ನೇಪಾಳದ ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: 2 ಬಾರಿ ಕಂಪಿಸಿದ ಭೂಮಿ!

ಸ್ಥಳೀಯ ಕಾಲಮಾನ ರಾತ್ರಿ 10.33ರ ಸುಮಾರಿಗೆ ನಾಗ್ಚು ನಗರದ ಬಾಕ್ವೆನ್ ಕೌಂಟಿಯಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, 45 ನಿಮಿಷದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ.
earthquake
ಸಾಂದರ್ಭಿಕ ಚಿತ್ರonline desk
Updated on: 

ಲಾಸಾ: ನೇಪಾಳ ಮತ್ತು ಚೀನಾ ಗಡಿಯಲ್ಲಿ ಹಠಾತ್ ಸಂಭವಿಸಿದ ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನ ಸ್ವಾಯತ್ತ ಪ್ರದೇಶದಲ್ಲಿ ಗುರುವಾರ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ ಎಂದು 'ಚೀನಾ ಭೂಕಂಪ ಜಾಲಗಳ ಕೇಂದ್ರ' (CENC) ತಿಳಿಸಿದೆ.

ಸ್ಥಳೀಯ ಕಾಲಮಾನ ರಾತ್ರಿ 10.33ರ ಸುಮಾರಿಗೆ ನಾಗ್ಚು ನಗರದ ಬಾಕ್ವೆನ್ ಕೌಂಟಿಯಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, 45 ನಿಮಿಷದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಈ ಭೂಕಂಪದಿಂದಾಗಿ, ತಕ್ಷಣಕ್ಕೆ ಯಾವುದೇ ಸಾವು-ನೋವು ಅಥವಾ ಹಾನಿಯ ಬಗ್ಗೆ ಇನ್ನೂ ವರದಿಗಳು ಬಂದಿಲ್ಲ.

ಭೂಕಂಪದ ಕೇಂದ್ರಬಿಂದುವನ್ನು ಉತ್ತರ ಅಕ್ಷಾಂಶ 32.40 ಡಿಗ್ರಿ ಮತ್ತು ಪೂರ್ವ ರೇಖಾಂಶ 93.79 ಡಿಗ್ರಿಯಲ್ಲಿ ಗುರುತಿಸಲಾಗಿದೆ.

earthquake
ನೇಪಾಳದಲ್ಲಿ ಮತ್ತೊಂದು ಭಯಾನಕ ಭೂಕುಸಿತ: 6 ಸೆಕೆಂಡ್‌ನಲ್ಲಿ ಬೆಟ್ಟವೇ ಕಣ್ಮರೆ; ಕನಿಷ್ಠ 24 ಮಂದಿ ಸಾವು; 14 ಮಂದಿ ನಾಪತ್ತೆ; Video

ಈ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಸರ್ಕಾರಿ ಸ್ವಾಮ್ಯದ 'ಸಿನ್ಹುವಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟಿಬೆಟಿಯನ್ ಪ್ರಸ್ಥಭೂಮಿಯು ಪ್ರಬಲ ಭೂಕಂಪಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಪ್ರದೇಶವಾಗಿದೆ. ಏಕೆಂದರೆ ಇದು ಯುರೇಷಿಯನ್ ಮತ್ತು ಇಂಡಿಯನ್ ಟೆಕ್ಟೋನಿಕ್ ಫಲಕಗಳು(ಭೂಫಲಕಗಳು) ಸಂಧಿಸುವ ಸ್ಥಳದಲ್ಲಿ ನೆಲೆಗೊಂಡಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಗುರುವಾರ ರಾತ್ರಿ ಭಾರತೀಯ ಕಾಲಮಾನ ಸುಮಾರು 8:03 ರ ಸುಮಾರಿಗೆ ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

ನೇಪಾಳ-ಚೀನಾ ಪರ್ವತಮಯ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತಗಳಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸಾವಿರಾರು ಜನರು ಕಾಣೆಯಾದ ಕೆಲವು ವಾರಗಳ ಈ ಭೂಕಂಪ ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com