'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾ ಉದ್ಘಾಟನೆ ಮಾಡುವಷ್ಟು ದೊಡ್ಡವನು ನಾನಲ್ಲ, ನಮ್ಮ ದೇಶದ ಅನೇಕ ಮಹನೀಯರು ಮೈಸೂರು ದಸರಾ ಉದ್ಘಾಟಿಸಿದ್ದಾರೆ. ನಾನು ಬಂದಿದ್ದು, ಚಾಮುಂಡಿ ಸನ್ನಿಧಿಯಲ್ಲಿ ಪ್ರಾರ್ಥಿಸಿ ಹಿಂದೆ ಎಲ್ಲ ಹಿರಿಯರು ನಿನ್ನ ಸನ್ನಿಧಿಯಲ್ಲಿ ಹಚ್ಚಿದ ಕನ್ನಡದ ದೀಪ ಆರದಿರಲಿ ಎಂದು ಪ್ರಾರ್ಥಿಸಲಿಕ್ಕೆ ಬಂದಿದ್ದೇನೆ ಎಂದರು.
Gavi siddeshwara seer
ಗವಿಸಿದ್ಧೇಶ್ವರ ಶ್ರೀಗಳ ಮಾತು
Updated on: 

ಈ ದಸರಾ ಮಹೋತ್ಸವ ತುಂಗಭದ್ರ ತೀರದಿಂದ, ಕಾವೇರಿಯ ತೀರಕ್ಕೇ ಹರಿದುಬಂದಿದೆ. ಮಹಾನವಮಿ ದಿಬ್ಬದಿಂದ ಮೈಸೂರಿಗೆ ಹಬ್ಬವಾಗಿ ಬಂದಿದೆ ಈ ದಸರೆ ಇದು. ಒಂದು ಕಾಲಕ್ಕೆ ಯಾವ ದಸರಾ ಕೇವಲ ದೊರೆಗಳು ಹಬ್ಬವಾಗಿತ್ತೋ ಇಂದು ಅದೂ ದರೆಯ ಹಬ್ಬವಾಗಿ ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬವಾಗಿದೆ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಹೇಳಿದರು.

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಇಂದು ಚಾಮುಂಡಿ ಬೆಟ್ಟದ ಸನ್ನಿಧಿಯಲ್ಲಿ ಸರ್ಕಾರ ವತಿಯಿಂದ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಕರ್ನಾಟಕದ ಹಾಗೂ ಭಾರತದ ಕಿರೀಟ. ಮೈಸೂರು ಕನ್ನಡಿಗರೆಲ್ಲರ ಹೆಮ್ಮೆ, ಮೈಸೂರು ಸಾಂಸ್ಕೃತಿಕ ನಗರಿ, ಸಂಸ್ಕಾರವಂತರ ನಗರ, ಅರಿವಿನ ಜನರಿರುವ ನಗರ ಎಂದರು.

ದಸರಾ ಮಹೋತ್ಸವ ತುಂಗಭದ್ರೆ ತೀರದಿಂದ ಕಾವೇರಿ ತೀರದವರೆಗೆ ಹರಿದುಬಂದಿದೆ. ಮಹಾನವಮಿ ದಿಬ್ಬದಿಂದ ಮೈಸೂರಿಗೆ ಹಬ್ಬವಾಗಿ ಬಂದಿದೆ. ಒಂದು ಕಾಲಕ್ಕೆ ಯಾವ ದಸರಾ ದೊರೆಗಳ ಹಬ್ಬವಾಗಿತ್ತೋ, ಇಂದು ಧರೆಯ ಹಬ್ಬವಾಗಿ ವಿಶ್ವವಿಖ್ಯಾತವಾಗಿದೆ.

ಮೈಸೂರು ದಸರಾ ಉದ್ಘಾಟನೆ ಮಾಡುವಷ್ಟು ದೊಡ್ಡವನು ನಾನಲ್ಲ, ನಮ್ಮ ದೇಶದ ಅನೇಕ ಮಹನೀಯರು ಮೈಸೂರು ದಸರಾ ಉದ್ಘಾಟಿಸಿದ್ದಾರೆ. ನಾನು ಬಂದಿದ್ದು, ಚಾಮುಂಡಿ ಸನ್ನಿಧಿಯಲ್ಲಿ ಪ್ರಾರ್ಥಿಸಿ ಹಿಂದೆ ಎಲ್ಲ ಹಿರಿಯರು ನಿನ್ನ ಸನ್ನಿಧಿಯಲ್ಲಿ ಹಚ್ಚಿದ ಕನ್ನಡದ ದೀಪ ಆರದಿರಲಿ ಎಂದು ಪ್ರಾರ್ಥಿಸಲಿಕ್ಕೆ ಬಂದಿದ್ದೇನೆ ಎಂದರು.

ನಾನು ಜೋಳಿಗೆಯ ಜಂಗಮನಷ್ಟೆ, ಪ್ರಾರ್ಥಿಸಬಹುದು, ಕನ್ನಡಿಗರ ಪರವಾಗಿ ಕೈಮುಗಿದು ಬೆಳಕು ಹಚ್ಚಿದೆ, ತಾಯಿ ಚಾಮುಂಡಿ ಬೆಳಕು ನೀಡಬೇಕು, ಈ ನಾಡಿಗೆ ಪ್ರಾರ್ಥನೆ ಮಾಡಲು ಬಂದೆ. ತಾಯಿ ಚಾಮುಂಡಿ ಶಕ್ತಿಯ ಟವರ್, ಅದಕ್ಕಾಗಿ ಇಲ್ಲಿ ಬಂದು ಪ್ರಾರ್ಥನೆ ಮಾಡಿದೆ ಎಂದರು.

ಮೈಸೂರು ದಸರಾ ಗತವೈಭವ, ವರ್ತಮಾನದ ಉತ್ಸಾಹ, ನಾಡಿನ ಭವಿಷ್ಯಕ್ಕೊಂದು ದಿಕ್ಸೂಚಿ ನೀಡುತ್ತದೆ, ದಸರಾ ಭೂತ, ವರ್ತಮಾನ, ಭವಿಷ್ಯಗಳ ಸಂಗಮ ಎಂದರು.

ಬಸವಣ್ಣ ನಮಗೆ ದುಡಿದು ತಿನ್ನುವುದು ಕಲಿಸಿದ್ದು ಹೊರತು ಹೊಡೆದು ತಿನ್ನಲು ಕಲಿಸಿದ್ದಲ್ಲ, ಇದನ್ನು ಮೈಸೂರು ರಾಜಮನೆತನ ನಮಗೆ ಕಲಿಸಿಕೊಟ್ಟಿದೆ. ಅವರ ಮಹಾನ್ ಕಾರ್ಯ, ಕೆಲಸಗಳು, ಪರಂಪರೆ ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ, ಯಾವ ಕಾಲದಲ್ಲಿ ದೇಶದ ಮೂಲೆಗಳಲ್ಲಿ ದೀಪ ಹಚ್ಚಲು ಸಾಧ್ಯವಾಗಲಿಲ್ಲವೋ, ಆ ಕಾಲದಲ್ಲಿ ಶಿವನಸಮುದ್ರದಲ್ಲಿ ಹೈಡ್ರೋ ಎಲೆಕ್ಟ್ರಿಕ್ ದೀಪ ತಂದವರು. ಆಗಿನ ಕಾಲಕ್ಕೆ ಐಐಎಸ್ಸಿಗೆ 300 ಎಕರೆ ಭೂಮಿ, ಮೈಸೂರು ವಿಶ್ವವಿದ್ಯಾಲಯ, ಹೆಣ್ಣುಮಕ್ಕಳಿಗೆ ಶಾಲೆಗಳನ್ನು ತೆರೆದರು ಎಂದರು. ಅದಕ್ಕಾಗಿ ಮೈಸೂರು ರಾಜರನ್ನು ಗಾಂಧಿಯವು ರಾಜಶ್ರೀ ಎಂದು ಕರೆದರು. ಮೈಸೂರು ಮಹಾರಾಜರು ಈ ನೆಲವನ್ನು ಆಳಲಿಲ್ಲ, ಜನರ ಮನಸ್ಸನ್ನು ಆಳಿದರು ಎಂದರು.

ವಿಶ್ವೇಶ್ವನವರು ಕನ್ನಂಬಾಡಿ ಅಣೆಕಟ್ಟು ಕಟ್ಟುವಾಗಿ ರಾಜಮಾತೆ ಆರ್ಥಿಕ ಪರಿಸ್ಥಿತಿ ಉಂಟಾಗಿ ಕೆಂಪಣ್ಣಂಜಿ, ನಾಲ್ವಡಿ ಕೃಷ್ಣರಾಜ ಒಢೆಯರ್ ಆಭರಣ ಒತ್ತೆಯಿಟ್ಟು ನಾಡಿನ ಸಲುವಾಗಿ ಕಟ್ಟಿಸಿದರು. ಮೇಲೆ ಕುಳಿತವರು ಆಳುವವರಲ್ಲ, ಕೆಳಗಿರುವವರ ನೋವನ್ನು ಅರಿತವರು ಆಳುವವರು ಎಂದು ಮೈಸೂರು ರಾಜಮನೆತನ ನಮಗೆ ಕಲಿಸಿಕೊಟ್ಟರು ಎಂದು ಶ್ರೀಗಳು ಶ್ಲಾಘಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com