ಪ್ಲಾಸ್ಟಿಕ್ ಪರಿಕರ

ಪ್ಲಾಸ್ಟಿಕ್ ಪರಿಕರ
Updated on: 

'ಪ್ಲಾಸ್ಟಿಕ್ ಸರ್ವಮಯಂ' ಅನ್ನೋ ಹಾಗೆ ಈಗ ಪ್ಲಾಸ್ಟಿಕ್ ಯುಗ. ಎಲ್ಲೆಲ್ಲೂ ಕಾಣೋದು ಅದೇ. ಸರ್ಕಾರ ಎಷ್ಟೇ ನಿಷೇಧ ಹೇರಿದರೂ ಸಂಪೂರ್ಣವಾಗಿ ಎಂದೂ ತೊಡೆದು ಹಾಕಲಾಗದು. ಮನುಷ್ಯ ಪ್ಲಾಸ್ಟಿಕ್ ವಸ್ತುಗಳ ಸಹವಾಸವಿಲ್ಲದೆ ಬದುಕಲಾರ. ಆ ಮಟ್ಟಿಗೆ ಅದು ಪ್ರಪಂಚವನ್ನೇ ಆವರಿಸಿದೆ.
ಪ್ಲಾಸ್ಟಿಕ್ ವಸ್ತುಗಳನ್ನು ಬಳಸಲು ಕೃಷಿಕರು ಹಿಂದೆ ಬಿದ್ದಿಲ್ಲ. ಕೊಟ್ಟಿಗೆಯಲ್ಲಿ ದನ ಕಟ್ಟಲು ಕಣ್ಣೆ, ಪುಂಡಿ ನಾರಿನ ಬಳ್ಳಿ ಬದಲಾಗಿ ಪ್ಲಾಸ್ಟಿಕ್ ಹಗ್ಗ ಬಂತು. ಹೀಗೆ ಕತ್ತ, ಸೆಣಬು, ಪುಂಡಿ ಮಾಯವಾಗಿದೆ. ಮರದ ನೇಗಿಲು ಹೋಗಿ ಕಬ್ಬಿಣ ಮತ್ತು ಬೀಡಿನವು ಬಂದಿವೆ. ಎತ್ತಿನ ಬಂಡಿ ಹೋಗಿ ಟಿಲ್ಲರ್ ಟ್ರ್ಯಾಕ್ಟರ್ ಬಂತು. ಬೆತ್ತದ ಬುಟ್ಟಿ, ಬಿದಿರಿನ ಚಾಪೆ ಎಲ್ಲಿದೆ ಈಗ? ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಯಾವುದೇ ಉಪಕರಣ ಮಾಡಿಸುವ, ಖರೀದಿಸುವ ಕಾಲವೂ ಹೋಗಿದೆ. ಇಲ್ಲೊಬ್ಬ ಪ್ರಗತಿಪರ ಯುವ ಕೃಷಿಕ ಸಿದ್ದಾಪುರ ತಾಲೂಕಿನ ಹೇರೂರು ಹುಲಿಮನೆಯ ಗಣಪತಿ ಹೆಗಡೆ ಮಾತ್ರ ನಿರುಪಯೋಗಿ ಪ್ಲಾಸ್ಟಿಕ್ ಸಾಮಗ್ರಿ ಬಳಸಿ ಮನೆ ಬಳಕೆಗೆ ಬೇಕಾದ ಉಪಕರಣಗಳನ್ನು ಸ್ವತಃ ಮಾಡಿಕೊಂಡಿದ್ದಾರೆ. ಕಾಳುಮೆಣಸು ಕೊಯ್ಯುವ ಬುಟ್ಟಿ, ಹಗ್ಗ ಮತ್ತು ಕೊರಳಿನ ಗಂಟೆ ಬಳ್ಳಿ, ಚಾಪೆ, ಕಡಿಕೆ, ಕಣಜಗಳನ್ನು ಪ್ಲಾಸ್ಟಿಕ್ ವೈರ್, ಖಾಲಿಯಾದ ಹಿಂಡಿ ಚೀಲಗಳಿಂದ ನೇಯ್ದಿದ್ದಾರೆ.
ಅವರ ಮನೆಯಲ್ಲಿ ವಿಪರೀತ ಥಂಡಿ. ಮಣ್ಣಿನ ನೆಲ ಹೋಗಿ ಸಿಮೆಂಟ್ ಬಂದರೂ ಥಂಡಿ ಹವಾಕ್ಕೆ ಮರದ ಸಾಮಾನುಗಳು, ಚಾದರ, ಬೆಡ್‌ಶೀಟ್, ಕಂಬಳಿ ಮತ್ತು ಬಟ್ಟೆ ಮುಗ್ಗಿ ಲಡ್ಡಾಗಿ ಬಿಡುತ್ತವೆ. ಅಂಥ ವಸ್ತುಗಳ ರಕ್ಷಣೆಗೆ ಗಣಪತಿ ಹೆಗಡೆ ಕಂಡುಕೊಂಡ ಉಪಾಯವೆಂದರೆ, ಬಿಜಾರಟಿ ಕೂರಿಸಿ ಫಿಟ್ ಮಾಡುವುದು. ಈಗ ಇಂಥದ್ದೇ ತಮಗೂ ಮಾಡಿಕೊಡುವಂತೆ ನೋಡಿದವರು ತಿಳಿಸಿದ್ದಾರಂತೆ. ಹೀಗೆ ಹುಲಿಮನೆ ಗಣಪತಿಯವರ ಕೈಗಾರಿಕೆ ಒಂದೆರಡಲ್ಲ. ಸೂಕ್ಷ್ಮ ವೈರ್‌ಗಳ ನೇಯ್ಗೆಯಿಂದ ಕಲಾತ್ಮಕ ಹೂವು, ಚೀಲ ಮತ್ತು ಮನೆ ಅಗತ್ಯ ಪರಿಕರ ಮಾಡುತ್ತಾರೆ. ನಮ್ಮ ರೈತರ ಇಂಥ 'ಸಂಶೋಧನೆ'ಗಳು ಕೃಷಿಗೂ ಪೂರಕ ಮಾತ್ರವಲ್ಲ, ಪರಿಸರ ಸ್ನೇಹಿ ಕೂಡ. ಅಲ್ಲವೆ?

- ಮಾನಸ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com