ಸಾಧನೆ

ಹಸಿರುಗುರು

ಇವರು ನೇಚರ್ ಟೀಚರ್. ಹಸಿರನ್ನು ಪ್ರೀತಿಸಿ. ಅದೇ ನಿಮಗೆ ಬದುಕು ಕಲಿಸುತ್ತದೆ'...

ಇವರು ನೇಚರ್ ಟೀಚರ್. 'ಪ್ರಕೃತಿ ಕಲಿಸುವ ಪಾಠದ ಮುಂದೆ ಇನ್ನಾವುದೂ ಇಲ್ಲ. ಹಸಿರನ್ನು ಪ್ರೀತಿಸಿ. ಅದೇ ನಿಮಗೆ ಬದುಕು ಕಲಿಸುತ್ತದೆ' ಎಂಬುದೇ ಇವರ ಸಿದ್ಧಾಂತ. ಪಠ್ಯದ ಜತೆಗೆ ಮಕ್ಕಳಿಗೆ ಕಲಿಸುತ್ತಿರುವುದೂ ಅದನ್ನೇ.
ಹಾಸನ ಜಿಲ್ಲೆಯ ಆಲೂರು ಪಟ್ಟಣದಿಂದ 1 ಕಿ.ಮೀ ದೂರದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಜೆ.ಬಿ. ತಮ್ಮಣ್ಣಗೌಡರು ಸ್ವತಃ ಗಣಿತದ ಟೀಚರ್. 10 ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಾಲೆ ಆವರಣವನ್ನು ನಂದನವನವನ್ನಾಗಿ ಪರಿವರ್ತಿಸಿದ್ದಾರೆ. 9 ಎಕರೆಯಲ್ಲಿ ಭೂರಮೆ ಹಸಿರುಟ್ಟು ನಲಿಯುತ್ತಿದ್ದಾಳೆ. ತೆಂಗು, ನಿಂಬೆಹಣ್ಣು, ಬಾಳೆ, ಹಲಸು, ತರಕಾರಿ ಎಲ್ಲವೂ ಶಾಲಾ ಮಕ್ಕಳ ಊಟಕ್ಕೆ ಬಳಕೆಯಾಗುತ್ತದೆ. ಇಲ್ಲಿ ಬೆಳೆದಿರುವ ಹಣ್ಣಿನ ಗಿಡಗಳ ಮೇಲೆ ನಾನಾ ಬಗೆಯ ಪಕ್ಷಿಗಳು ಕುಳಿತು ಹಣ್ಣುಗಳನ್ನು ತಿನ್ನುತ್ತಾ ನಲಿಯುವ ದೃಶ್ಯ ಮಕ್ಕಳಲ್ಲಿ ಹೊಸ ಹುರುಪು ತುಂಬದೇ ಇರದು. ನೇರಳೆ, ಪನ್ನೇರಳೆ, ದಾಳಿಂಬೆ, ಬಾಳೆಹಣ್ಣು, ಸೀಬೆ, ಮಾವು, ಸಪೋಟ ಮತ್ತಿತರ ಹಣ್ಣುಗಳನ್ನು ಮಕ್ಕಳು ಮತ್ತು ಹಕ್ಕಿಪಕ್ಷಿಗಳು ಮಾತ್ರ ತಿನ್ನಬೇಕು. ಒಂದೇಒಂದು ಹಣ್ಣನ್ನೂ ಮಾರಾಟ ಮಾಡುವುದಿಲ್ಲ.
ಶಾಲೆ ಮಕ್ಕಳು ಮತ್ತು ಸಿಬ್ಬಂದಿಯೊಡನೆ ತಾವೂ ಸ್ವತಃ ಸಸಿಗಳಿಗೆ ನೀರುಣ್ಣಿಸಿ ಗೊಬ್ಬರ ಹಾಕುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಸಂಜೆ ಆಯ್ತುತೆಂದರೆ ಗೌಡರು ಹಣ್ಣಿನ ಗಿಡಗಳ ಮೇಲೆ ಚಿಲಿಪಿಲಿಗುಡುತ್ತಾ ಬಂದು ಕೂರುವ ಅಪಾರ ಸಂಖ್ಯೆಯ ಹಕ್ಕಿಗಳನ್ನು ನೋಡುತ್ತ ಧ್ಯಾನ್ಯಸ್ಥ ಸ್ಥಿತಿ ತಲುಪಿಬಿಡುತ್ತಾರೆ.

ಸಾಹಿತ್ಯವೂ ಗೊತ್ತು
ಸಾಹಿತ್ಯ ಪ್ರೇಮಿಯೂ ಆಗಿರುವ ಗೌಡರು, ಕುವೆಂಪು ಸಾಹಿತ್ಯವನ್ನು ಬಹಳಷ್ಟು ಓದಿಕೊಂಡಿದ್ದಾರೆ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು',  'ಕಾನೂನು ಹೆಗ್ಗಡತಿ' ಸೇರಿದಂತೆ ಪ್ರಮುಖ ಕಾದಂಬರಿಗಳ ಸನ್ನಿವೇಶಗಳನ್ನು ರಸವತ್ತಾಗಿ ವಿವರಿಸಬಲ್ಲರು; ಕವನಗಳ ಸಾಲುಗಳನ್ನು ಆಕರ್ಷಕವಾಗಿ ಪಟಪಟನೆ ಹೇಳಬಲ್ಲರು. ಬೇಂದ್ರೆ, ಕಾರಂತರು, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತಿತರರ ಕೃತಿಗಳನ್ನು ಶಾಲೆ ಗ್ರಂಥಾಲಯದಲ್ಲಿ ಸಂಗ್ರಹಿಸಿ ಇಟ್ಟು, ವಿದ್ಯಾರ್ಥಿಗಳು ಓದುವಂತೆ ಪ್ರೇರೇಪಿಸುತ್ತಾರೆ. ಫಲಿತಾಂಶದಲ್ಲೂ ಶಾಲೆ ಮುಂದಿದೆ.
ಪ್ರಕೃತಿ ಮತ್ತು ಸಾಹಿತ್ಯದ ಮೂಲಕ ಮಕ್ಕಳಿಗೆ ಬದುಕುವ ಪರಿ ಕಲಿಸುತ್ತಿರುವ 51 ವರ್ಷ ವಯಸ್ಸಿನ ಗೌಡರು ಅವಿವಾಹಿತರು. ಅವರಿಗೆ ಶಾಲೆಯೇ ಮನೆ, ವಿದ್ಯಾರ್ಥಿಗಳೇ ಮಕ್ಕಳು. ಪ್ರಕೃತಿಯೇ ಸ್ನೇಹಿತ.

- ದಯಾಶಂಕರ ಮೈಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ