನೆಯ ಮೂಲಕ ಪಡೆಯಲು ಪ್ರಯತ್ನಿಸುತ್ತಿದೆ. ಅಮೆರಿಕನ್ನರು ಇರಾನ್‌ನ ಶರಣಾಗತಿಯನ್ನು ಬಯಸುವವರೆಗೆ, ನಮ್ಮ ಪ್ರತಿಕ್ರಿಯೆ ಸ್ಪಷ್ಟವಾಗಿರುತ್ತದೆ. ನಾವು ಯಾವುದೇ ಕಾರಣಕ್ಕೂ ಅವಮಾನವನ್ನು ಸಹಿಸುವುದಿಲ್ಲ ಎಂದು ಹೇಳಿದರು.

 Donald Trump - Ali Khamenei
ಪಶ್ಚಿಮ ಏಷ್ಯಾದಲ್ಲಿ 10,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಅಮೆರಿಕ ಮುಂದು!

ಆರ್ಥಿಕ ಪರಿಣಾಮಗಳು ದೀರ್ಘಕಾಲೀನವಾಗಿರುತ್ತವೆ: ತಜ್ಞರು

ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಗಳು ಬೆಲೆಗಳನ್ನು ಹೆಚ್ಚಿಸಿವೆ. ವಿಶ್ವದ ಆರ್ಥಿಕತೆಯ ಭವಿಷ್ಯವನ್ನು ಕತ್ತಲೆಗೆ ದೂಡಿವೆ, ಜಾಗತಿಕ ಷೇರು ಮಾರುಕಟ್ಟೆಗಳು ತತ್ತರಿಸಿವೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಬಡವರನ್ನು ರಕ್ಷಿಸಲು ಇಂಧನವನ್ನು ಪಡಿತರ ಮತ್ತು ಇಂಧನ ವೆಚ್ಚಗಳಿಗೆ ಸಬ್ಸಿಡಿ ನೀಡುವಂತೆ ಒತ್ತಾಯಿಸಿವೆ.

ಪರ್ಷಿಯನ್ ಗಲ್ಫ್ ಸಂಸ್ಕರಣಾಗಾರಗಳು, ಪೈಪ್‌ಲೈನ್‌ಗಳು, ಅನಿಲ ಕ್ಷೇತ್ರಗಳು ಮತ್ತು ಟ್ಯಾಂಕರ್ ಟರ್ಮಿನಲ್‌ಗಳ ಮೇಲೆ ನಡೆಯುತ್ತಿರುವ ದಾಳಿಗಳು ಜಾಗತಿಕ ಆರ್ಥಿಕ ನೋವನ್ನು ತಿಂಗಳುಗಳು, ವರ್ಷಗಳವರೆಗೆ ವಿಸ್ತರಿಸುವ ಬೆದರಿಕೆಯನ್ನು ಒಡ್ಡಿವೆ.

'ಒಂದು ವಾರದ ಹಿಂದೆ ಅಥವಾ ಖಂಡಿತವಾಗಿಯೂ ಎರಡು ವಾರಗಳ ಹಿಂದೆ, ಯುದ್ಧ ನಿಂತಿದ್ದರೆ, ಅದರಿಂದಾಗುವ ದೀರ್ಘಾವಧಿಯ ಪರಿಣಾಮಗಳು ಬಹಳ ಕಡಿಮೆ ಇರುತ್ತವೆ ಎಂದು ನಾನು ಹೇಳುತ್ತಿದ್ದೆ' ಎಂದು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಧನ ಅರ್ಥಶಾಸ್ತ್ರಜ್ಞ ಕ್ರಿಸ್ಟೋಫರ್ ನಿಟ್ಟೆಲ್ ಹೇಳಿದರು.

ಆದರೆ, ಈಗ ಯುದ್ಧ ಮುಂದುವರಿದಂತೆ ಇಂಧನ ಮೂಲಸೌಕರ್ಯವು ನಾಶವಾಗುತ್ತಿದೆ. ಹೀಗಾಗಿ, ಈ ಯುದ್ಧದ ಪರಿಣಾಮಗಳು ದೀರ್ಘಕಾಲೀನವಾಗಿರುತ್ತವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com