ಕರ್ನಾಟಕದ ಪ್ರತಿಭೆ ಗಗನ್ ಗಾಂವ್ಕರ್ 
ಸಾಧನೆ

ಸರಿಗಮಪ ಲಿಟ್ಲ್ ಚಾಂಪ್ಸ್ ಫೈನಲ್ ಗೆ ಗಗನ್ ಗಾಂವ್ಕರ್

ಹಿಂದಿ ವಾಹಿನಿ ಝೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮ ಸರಿಗಮಪ ಲಿಟ್ಲ್ ಚಾಂಪ್ಸ್ 5ರಲ್ಲಿ ಕರ್ನಾಟಕ ಗಗನ್ ಜಿ.ಗಾಂವ್ಕರ್ ಫೈನಲ್ ತಲುಪಿದ್ದು, ಗೆಲುವಿಗೆ ಎಸ್ಸೆಮ್ಮೆಸ್ ಬೆಂಬಲ ಬೇಕಾಗಿದೆ ಎಂದು ಗಗನ್ ತಾಯಿ ಗಿರಿಜಾ ಹೆಗಡೆ ಗಾಂವ್ಕರ್ ಕೋರಿದ್ದಾರೆ...

ಬೆಂಗಳೂರು: ಹಿಂದಿ ವಾಹಿನಿ ಝೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮ ಸರಿಗಮಪ ಲಿಟ್ಲ್ ಚಾಂಪ್ಸ್ 5ರಲ್ಲಿ ಕರ್ನಾಟಕ ಗಗನ್ ಜಿ.ಗಾಂವ್ಕರ್ ಫೈನಲ್ ತಲುಪಿದ್ದು, ಗೆಲುವಿಗೆ ಎಸ್ಸೆಮ್ಮೆಸ್ ಬೆಂಬಲ ಬೇಕಾಗಿದೆ ಎಂದು ಗಗನ್ ತಾಯಿ ಗಿರಿಜಾ ಹೆಗಡೆ ಗಾಂವ್ಕರ್ ಕೋರಿದ್ದಾರೆ.

ಈ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದ್ದು, ಗಗನ್ ಉತ್ತಮವಾಗಿ ಹಾಡುತ್ತಿದ್ದಾನೆ. ಈಗಾಗಲೇ ಹಲವು ಹಂತಗಳನ್ನು ದಾಟಿ ಕೊನೆಯಲ್ಲಿ ಸೆಮಿಫೈನಲ್ ನಲ್ಲಿಯೂ ಅದ್ಭುತ ಸಾಧನೆ ಮೂಲಕ ಜಯಗಳಿಸುವುದರ ಮೂಲಕ ಫೈನಲ್ ಪ್ರವೇಶ ಮಾಡಿದ್ದಾರೆ. ಈಗ ತೀರ್ಪುಗಾರರ ಅಂಕಗಳ ಜತೆಯಲ್ಲಿ ಸಾರ್ವಜನಿಕರ ಎಸ್ಸೆಮ್ಮೆಸ್ ಸಹ ಅಷ್ಟೇ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೆ, ಗಗನ್ ಕರ್ನಾಟಕದವರಷ್ಟೇ ಅಲ್ಲ, ದಕ್ಷಿಣ ಭಾರತದ ಎಕೈಕ ಸ್ಪರ್ಥಿಯಾಗಿದ್ದಾನೆ. ಹೀಗಾಗಿ ಅಂತಿಮ ಸುತ್ತಿನಲ್ಲಿ ಜಯಗಳಇಸಿದರೆ ರಾಜ್ಯಕ್ಕೆ ಕೀರ್ತಿ ಸಂದಿದಂತೆ ಆಗುತ್ತವೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮುಖವಾಗಿದೆ ಎಂದು ಕೋರಿದ್ದಾರೆ.

ಗಗನ್ ಗೆ ವೋಟ್ ಮಾಡng SRGMP-space-GAG ಎಂದು ಟೈಪ್ ಮಾಡಿ 57575 ಗೆಎಸ್ಸೆಮ್ಮಸ್ ಕಳುಹಿಸಬೇಕು. ಅಂತರ್ಜಾಲದ ಮೂಲಕ www.zeetv.com/lilchamps  ಅಥವಾ ಟ್ವಿಚರ್ #Gagan#Lilchamps@zeetv ನಿಂದ ವೋಟ್ ಮಾಡುವ ಅವಕಾಶವಿದೆ. ಅಲ್ಲದೆ ಅಂತರ್ಜಾಲ ಮೂಲಕ ಒಬ್ಬರು ಎಷ್ಟು ಬಾರಿಯಾದರೂ ವೋಟ್ ಮಾಡಬಹುದಾಗಿದ್ದು, ಗಗನ್ ಗೆಲುವಿಗೆ ಸಹಕಾರ ನೀಡಬೇಕು. ಆದರೆ ವೋಟ್ ಮಾಡುವವರು ಶನಿವಾರ ರಾತ್ರಿ 9 ರಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಯೊಳಗೆ ಮಾಡಲು ಮಾತ್ರ ಅವಕಾಶವಿದೆ ಎಂದು ಅವರು ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT