ಸೌದಿಗೆ ಕೈಕೊಟ್ಟು ಹೊಸ ಮೈತ್ರಿ ಕಟ್ಟಿದ ಪಾಕಿಸ್ತಾನ! ಟರ್ಕಿ, ಕತಾರ್, ಇಂಡೋನೇಷ್ಯಾ ಜೊತೆ ಬದ್ರ್ ಒಪ್ಪಂದ: ಭಾರತಕ್ಕಿದೆಯಾ ಕಂಟಕ?

ಕತಾರ್‌ನಲ್ಲಿ ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ ದೇಶಗಳು ಜಂಟಿಯಾಗಿ ಬದ್ರ್ ಒಪ್ಪಂದಕ್ಕೆ ಸಹಿ ಹಾಕಿವೆ. 2 ತಿಂಗಳ ಹಿಂದೆ ಪಾಕಿಸ್ತಾನ, ಸೌದಿ ಮತ್ತು ಟರ್ಕಿ ನಡುವೆ ನಡೆದ ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದದ ಬೆನ್ನಲ್ಲೇ ಈ ಹೊಸ ಬಹುಪಕ್ಷೀಯ ಒಪ್ಪಂದ ಮೂಡಿಬಂದಿದೆ. ಆ ಕುರಿತ ವರದಿ ಇಲ್ಲಿದೆ:
Badr Defence Pact: Turkey, Qatar, Pakistan and Indonesia
ಟರ್ಕಿ, ಕತಾರ್, ಇಂಡೋನೇಷ್ಯಾ ಜೊತೆ ಪಾಕಿಸ್ತಾನದ ಬದ್ರ್ ಒಪ್ಪಂದOnline Desk
Updated on: 

ದೋಹಾ (ಕತಾರ್): ಮಧ್ಯಪ್ರಾಚ್ಯದಲ್ಲಿ ಒಂದೆಡೆ ಇರಾನ್ ಹಾಗೂ ಇಸ್ರೇಲ್ - ಅಮೆರಿಕ ನಡುವಿನ ಯುದ್ಧ, ಮತ್ತೊಂದೆಡೆ ಸೌದಿ ಅರೇಬಿಯಾ ಹಾಗೂ ಯೆಮೆನ್ ದೇಶದ ಹೌತಿ ಬಂಡುಕೊರರ ನಡುವಿನ ಸಂಘರ್ಷ. ಈ ಎರಡರಲ್ಲಿಯೂ ಬೇಯುತಿರುವ ಪಾಕಿಸ್ತಾನಕ್ಕೆ ಮಾತ್ರ ನ್ಯಾಟೋ ಮಾದರಿಯ ರಕ್ಷಣಾ ಒಪ್ಪಂದದ ಕನಸು ಮಾತ್ರ ಕಡಿಮೆ ಆಗಿಲ್ಲ! ಹೌದು, ಮೊದಲಿಗೆ, ಸೌದಿ ಅರೇಬಿಯಾ ಜೊತೆಗೆ ಒಪ್ಪಂದ ಮಾಡಿಕೊಂಡು ಒಂದು ದೇಶದ ಮೇಲಿನ ದಾಳಿಯನ್ನು ಮತ್ತೊಂದು ದೇಶದ ಮೇಲಿನ ದಾಳಿ ಎಂದು ಯೋಜನೆ ರೂಪಿಸಿತ್ತು. ಆದರೆ, ಇರಾನ್ ಹಾಗೂ ಅಮೆರಿಕ ಯುದ್ಧ ಪ್ರಾರಂಭವಾಗುತ್ತಿದ್ದಂತೆ ಸೌದಿಗೆ ಕೈ ಕೊಟ್ಟಿತು. ಆದರೆ, ಇರಾನ್-ಅಮೆರಿಕ ಯುದ್ಧಕ್ಕೆ ಕದನ ವಿರಾಮ ಬಿದ್ದಿದೆ ತಡ ಕಳೆದ ಆಗಸ್ಟ್‌ನಲ್ಲಿ ಸೌದಿ ಅರೇಬಿಯಾದ ಜೊತೆಗೆ ಟರ್ಕಿಯನ್ನು ಒಟ್ಟಾಗಿ ಸೇರಿಸಿ ಮಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಮಾಡಿಕೊಂಡಿತು. ಆದರೆ, ಯುದ್ಧ ಮರು ಪ್ರಾರಂಭವಾಗಿದ್ದೇ ತಡ ಟರ್ಕಿ ಜೊತೆ ಸೇರಿ ಸೌದಿ ಅರೇಬಿಯಾಗೆ ಕೈ ಕೊಟ್ಟಿತು. ಇದರೊಂದಿಗೆ, ಹೌತಿ ಬಂಡುಕೊರರ ನಡುವಿನ ಸಂಘರ್ಷದಲ್ಲಿಯೂ ಸೌದಿಗೆ ಪಾಕ್ ಕೈ ಕೊಟ್ಟಿತು. ಈ ಮೂಲಕ ಪಾಕಿಸ್ತಾನಕ್ಕೆ ಕೇವಲ ಸೌದಿಯ ದುಡ್ಡಿನ ಮೇಲೆ ಮಾತ್ರವೇ ಕಣ್ಣಿದೆ ಎಂದು ಜಗಜ್ಜಾಹೀರಾಯಿತು. ಆದರೂ, ತನ್ನ ಕಪಟ ಬುದ್ದಿಯನ್ನ ಬಿಡದ ಪಾಪಿ ಪಾಕಿಸ್ತಾನ, ಇದೀಗ ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ ದೇಶಗಳೊಂದಿಗೆ ಸೇರಿ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಮತ್ತು ತಮ್ಮ ಮಿಲಿಟರಿ ಸಾಮರ್ಥ್ಯಗಳನ್ನು ಬಲಪಡಿಸಲು ದೋಹಾದಲ್ಲಿ ಬದ್ರ್ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಬದ್ರ್ ತಿಳುವಳಿಕೆ ಒಪ್ಪಂದ?

ಬದ್ರ್ ತಿಳುವಳಿಕೆ ಒಪ್ಪಂದ (Badr Memorandum of Understanding - MoU) ಎಂಬುದು ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ ದೇಶಗಳ ನಡುವೆ ಏರ್ಪಟ್ಟಿರುವ ಒಂದು ಪ್ರಮುಖ ಬಹುಪಕ್ಷೀಯ ರಕ್ಷಣಾ ಕೈಗಾರಿಕಾ ಒಪ್ಪಂದವಾಗಿದೆ. ಕತಾರ್‌ನ ದೋಹಾದಲ್ಲಿ ಈ ಒಪ್ಪಂದಕ್ಕೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಟರ್ಕಿಯ ರಕ್ಷಣಾ ಸಚಿವ ಯಾಸರ್ ಗುಲರ್, ಕತಾರ್‌ನ ಉಪ ಪ್ರಧಾನಿ ಹಾಗೂ ರಕ್ಷಣಾ ಸಚಿವ ಶೇಕ್ ಸೌದ್ ಬಿನ್ ಅಬ್ದುಲ್ ರಹಮಾನ್ ಮತ್ತು ಇಂಡೋನೇಷ್ಯಾದ ರಕ್ಷಣಾ ಉಪ ಸಚಿವ ಯೂಸುಫ್ ಜೌಹಾರಿ ಅವರುಗಳು ಸಹಿ ಹಾಕಿದ್ದಾರೆ.

Badr Defence Pact: Turkey, Qatar, Pakistan and Indonesia
ಸಾಲಶೂಲ ಪಾಕಿಸ್ತಾನಕ್ಕೆ IMF-ವಿಶ್ವಬ್ಯಾಂಕ್ ಮಂಡಳಿ ಅಧ್ಯಕ್ಷ ಪಟ್ಟ: ಪಟ್ಟ ಸಿಕ್ಕರೂ ಪಾಕಿಗಳಿಗಿಲ್ಲ ಪವರ್! ಯಾಕೆ?

ಮುಂದುವರೆದು, ಈ ಮೈತ್ರಿಯು ಕೇವಲ ಸಿದ್ಧ ರಕ್ಷಣಾ ಉತ್ಪನ್ನಗಳನ್ನು ಖರೀದಿಸುವುದಕ್ಕೆ ಸೀಮಿತವಾಗಿಲ್ಲ. ಬದಲಿಗೆ, ನಾಲ್ಕು ದೇಶಗಳ ನಡುವೆ ತಂತ್ರಜ್ಞಾನ ಹಂಚಿಕೆ, ಜಂಟಿ ರಕ್ಷಣಾ ಉತ್ಪಾದನೆ, ತಾಂತ್ರಿಕ ತರಬೇತಿ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅದರಲ್ಲೂ, ಈ ಒಪ್ಪಂದದ ಅಡಿಯಲ್ಲಿ ಟರ್ಕಿಯ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ (ಮುಖ್ಯವಾಗಿ ಡ್ರೋನ್ ಮತ್ತು ನೌಕಾ ತಂತ್ರಜ್ಞಾನ), ಕತಾರ್‌ನ ಬೃಹತ್ ಹೂಡಿಕೆ ಸಾಮರ್ಥ್ಯ, ಇಂಡೋನೇಷ್ಯಾದ ಪ್ರಾದೇಶಿಕ ಪಾಲುದಾರಿಕೆ ಹಾಗೂ ಪಾಕಿಸ್ತಾನದ ರಕ್ಷಣಾ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಮೂಲಸೌಕರ್ಯಗಳನ್ನು ಒಟ್ಟಾಗಿ ಬಳಸಿ ರಕ್ಷಣಾ ಉದ್ಯಮವನ್ನು ಬಲಪಡಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ, ಈ ಒಪ್ಪಂದವು ಸಹಿ ಮಾಡಿದ ದೇಶಗಳಿಗೆ ಗಮನಾರ್ಹ ಆರ್ಥಿಕ ಪ್ರಯೋಜನವನ್ನು ನೀಡಲಿದೆ. ಬಾಹ್ಯ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಮಿತ್ರ ರಾಷ್ಟ್ರಗಳ ರಕ್ಷಣಾ ಅಗತ್ಯಗಳನ್ನು ಜಂಟಿಯಾಗಿ ಪೂರೈಸಲು ಇದು ನೆರವಾಗಲಿದೆ ಎಂದು ಕತಾರಿ ರಕ್ಷಣಾ ಸಚಿವಾಲಯ ತಿಳಿಸಿದೆ.

ಹಾಗಾದ್ರೆ, ಇದರಿಂದ ಭಾರತದ ಮೇಲಾಗುವ ಪರಿಣಾಮವೇನು?

ಈ ಒಪ್ಪಂದದ ಮೇಲೆ ಭಾರತೀಯ ರಕ್ಷಣಾ ವಲಯ ಮತ್ತು ರಾಜತಾಂತ್ರಿಕ ತಜ್ಞರು ತೀವ್ರ ನಿಗಾ ಇಟ್ಟಿದ್ದಾರೆ. ಭಾರತವು ಇತ್ತೀಚೆಗಷ್ಟೇ (ಜುಲೈನಲ್ಲಿ) ಇಂಡೋನೇಷ್ಯಾ ಜೊತೆ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಮತ್ತು ಅಸ್ತ್ರ ಏರ್-ಟು-ಏರ್ ಕ್ಷಿಪಣಿಗಳ ಪೂರೈಕೆಗಾಗಿ $630 ಮಿಲಿಯನ್ ಮೊತ್ತದ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಆದರೆ, ಬದ್ರ್ ಒಪ್ಪಂದದ ಮೂಲಕ ಭಾರತದ ಕ್ಷಿಪಣಿ ತಂತ್ರಜ್ಞಾನದ ಮಾಹಿತಿ ಪಾಕಿಸ್ತಾನದ ಕೈಸೇರಬಹುದೇ ಎಂಬ ಆತಂಕಕ್ಕೆ ತಜ್ಞರು ಸ್ಪಷ್ಟನೆ ನೀಡಿದ್ದು, "ಇಂಡೋನೇಷ್ಯಾ ಜೊತೆಗಿನ ಭಾರತದ ಒಪ್ಪಂದದಲ್ಲಿ ಕಠಿಣವಾದ ಡೇಟಾ ಪ್ರೊಟೆಕ್ಷನ್ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮಗಳಿವೆ. ಕೇವಲ ಬಳಕೆದಾರರ ಕೈಪಿಡಿಯನ್ನು ಹಂಚಿಕೊಳ್ಳಲಾಗುತ್ತದೆಯೇ ಹೊರತು ತಂತ್ರಜ್ಞಾನ ವರ್ಗಾವಣೆ ಇರುವುದಿಲ್ಲ. ಆದ್ದರಿಂದ ಭಾರತದ ತಂತ್ರಜ್ಞಾನ ಪ್ರತಿಸ್ಪರ್ಧಿಗಳ ಕೈ ಸೇರುವ ಪ್ರಶ್ನೆಯೇ ಇಲ್ಲ" ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com