28 ವರ್ಷ, 31 ಸಾವಿರ ಮೈಲು: ಕಾಲ್ನಡಿಗೆಯಲ್ಲೇ ಜಗತ್ತು ಸುತ್ತಿ ಬಂದ ಬ್ರಿಟಿಷ್ ಸಾಹಸಿ ಕಾರ್ಲ್ ಬುಷ್ಬಿಯ ರೋಚಕ ಕಥೆ

ಒಬ್ಬ ಮನುಷ್ಯ ಮನೆ ಬಿಟ್ಟು ಹೊರಟು ಮತ್ತೆ ಮನೆಗೆ ಮರಳಲು 28 ವರ್ಷ ಬೇಕಾಯಿತು. ಅದೂ ಕಾಲ್ನಡಿಗೆಯಲ್ಲೇ 31 ಸಾವಿರ ಮೈಲು ನಡೆದು. ಇದು ಸಿನಿಮಾ ಕಥೆಯಲ್ಲ, ಬ್ರಿಟನ್​ನ ಸಾಹಸಿ ಕಾರ್ಲ್ ಬುಷ್ಬಿಯ ನಿಜವಾದ ಕಥೆ. ಆ ಕುರಿತ ವರದಿ ಇಲ್ಲಿದೆ:
28 Years, 31000 Miles: Adventurer Karl Bushby Finally Walks Home After Epic Journey
ಬ್ರಿಟಿಷ್ ಸಾಹಸಿ ಕಾರ್ಲ್ ಬುಷ್ಬಿOnline Desk
Updated on: 

Karl Bushby: ಜಗತ್ತನ್ನು ಸುತ್ತಲು ರೆಕ್ಕೆಗಳೇ ಬೇಕಾಗಿಲ್ಲ, ಛಲವೊಂದಿದ್ದರೆ ಬರಿಗಾಲಲ್ಲೇ ಇಡೀ ಭೂಮಂಡಲವನ್ನು ಅಳೆದು ಬರಬಹುದು ಎಂಬುದನ್ನು ಬ್ರಿಟಿಷ್ ಸಾಹಸಿ ಕಾರ್ಲ್ ಬುಷ್ಬಿ ಜಗತ್ತಿಗೆ ಸಾಬೀತುಪಡಿಸಿದ್ದಾರೆ! ಹೌದು, ಕಣ್ಣು ಮಿಟುಕಿಸುವುದರೊಳಗೆ ಡಿಜಿಟಲ್ ಜಗತ್ತು ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ, ಬರೋಬ್ಬರಿ 28 ವರ್ಷಗಳ ಕಾಲ ಆಧುನಿಕ ವಾಹನಗಳ ಹಂಗಿಲ್ಲದೆ, ಕೇವಲ ಕಾಲ್ನಡಿಗೆ ಮತ್ತು ಮಾನವ ಶಕ್ತಿಯಿಂದಲೇ 50,000 ಕಿಲೋಮೀಟರ್‌ಗಳಿಗೂ ಅಧಿಕ ದೂರವನ್ನು ಕ್ರಮಿಸಿದ ಇವರ ಸಾಹಸಗಾಥೆ ನಿಜಕ್ಕೂ ರೋಮಾಂಚನಕಾರಿ. ಸೈಬೀರಿಯಾದ ಭೀಕರ ಚಳಿ, ರಾಜತಾಂತ್ರಿಕ ಬಿಕ್ಕಟ್ಟುಗಳು ಹಾಗೂ ಕಠಿಣ ಸಮುದ್ರಗಳನ್ನು ದಾಟಿ ಕೊನೆಗೂ ತಮ್ಮ ತಾಯ್ನಾಡಿನ ಮಣ್ಣಿಗೆ ಮರಳಿರುವ ಈ ಮಾಜಿ ಸೈನಿಕನ ಅಸಾಧಾರಣ ಯಾನದ ಸಂಪೂರ್ಣ ವಿವರ ಇಲ್ಲಿದೆ:

1998 ರಲ್ಲಿ ಶುರುವಾದ ಗೋಲಿಯಾತ್ ಎಕ್ಸ್ ಪೆಡಿಷನ್

ಕಾರ್ಲ್ ಬುಷ್ಬಿ 1998 ರ ನವೆಂಬರ್ 1 ರಂದು ಚಿಲಿಯ ಪುಂಟಾ ಅರೆನಾಸ್ ನಿಂದ ಹೊರಟರು. ಆಗ ಅವರಿಗೆ 29 ವರ್ಷ. ಬ್ರಿಟನ್​ ಸೇನೆಯ ಮಾಜಿ ಪ್ಯಾರಾಟ್ರೂಪರ್ ಆಗಿದ್ದ ಅವರಿಗೆ ಜಗತ್ತನ್ನು ಕಾಲ್ನಡಿಗೆಯಲ್ಲೇ ಸುತ್ತಿ ಮನೆಗೆ ಮರಳಬೇಕು ಎಂಬ ಹಂಬಲ. ತಮ್ಮ ಬಳಿ ಇದ್ದದ್ದು ಒಂದು ಟೆಂಟ್, ಸ್ವಲ್ಪ ಹಣ ಮತ್ತು ಒಂದು ಅಗ್ಗದ ಕ್ಯಾಮೆರಾ ಮಾತ್ರ. ಅವರು ಈ ಪಯಣಕ್ಕೆ ಗೋಲಿಯಾತ್ ಎಕ್ಸ್ ಪೆಡಿಷನ್ ಎಂದು ಹೆಸರಿಟ್ಟರು. ಮೊದಲು 10-12 ವರ್ಷದಲ್ಲಿ ಮುಗಿಯುತ್ತದೆ ಎಂದುಕೊಂಡಿದ್ದರು.

28 Years, 31000 Miles: Adventurer Karl Bushby Finally Walks Home After Epic Journey
ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಶ್ರೇಯಾ: NDA ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ರಾಷ್ಟ್ರಮಟ್ಟದಲ್ಲಿ ಮಿಂಚಿದ ಶಿವಮೊಗ್ಗ ಯುವತಿ..!

ಮುಂದುವರೆದು, ಬುಷ್ಬಿ ತಮಗಾಗಿ ಎರಡು ನಿಯಮಗಳನ್ನು ಹಾಕಿಕೊಂಡಿದ್ದರು. ಒಂದು, ಪ್ರಯಾಣವನ್ನು ಮುಂದುವರಿಸಲು ಯಾವುದೇ ಮೋಟಾರು ವಾಹನ, ವಿಮಾನ, ರೈಲು ಬಳಸಬಾರದು. ಎರಡು, ಪಯಣ ಮುಗಿಯುವವರೆಗೆ ಮನೆಗೆ ಮರಳಬಾರದು. ಇದೇ ನಿಯಮ ಅವರ ಪಯಣವನ್ನು 28 ವರ್ಷಕ್ಕೆ ಎಳೆದೊಯ್ದಿತು. ಅವರು ಅಮೆರಿಕ ಖಂಡಗಳ ಮೂಲಕ ಉತ್ತರಕ್ಕೆ ನಡೆದರು, ಮಧ್ಯ ಅಮೆರಿಕದ ದಟ್ಟ ಕಾಡುಗಳನ್ನು ದಾಟಿದರು, 2006 ರಲ್ಲಿ ಅಲಾಸ್ಕಾದಿಂದ ರಷ್ಯಾಕ್ಕೆ ಹೆಪ್ಪುಗಟ್ಟಿದ ಬೆರಿಂಗ್ ಜಲಸಂಧಿಯ ಮೇಲೆ ನಡೆದರು. ನಂತರ ಮಂಗೋಲಿಯಾ, ಚೀನಾ ದಾಟಿ ಮುಂದೆ ಸಾಗಿದರು. ನೀರು ದಾಟಲು ಅವರು ಕ್ಯಾಸ್ಪಿಯನ್ ಸಮುದ್ರ ಮತ್ತು ಇಂಗ್ಲಿಷ್ ಚಾನೆಲ್ ಅನ್ನು ಈಜಿಯೇ ದಾಟಿದರು.

ಜೀವನವನ್ನೇ ಬದಲಿಸಿದ ಅಡೆತಡೆಗಳು!

ಈ 28 ವರ್ಷಗಳಲ್ಲಿ ಬುಷ್ಬಿ ಮೆಕ್ಸಿಕೋದಲ್ಲಿ ಬಂದೂಕಿನ ಬೆದರಿಕೆ ಎದುರಿಸಿದರು, ಪನಾಮದಲ್ಲಿ ಜೈಲು ಸೇರಿದರು, ರಷ್ಯಾದಲ್ಲಿ ಗಡಿ ದಾಟಿದ್ದಕ್ಕೆ ಬಂಧನಕ್ಕೊಳಗಾದರು. 2008 ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸ್ಪಾನ್ಸರ್ ಗಳು ಹಿಂದೆ ಸರಿದರು, 2020 ರ ಕೊರೊನಾ ಸಮಯದಲ್ಲಿ ವರ್ಷಗಟ್ಟಲೆ ನಿಲ್ಲಬೇಕಾಯಿತು. ವೀಸಾ ಸಮಸ್ಯೆಗಳು, ಹಣದ ಕೊರತೆಯಿಂದಾಗಿ ಸುಮಾರು 15 ವರ್ಷ ಮಾತ್ರವೇ ನಡೆಯಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

28 Years, 31000 Miles: Adventurer Karl Bushby Finally Walks Home After Epic Journey
ಕಲೆಗೆ ಧರ್ಮದ ಬೇಲಿ ಇಲ್ಲ: 6 ತಿಂಗಳು ವ್ರತ ಆಚರಿಸಿ, ಕದ್ರಿ ದೇವಸ್ಥಾನದ ರಂಗಸ್ಥಳದಲ್ಲಿ 'ಮಹಿಷಮರ್ದಿನಿ'ಯಾದ ಮುಸ್ಲಿಂ ಮಹಿಳೆ ಅರ್ಷಿಯಾ ಖಾನ್‌..!

ಕೊನೆಯಲ್ಲಿ ಅಕ್ಟೋಬರ್ ನಲ್ಲಿ ಇಂಗ್ಲಿಷ್ ಚಾನೆಲ್ ಈಜಿ ದಾಟಿ ಇಂಗ್ಲೆಂಡ್ ತಲುಪಿದರು. ನವೆಂಬರ್ 2 ರಂದು ಹಲ್ ನಗರದ ಕ್ವೀನ್ ವಿಕ್ಟೋರಿಯಾ ಸ್ಕ್ವೇರ್ ನಲ್ಲಿ ನೂರಾರು ಜನ ಅವರನ್ನು ಸ್ವಾಗತಿಸಿದರು. ನಂತರ ತಮ್ಮ ಎರಡು ಚಕ್ರದ ಗಾಡಿಯನ್ನು ತಳ್ಳಿಕೊಂಡು ತಾಯಿ ಏಂಜೆಲಾ ಮನೆಗೆ ತಲುಪಿದರು. ವೆಲ್ಕಮ್ ಹೋಮ್ ಸನ್ ಬ್ಯಾನರ್ ಅಡಿಯಲ್ಲಿ ತಾಯಿಯನ್ನು ಅಪ್ಪಿಕೊಂಡ ಕ್ಷಣ ಎಲ್ಲರ ಕಣ್ಣು ತೇವಗೊಳಿಸಿತು. ತಾವು ಹೊರಟಾಗ 8 ವರ್ಷದವರಾಗಿದ್ದ ಮಗ ಆಡಂ ಈಗ 36 ವರ್ಷದವರು, ಅವರ 12 ವರ್ಷದ ಮೊಮ್ಮಗಳನ್ನು ಮೊದಲ ಬಾರಿಗೆ ಭೇಟಿಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X