'ಅವರಿಗೂ ಯುದ್ಧ ಬೇಡ': ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ಕುರಿತು ಇರಾನ್ ಪ್ರತಿಕ್ರಿಯೆ

ನಾವು ಈ ಸಂದೇಶವನ್ನು ಬೆಂಬಲಿಸುತ್ತೇವೆ. ಅಮೆರಿಕ ಸರ್ಕಾರ ತನ್ನ ಜನರ ಆಶಯಕ್ಕೆ ವಿರುದ್ಧವಾಗಿ ನಡೆದು, ವಿದೇಶಿ ಶಕ್ತಿಗಳ ಒತ್ತಡಕ್ಕೆ ಮಣಿದರೆ, ನಮ್ಮ 'ನೋ' ಉತ್ತರ ಅವರಿಗೆ ದುಃಸ್ವಪ್ನವಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
Iran reacts to US midterm results
ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ಕುರಿತು ಇರಾನ್ ಪ್ರತಿಕ್ರಿಯೆ
Updated on: 

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶದ ಬಗ್ಗೆ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಗಾಲಿಬಾಫ್ ಪ್ರತಿಕ್ರಿಯಿಸಿದ್ದು, ಅಮೆರಿಕದ ಜನತೆ ಯುದ್ಧವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ಅದು ಆತ್ಮಸಾಕ್ಷಿಯ ಧ್ವನಿಯಾಗಿರಲಿ ಅಥವಾ ಜೀವನ ವೆಚ್ಚದ ಹೊರೆಯಾಗಿರಲಿ, ಅಮೆರಿಕನ್ನರು ಯುದ್ಧಕ್ಕೆ 'ನೋ' ಎಂದಿದ್ದಾರೆ.

ನಾವು ಈ ಸಂದೇಶವನ್ನು ಬೆಂಬಲಿಸುತ್ತೇವೆ. ಅಮೆರಿಕ ಸರ್ಕಾರ ತನ್ನ ಜನರ ಆಶಯಕ್ಕೆ ವಿರುದ್ಧವಾಗಿ ನಡೆದು, ವಿದೇಶಿ ಶಕ್ತಿಗಳ ಒತ್ತಡಕ್ಕೆ ಮಣಿದರೆ, ನಮ್ಮ 'ನೋ' ಉತ್ತರ ಅವರಿಗೆ ದುಃಸ್ವಪ್ನವಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ನವೆಂಬರ್ 3ರಂದು ನಡೆದ ಅಮೆರಿಕದ ಮಧ್ಯಂತರ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಡೆಮಾಕ್ರಟಿಕ್ ಪಕ್ಷವು ಕಾಂಗ್ರೆಸ್‌ನಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಸೂಚನೆಗಳು ಕಂಡುಬಂದಿವೆ ಎಂದು ವರದಿ ಹೇಳಿದೆ.

Iran reacts to US midterm results
US midterm poll results: ಯುಎಸ್ ಕಾಂಗ್ರೆಸ್ ನ ಎರಡೂ ಸದನಗಳಲ್ಲಿ ಡೆಮೋಕ್ರಾಟ್ ಗೆಲುವು, ಟ್ರಂಪ್ ಗೆ ಹೀನಾಯ ಸೋಲು

ಈ ಚುನಾವಣೆಯಲ್ಲಿ ಆರ್ಥಿಕ ಪರಿಸ್ಥಿತಿ, ಜೀವನ ವೆಚ್ಚದ ಏರಿಕೆ ಹಾಗೂ ವಿದೇಶಾಂಗ ನೀತಿ ಪ್ರಮುಖ ವಿಷಯಗಳಾಗಿದ್ದವು. ಅದರಲ್ಲೂ ಇರಾನ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ಮಿಲಿಟರಿ ಸಂಘರ್ಷ ಚುನಾವಣಾ ಚರ್ಚೆಯಲ್ಲಿ ಪ್ರಭಾವ ಬೀರಿತ್ತು.

ಅಮೆರಿಕದ ಪ್ರತಿನಿಧಿಗಳ ಸಭೆಯ ಎಲ್ಲಾ 435 ಸ್ಥಾನಗಳು ಹಾಗೂ ಸೆನೆಟ್‌ನ 35 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್‌ನಲ್ಲಿ ಅಧಿಕಾರದ ಸಮತೋಲನ ಬದಲಾಗುವ ಸಾಧ್ಯತೆಯಿದ್ದು, ಅಧ್ಯಕ್ಷರ ಉಳಿದ ಅಧಿಕಾರಾವಧಿಯಲ್ಲಿ ಆಡಳಿತಾತ್ಮಕ ಮತ್ತು ರಾಜಕೀಯ ಸಂಘರ್ಷ ಹೆಚ್ಚಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X