ಪದವಿ ಸ್ವೀಕರಿಸುತ್ತಿರುವ ಅಜಿತ್ ಕುಮಾರ್ ಸರೋಜ್ 
ಸಾಧನೆ

ವಾರಾಣಸಿ ಕೈದಿಗೆ ಇಗ್ನೋ ಚಿನ್ನದ ಪದಕ!

ಇದು ಕೈದಿಯೊಬ್ಬ ಚಿನ್ನದ ಪದಕ ಪಡೆದ ವಿಶೇಷ ಸುದ್ದಿ. ಕೈದಿಯೊಬ್ಬ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಗಳಿಸಿಕೊಂಡಿದ್ದು ಇದೇ ಮೊದಲು.

ನವದೆಹಲಿ: ಇದು ಕೈದಿಯೊಬ್ಬ ಚಿನ್ನದ ಪದಕ ಪಡೆದ ವಿಶೇಷ ಸುದ್ದಿ. ಕೈದಿಯೊಬ್ಬ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಗಳಿಸಿಕೊಂಡಿದ್ದು ಇದೇ ಮೊದಲು.
ವಾರಾಣಸಿ ಕೇಂದ್ರ ಕಾರಾಗೃಹದಲ್ಲಿರುವ ಹತ್ಯೆ ಪ್ರಕರಣದ ಅಪರಾಧಿ ಅಜಿತ್ ಕುಮಾರ್ ಸರೋಜ್(23) ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೋ)ದ ಪ್ರವಾಸೋದ್ಯಮ ಅಧ್ಯಯನ ಡಿಪ್ಲೋಮಾದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಶಿಕ್ಷಾರ್ಹ ಹತ್ಯೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಅಜಿತ್ ನನ್ನು ಶನಿವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಕರೆದೊಯ್ದು, ವಿಶ್ವವಿದ್ಯಾಲಯದ 28ನೇ ಘಟಕೋತ್ಸವ ಸಮಾರಂಭದ ವೇಳೆ ಆತನಿಗೆ  ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಅಜೀತ್‌ 10 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದು, 2012ರಿಂದ ಜೈಲಿನಲ್ಲಿದ್ದಾನೆ. ಆತ ಡಿಪ್ಲೊಮಾ ಡಿಗ್ರಿಯನ್ನು ಪಡೆದುಕೊಳ್ಳುವುದಕ್ಕಿಂತ ಮುನ್ನ ಇಂದಿರಾಗಾಂಧಿ ಮುಕ್ತ ವಿವಿಯಿಂದ 4 ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಪಡೆದುಕೊಂಡಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT