

ಅಮೆರಿಕಾ ಮತ್ತು ಇರಾನ್ ಯುದ್ಧ ಅಂತ್ಯಗೊಳಿಸುವ ಉದ್ದೇಶದ MOU ಕುರಿತು ಒಪ್ಪಂದದ ಹಂತಕ್ಕೆ ಸಮೀಪಿಸುತ್ತಿವೆ ಎಂದು ಈ ಬಗ್ಗೆ ಮಾಹಿತಿ ಇರುವ ರಾಜತಾಂತ್ರಿಕ ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ, ಅಮೆರಿಕಾ ಇಸ್ಲಾಮಿಕ್ ಗಣರಾಜ್ಯವಾದ ಇರಾನ್ ಮೇಲೆ ಹೊಸ ದಾಳಿಗಳನ್ನು ಪರಿಗಣಿಸುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರು ತೆಹ್ರಾನ್‌ನಲ್ಲಿ ಮತ್ತಷ್ಟು ಮಾತುಕತೆ ನಡೆಸಿದ ನಂತರ, ಅಮೆರಿಕದೊಂದಿಗೆ ನಡೆಯುತ್ತಿರುವ ಸಂಭಾಷಣೆಯಲ್ಲಿ “ಭಿನ್ನಾಭಿಪ್ರಾಯಗಳು ಕುಗ್ಗುತ್ತಿವೆ” ಎಂದು ಇರಾನ್ ಸೂಚಿಸಿದೆ.
ಭಾರತದಲ್ಲಿದ್ದ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರು ಪತ್ರಕರ್ತರೊಂದಿಗೆ ಈ ಬಗ್ಗೆ ಮಾತನಾಡಿದ್ದು, “ಕೆಲವು ಪ್ರಗತಿ ಸಾಧಿಸಲಾಗಿದೆ” ಮತ್ತು “ಇಂದು ತಡವಾಗಿ ಕೆಲವು ಸುದ್ದಿಗಳು ಬರಬಹುದು” ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಸಿದ್ಧಪಡಿಸಿದ ಕರಡು ಒಪ್ಪಂದದ ಎರಡೂ ಪಕ್ಷಗಳು ಅದನ್ನು ಪರಿಶೀಲಿಸುತ್ತಿರುವುದರಿಂದ ಈ ಬಗ್ಗೆ ಅಂತಿಮ ತೀರ್ಮಾನವು 48 ಗಂಟೆಗಳೊಳಗೆ ಬರಬಹುದು ಎಂಬ ನಿರೀಕ್ಷೆಯನ್ನು ಅಧಿಕಾರಿಗಳು ಮತ್ತು ರಾಜತಾಂತ್ರಿಕರು ವ್ಯಕ್ತಪಡಿಸಿದ್ದಾರೆ.
ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅವರ ತಂಡ, ಸ್ಟೀವ್ ವಿಟ್‌ಕಾಫ್ ಹಾಗೂ ಜಾರೆಡ್ ಕುಶ್ನರ್ ಉಳಿದ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಯತ್ನಗಳಿಗೆ ಬೆಂಬಲವಾಗಿ ಕತಾರ್ ತನ್ನ ಹಿರಿಯ ಅಧಿಕಾರಿಯನ್ನು ತೆಹ್ರಾನ್‌ಗೆ ಕಳುಹಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದೆ ಎಂದು ಕೂಡ ಅಧಿಕಾರಿಗಳು ತಿಳಿಸಿದರು.
ಆದಾಗ್ಯೂ, ಇರಾನ್ ಮತ್ತು ಅಮೆರಿಕಾ ಎರಡೂ ತಮ್ಮ ಮೂಲಭೂತ ನಿಲುವುಗಳನ್ನು ಪುನರುಚ್ಚರಿಸಿ, ದಾಳಿಗಳನ್ನು ಪುನರಾರಂಭಿಸುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿವೆ.
ಇರಾನ್ ಈ ಮಾತುಕತೆಗಳ ಬೆಳವಣಿಗೆಯನ್ನು ಮುಂದಿನ ಮಾತುಕತೆಗಳಿಗೆ ‘ಚೌಕಟ್ಟಿನ ಒಪ್ಪಂದ’ ಎಂದು ವರ್ಣಿಸಿದೆ. ಇರಾನ್ ರಾಜ್ಯ ದೂರದರ್ಶನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯ್ ಅವರನ್ನು ಉಲ್ಲೇಖಿಸಿ, ಕರಡು ಒಪ್ಪಂದವನ್ನು “ಚೌಕಟ್ಟಿನ ಒಪ್ಪಂದ” ಎಂದು ಕರೆಯುತ್ತಾ, “ನಮಗೆ ಹೇರಲಾದ ಯುದ್ಧವನ್ನು ಅಂತ್ಯಗೊಳಿಸಲು ಅಗತ್ಯವಾದ ಪ್ರಮುಖ ವಿಷಯಗಳು ಹಾಗೂ ನಮಗೆ ಅತ್ಯಂತ ಮಹತ್ವದ ಇತರ ಅಂಶಗಳು ಇದರಲ್ಲಿ ಒಳಗೊಂಡಿರಬೇಕು. ನಂತರ, 30 ರಿಂದ 60 ದಿನಗಳಷ್ಟು ಯುಕ್ತಿಯುಕ್ತ ಅವಧಿಯಲ್ಲಿ ವಿವರಗಳನ್ನು ಚರ್ಚಿಸಿ, ಕೊನೆಯಲ್ಲಿ ಅಂತಿಮ ಒಪ್ಪಂದಕ್ಕೆ ಬರಬೇಕು” ಹೋರ್ಮುಜ್ ಜಲಸಂಧಿಯ ವಿಷಯವೂ ಚರ್ಚೆಯ ಅಜೆಂಡಾದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
Advertisement