ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಸಂಭ್ರಮಾಚರಣೆಯಲ್ಲಿ ಸಿದ್ದರಾಮಯ್ಯ - ಡಿಕೆ ಶಿವಕುಮಾರ್ 
ವಿಶ್ಲೇಷಣೆ

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳ ಒಡಕು; ಅಹಿಂದ ಒಗ್ಗಟ್ಟಿನಿಂದ ಕಾಂಗ್ರೆಸ್‌‌ಗೆ ಭರ್ಜರಿ ಬಹುಮತ!

ಒಕ್ಕಲಿಗ ಸಮುದಾಯದ ಮತಬ್ಯಾಂಕ್‌ ಅನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮೂರು ಪಕ್ಷಗಳಿಂದ ರಣಾಂಗಣವಾಗಿ ಮಾರ್ಪಟ್ಟಿದ್ದ ಹಳೇ ಮೈಸೂರು ಭಾಗದಲ್ಲಿ ನಡೆದ ಪೈಪೋಟಿಯಲ್ಲಿ ಕಾಂಗ್ರೆಸ್‌ ಅನಾಯಾಸವಾಗಿ ಗೆಲುವು ಸಾಧಿಸಿದೆ. 2013 ಮತ್ತು 1999 ರಲ್ಲಿ ಆಗಿನ ಕೆಪಿಸಿಸಿ ಮುಖ್ಯಸ್ಥ ಎಸ್‌ಎಂ ಕೃಷ್ಣ ನೇತೃತ್ವದಲ್ಲಿ ಪಕ್ಷ ಮಾಡಿದ ಸಾಧನೆಯನ್ನು ಇದೀಗ ಪುನರಾವರ್ತಿಸಿದೆ.

ಮೈಸೂರು: ಒಕ್ಕಲಿಗ ಸಮುದಾಯದ ಮತಬ್ಯಾಂಕ್‌ ಅನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮೂರು ಪಕ್ಷಗಳಿಂದ ರಣಾಂಗಣವಾಗಿ ಮಾರ್ಪಟ್ಟಿದ್ದ ಹಳೇ ಮೈಸೂರು ಭಾಗದಲ್ಲಿ ನಡೆದ ಪೈಪೋಟಿಯಲ್ಲಿ ಕಾಂಗ್ರೆಸ್‌ ಅನಾಯಾಸವಾಗಿ ಗೆಲುವು ಸಾಧಿಸಿದೆ. 2013 ಮತ್ತು 1999 ರಲ್ಲಿ ಆಗಿನ ಕೆಪಿಸಿಸಿ ಮುಖ್ಯಸ್ಥ ಎಸ್‌ಎಂ ಕೃಷ್ಣ ನೇತೃತ್ವದಲ್ಲಿ ಪಕ್ಷ ಮಾಡಿದ ಸಾಧನೆಯನ್ನು ಇದೀಗ ಪುನರಾವರ್ತಿಸಿದೆ.

ಕಾಂಗ್ರೆಸ್ ಮೇಕೆದಾಟು ಯಾತ್ರೆ, ಫ್ರೀಡಂ ಮಾರ್ಚ್ ನಡೆಸಿತು ಮತ್ತು ಕೋಲಾರದಿಂದ ಚುನಾವಣಾ ಪ್ರಚಾರ ಆರಂಭಿಸಿತು. ಇದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಲಾಭವನ್ನು ಪಡೆದುಕೊಂಡಿತು ಮತ್ತು ವಿಜಯಸಂಕಲ್ಪ ಯಾತ್ರೆಯ ಸಮಯದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ತಲುಪಿತು.

ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಇಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದು, ಉನ್ನತ ಹುದ್ದೆಗೆ (ಮುಖ್ಯಮಂತ್ರಿ ಹುದ್ದೆ) ಅವಕಾಶ ನೀಡುವಂತೆ ಡಿಕೆ ಶಿವಕುಮಾರ್‌ ತಮ್ಮ ಒಕ್ಕಲಿಗ ಸಮುದಾಯದವರಿಗೂ ಮನವಿ ಮಾಡಿದ್ದಾರೆ. 

ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಪಾಲಾಗಿದ್ದ ಸಮುದಾಯದ ಮತಗಳಿಗೆ ಕತ್ತರಿ ಹಾಕಲು ಒಕ್ಕಲಿಗರನ್ನು ಬಿಜೆಪಿ ಕಣಕ್ಕಿಳಿಸಿದೆ. ಹಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೈಸೂರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಬಿಜೆಪಿಯ ಹೆಚ್ಚಿದ ಮತಗಳಿಕೆ ಮತ್ತು ಒಕ್ಕಲಿಗ ಮತಗಳ ತಳಹದಿಯ ಅಲ್ಪ ಪ್ರಮಾಣದ ಒಳಹರಿವು ಕಾಂಗ್ರೆಸ್‌ಗೆ ಹಲವು ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿತು.

ಜೆಡಿಎಸ್‌ನಿಂದ ನಡೆಸಿದ ಪಂಚರತ್ನ ಯಾತ್ರೆಯು ಹೆಚ್ಚಿನ ಜನರನ್ನು ಆಕರ್ಷಿಸಿದರೂ, ಅದು ಮತಗಳಾಗಿ ಪರಿವರ್ತನೆಯಾಗಲಿಲ್ಲ. ಹೀಗಾಗಿ ಜೆಡಿಎಸ್ ಗಳಿಸಿದ ಮತ ಪ್ರಮಾಣವು ಶೇ 18 ರಿಂದ 14ಕ್ಕೆ ಇಳಿದಿದೆ. ಈ ಪ್ರದೇಶವು ಎಸ್‌ಸಿ ಮತಗಳಲ್ಲಿ ವಿಭಜನೆಯನ್ನು ಕಂಡಿದ್ದರಿಂದ ಬಲ ಮತ್ತು ಎಡ ದಲಿತರು ಮತ್ತು ಸೂಕ್ಷ್ಮ ಸಮುದಾಯಗಳನ್ನು ಕಾಂಗ್ರೆಸ್ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಎಸ್‌ಸಿ/ಎಸ್‌ಟಿಗಳು, ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹೆಚ್ಚಿನ ಮೀಸಲಾತಿ ನೀಡುವುದರ ಮೇಲೆ ಕೇಂದ್ರೀಕರಿಸಿದ ಬಿಜೆಪಿಯ ಪ್ರಚಾರವೂ ಪ್ರಯೋಜನವಾಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT