Hormuz ಜಲಸಂಧಿ ಮಾರ್ಗದಲ್ಲಿ ಯುದ್ಧ ಭೀತಿ: ಅಮೆರಿಕ ಹಡಗು ಗುರಿಯಾಗಿಸಿ Iran ಕ್ಷಿಪಣಿ ದಾಳಿ, ಹೆಚ್ಚಿದ ಉದ್ವಿಗ್ನತೆ..!

ಕ್ಷಿಪಣಿಯು ಹಡಗಿಗೆ ನೇರವಾಗಿ ಅಪ್ಪಳಿಸಿದ್ದು, ಭಾರಿ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಹೊಗೆಯನ್ನು ಉಸಿರಾಡಿದ ಕಾರಣ ಹಡಗಿನಲ್ಲಿದ್ದ ಹಲವು ಅಮೆರಿಕನ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಗಲ್ಫ್ ರಾಷ್ಟ್ರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
hormuz Strait
ಹಾರ್ಮುಜ್ ಜಲಸಂಧಿ
Updated on

ದುಬೈ: ಇರಾನ್ ಮತ್ತು ಅಮೆರಿಕ ನಡುವಿನ ಮಿಲಿಟರಿ ಸಂಘರ್ಷ ತಾರಕಕ್ಕೇರಿದ್ದು, ಹಾರ್ಮುಜ್ ಜಲಸಂಧಿ (Strait of Hormuz) ಬಳಿ ಅಮೆರಿಕ ಒಪ್ಪಂದದ ವಾಣಿಜ್ಯ ಹಡಗಿನ ಮೇಲೆ ಇರಾನ್ ಪಡೆಗಳು ಭೀಕರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ ಎಂದು ವರದಿಯಾಗಿದೆ. ದಾಳಿಯ ವೇಳೆ ಹಡಗಿನಲ್ಲಿ ಅಮೆರಿಕದ ಭದ್ರತಾ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.

ವಿಶ್ವದ ಅತ್ಯಂತ ಸೂಕ್ಷ್ಮ ಸಾಗರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಚಲಿಸುತ್ತಿದ್ದಾಗ ಇರಾನ್‌ನ ನಾಲ್ಕು ಡ್ರೋನ್‌ಗಳು ಮತ್ತು ಒಂದು ಕ್ಷಿಪಣಿ ಹಡಗನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕ್ಷಿಪಣಿಯು ಹಡಗಿಗೆ ನೇರವಾಗಿ ಅಪ್ಪಳಿಸಿದ್ದು, ಭಾರಿ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಹೊಗೆಯನ್ನು ಉಸಿರಾಡಿದ ಕಾರಣ ಹಡಗಿನಲ್ಲಿದ್ದ ಹಲವು ಅಮೆರಿಕನ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಗಲ್ಫ್ ರಾಷ್ಟ್ರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

2026ರ ಫೆಬ್ರವರಿಯಿಂದಲೂ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಜಾಗತಿಕ ತೈಲ ಸಾಗಣೆಯ ಶೇ. 20 ರಷ್ಟು ಭಾಗ ಹಾದುಹೋಗುವ ಈ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ತೀವ್ರ ಧಕ್ಕೆಯಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಈ ದಾಳಿಯು ಜಾಗತಿಕ ಮಾರುಕಟ್ಟೆ ಹಾಗೂ ತೈಲ ಸರಬರಾಜಿನ ಮೇಲೆ ಭಾರಿ ಪರಿಣಾಮ ಬೀರುವ ಆತಂಕ ಎದುರಾಗಿದೆ. ಆದರೆ, ಈ ದಾಳಿಯ ಕುರಿತು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಅಥವಾ ಇರಾನ್ ಸರ್ಕಾರ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

hormuz Strait
ಭಾರತ ಸೇರಿ ರಷ್ಯಾದ ಇತರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇ.100 ಸುಂಕ: ಮಸೂದೆಗೆ ಅಮೆರಿಕ ಸಂಸತ್ತು ಅನುಮೋದನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com