ಸಾಧನೆ

30 ವರುಷಗಳ ನಂತರ ಸಂಶೋಧನಾ ಪ್ರಬಂಧ ಬರೆದು ಪಿಹೆಚ್ಡಿ ಪಡೆದ 91ರ ಹರೆಯದ ಅಜ್ಜಿ!

Rashmi Kasaragodu
ಈಕೆಯ ಹೆಸರು ಕೊಲೆಟ್ಟೆ ಬೌಲ್ರಿಯರ್ ವಯಸ್ಸು 91, ಈ ಇಳಿವಯಸ್ಸಿನಲ್ಲಿ ನನ್ನಿಂದ ಏನು ಸಾಧ್ಯ? ಎಂದು ಮರುಗುತ್ತಾ ಈಕೆ ಕುಳಿತುಕೊಂಡಿಲ್ಲ. ಫ್ರಾನ್ಸ್ ನ ಈ ಅಜ್ಜಿ ಸಂಶೋಧನಾ ಪ್ರಬಂಧ ಬರೆದು ಮುಗಿಸಿ ಪಿಹೆಚ್ಡಿ ಪದವಿಯನ್ನು ಪಡೆದಿದ್ದಾರೆ. ಅಂದಹಾಗೆ ಈಕೆ 30 ವರುಷಗಳ ಹಿಂದೆ ಬರೆಯಲಾರಂಭಿಸಿದ್ದ ಪ್ರಬಂಧವನ್ನೀಗ ಬರೆದು ಮುಗಿಸಿದ್ದು, ಪೂರ್ವ ಫ್ರಾನ್ಸ್ನ ಬೆಸಾನ್ಕಾನ್ನಲ್ಲಿರುವ ಫ್ರಾಂಚೆ ಕಾಮ್ಟೆ ವಿವಿಯಿಂದ ಡಿಸ್ಟಿಂಕ್ಷನ್ ಅಂಕಗಳ ಮೂಲಕ ಪಿಹೆಚ್ಡಿ ಪಡೆದಿದ್ದಾರೆ. 
ನಾನು ಹಲವಾರು ಬ್ರೇಕ್ಗಳನ್ನು ತೆಗೆದುಕೊಂಡ ಕಾರಣ ಪ್ರಬಂಧವನ್ನು ಮುಗಿಸಲು ಮೂರು ದಶಕಗಳೇ ಹಿಡಿಯಿತು ಅಂತಾರೆ ಬೌಲ್ರಿಯರ್. 
 ಎಂಬ ವಿಷಯದಲ್ಲಿ ಥೀಸಿಸ್ ಸಲ್ಲಿಸಿರುವ ಈಕೆ ಪೂರ್ವ ಫ್ರಾನ್ಸ್ನಲ್ಲಿ ವಲಸೆಗಾರರಿಗೆ ಪಾಠ ಹೇಳಿಕೊಡುತ್ತಿದ್ದ ತನ್ನ ಅನುಭವಗಳ ಬಗ್ಗೆಯೇ ಇಲ್ಲಿ ಬರೆದಿದ್ದಾರೆ..
ವಲಸೆಗಾರರರಿಗೆ ಸಾಕ್ಷರತಾ ಕ್ಲಾಸ್ ನೀಡುತ್ತಿದ್ದ ಈಕೆ 1983ರಲ್ಲಿ ನಿವೃತ್ತಿ ಹೊಂದಿದ ನಂತರ ಪಿಹೆಚ್ಡಿ ಮಾಡಲು ಹೊರಟಿದ್ದರು.
ಸಾಮಾನ್ಯವಾಗಿ ಫ್ರಾನ್ಸ್ನಲ್ಲಿ ಪಿಹೆಚ್ಡಿ ಪೂರ್ಣಗೊಳಿಸಲು ಮೂರು ವರ್ಷ ಸಾಕು, ಆದರೆ ಬೌಲ್ರಿಯರ್ ಅವರು ವಿಶೇಷ ವಿದ್ಯಾರ್ಥಿನಿ ಎಂದು ವಿವಿಯ ಪ್ರಾಧ್ಯಾಪಕರೊಬ್ಬರು ತಮ್ಮ ಹಿರಿಯ ವಿದ್ಯಾರ್ಥಿನಿಯ ಛಲವನ್ನು ಕೊಂಡಾಡಿದ್ದಾರೆ.
SCROLL FOR NEXT