ಶಸ್ತ್ರಾಸ್ತ್ರ ಹೊತ್ತ ವಿಮಾನಗಳನ್ನು ಇಸ್ರೇಲ್‌ಗೆ ರವಾನಿಸಿದ ಅಮೆರಿಕ; ಇರಾನ್ ಮೇಲೆ ಮತ್ತೊಂದು ಮಾರಕ ದಾಳಿಗೆ ಟ್ರಂಪ್ ಸಿದ್ಧತೆ!

ಇರಾನ್ ಮೇಲೆ ಮತ್ತೆ ಮಾರಕ ದಾಳಿಗಳನ್ನು ಪ್ರಾರಂಭಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶದ ಬಗ್ಗೆ ಇದು ಅನುಮಾನವನ್ನು ಹುಟ್ಟುಹಾಕಿದ್ದು, ಪಶ್ಚಿಮ ಏಷ್ಯಾ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
US President Donald Trump- Iran supreme leader
ಅಮೆರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್-ಇರಾನ್ ಸರ್ವಾಧಿಕಾರಿ ಖಮೇನಿonline desk
Updated on

ಟೆಲ್ ಅವಿವ್‌: ಜರ್ಮನಿಯ ನೆಲೆಗಳಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಹೊತ್ತ ಡಜನ್ಗಟ್ಟಲೆ ಅಮೆರಿಕ ವಿಮಾನಗಳು ಸೋಮವಾರ ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಲ್ಯಾಂಡ್ ಆಗಿವೆ ಎಂದು ಅಲ್ ಜಜೀರಾ ಇಸ್ರೇಲ್‌ನ ಚಾನೆಲ್ 13 ಅನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇರಾನ್ ಮೇಲೆ ಮತ್ತೆ ಮಾರಕ ದಾಳಿಗಳನ್ನು ಪ್ರಾರಂಭಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶದ ಬಗ್ಗೆ ಇದು ಅನುಮಾನವನ್ನು ಹುಟ್ಟುಹಾಕಿದ್ದು, ಪಶ್ಚಿಮ ಏಷ್ಯಾ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಅಲ್ ಜಜೀರಾ ವರದಿ ಮಾಡಿದಂತೆ, ಕಳೆದ 24 ಗಂಟೆಗಳಲ್ಲಿ ಈ ಮಿಲಿಟರಿ ಚಟುವಟಿಕೆ ಇರಾನ್ ಮೇಲಿನ ಯುದ್ಧವನ್ನು ಪುನರಾರಂಭಿಸುವ ಸಿದ್ಧತೆಗಳ ಭಾಗವಾಗಿದೆ ಎಂದು ಇಸ್ರೇಲಿ ಪ್ರಸಾರಕರು ಹೇಳಿದ್ದಾರೆ.

US President Donald Trump- Iran supreme leader
'ಪಾಕಿಸ್ತಾನಕ್ಕೆ ಉಪಕಾರ' ಮಾಡಲು ಇರಾನ್‌ನೊಂದಿಗೆ ಕದನವಿರಾಮ; ಪಾಕ್ ಪ್ರಧಾನಿ 'ಅದ್ಭುತ' ಎಂದ ಟ್ರಂಪ್!

ಮಧ್ಯಪ್ರಾಚ್ಯದಾದ್ಯಂತ ತಿಂಗಳುಗಳ ಕಾಲ ನಡೆದ ಸಂಘರ್ಷದ ನಂತರ ಯುರೇನಿಯಂ ದಾಸ್ತಾನು, ನಿರ್ಬಂಧಗಳ ತೆರವು ಮತ್ತು ಯುದ್ಧ ಪರಿಹಾರದ ಕುರಿತು ಮಾತುಕತೆಗಳು ಸ್ಥಗಿತಗೊಂಡಿರುವುದರಿಂದ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಹೊಸ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

‘ಗಡಿಯಾರ ಟಿಕ್ ಟಿಕ್ ಮಾಡುತ್ತಿದೆ, ಇರಾನ್‌ಗೆ ಹೆಚ್ಚಿನ ಸಮಯ ಉಳಿದಿಲ್ಲ. ಸಮಯ ಮೀರುತ್ತಿದೆ ಬೇಗ ನಿರ್ಧರಿಸಿ. ಇಲ್ಲವಾದರೆ ಏನು ನಿಮ್ಮ ಬಳಿ ಉಳಿಯುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಭಾನುವಾರ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್‌ನಲ್ಲಿ ಇರಾನ್ ಗೆ ವಾರ್ನ್​ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com