ಜೂಲಿಯಾ ವಿನ್ಸ್ (ಕೃಪೆ: ಇನ್‌ಸ್ಟಾಗ್ರಾಂ) 
ಸಾಧನೆ

ಇವಳು Muscle Barbie!

ರಷ್ಯಾದ ಮೂಲದ 18ರ ಹರೆಯದ ಜೂಲಿಯಾ ವಿನ್ಸ್ ಈ ಎಲ್ಲ ಪರಿಕಲ್ಪನೆಗಳನ್ನು ಬ್ರೇಕ್ ಮಾಡುವ ಮೂಲಕ ಸಾಮಾಜಿಕ ತಾಣಗಳಲ್ಲಿ ...

ಹೆಣ್ಣೆಂದರೆ ನಯ ನಾಜೂಕು, ಬಳುಕುವ ಮೈ, ವಯ್ಯಾರ ಇರಬೇಕೆಂದು ಬಯಸುವವರು ನಾವು. ಹುಡುಗಿ ದಪ್ಪವಾದರೆ ಡ್ರಮ್ ಎಂದೂ ತೆಳ್ಳಗಿದ್ದರೆ ಕಡ್ಡಿಯೆಂದೂ ಆಕೆಯ ದೇಹದ ಆಕಾರವನ್ನು ನೋಡಿ ಹೆಸರಿಡುತ್ತೇವೆ. ಹೆಣ್ಣೆಂದರೆ ಹೀಗೆಯೇ ಇರಬೇಕು ಎಂಬ ಪರಿಕಲ್ಪನೆ ಎಲ್ಲರ ಮನದಲ್ಲಿಯೂ ಇದ್ದೇ ಇರುತ್ತೆ. ಆದರೆ ರಷ್ಯಾದ ಮೂಲದ 18ರ ಹರೆಯದ ಜೂಲಿಯಾ ವಿನ್ಸ್ ಈ ಎಲ್ಲ ಪರಿಕಲ್ಪನೆಗಳನ್ನು ಬ್ರೇಕ್ ಮಾಡುವ ಮೂಲಕ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದಾಳೆ.

ಸಾಮಾನ್ಯವಾಗಿ ಹೆಣ್ಮಕ್ಕಳು ಬಾಡಿ ಬಿಲ್ಡರ್‌ ಆಗಲು ಇಷ್ಟಪಡುವುದಿಲ್ಲ . ಆದರೆ ಜೂಲಿಯಾ ತಾನ್ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಕಟ್ಟುಮಸ್ತಾದ ದೇಹವನ್ನು ಬೆಳೆಸಿಕೊಂಡು ಎಲ್ಲರ ಗಮನ ಸೆಳೆದಿದ್ದಾಳೆ.  ಕೆಲವು ತಿಂಗಳುಗಳ ಹಿಂದೆಯಷ್ಟೇ ಸುಂದರಿಯಾದ ಜೂಲಿಯಾ ತನ್ನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಳು. ಆ ಫೋಟೋಗಳು ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದ್ದು, ಜೂಲಿಯಾಳ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ಬಾರ್ಬಿ ಡಾಲ್‌ನಂತೆ ಸುಂದರವಾಗಿರುವ ಈಕೆ ಸಾಮಾಜಿಕ ತಾಣಗಳಲ್ಲಿ Muscle Barbie ಎಂದೇ ಪ್ರಚಲಿತಳಾಗಿದ್ದಾಳೆ.

ಪವರ್ ಲಿಫ್ಟಿಂಗ್‌ನಲ್ಲಿ  ಮೂರು ಬಾರಿ ವಿಶ್ವ ದಾಖಲೆ ಬರೆದಿರುವ ಜೂಲಿಯಾಗೆ ಇನ್‌ಸ್ಟಾಗ್ರಾಂನಲ್ಲಿ 40 ಸಾವಿರಕ್ಕಿಂತಲೂ ಹೆಚ್ಚು ಫಾಲೋವರ್‌ಗಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT