ಕೃಷಿ-ಪರಿಸರ

ಮೀಟ್ರು ಜೋರಾಗೈತೆ!

ಇಲ್ಲೊಬ್ಬರು ಬೆಳೆಯುವ ಅಲಸಂದೆ ಬರೋಬ್ಬರಿ ಅರ್ಧ ಮೀಟರ್ ಉದ್ದ!

ಅಬ್ಬಬ್ಬಾ ಅಂದರೆ ಅಲಸಂದೆ ಐದಾರು ಇಂಚು ಉದ್ದ ಬೆಳೆಯುತ್ತದೆ. ಆದರೆ ಇಲ್ಲೊಬ್ಬರು ಬೆಳೆಯುವ ಅಲಸಂದೆ ಬರೋಬ್ಬರಿ ಅರ್ಧ ಮೀಟರ್ ಉದ್ದ! ಹೀಗಾಗಿ ಇದನ್ನು ಮೀಟರ್ ಅಲಸಂದೆ ಎಂದು ಕರೆಯುತ್ತಾರೆ.
ಅಲಸಂದೆ ಅರ್ಧ ಮೀಟರ್ ಉದ್ದದಷ್ಟು ದಷ್ಟಪುಷ್ಟವಾಗಿ ಬೆಳೆಯುತ್ತದೆ. ದೊಡ್ಡ ಗಾತ್ರದ ಈ ಅಲಸಂದೆ ಕೇವಲ 25 ಇದ್ದರೆ ಸಾಕು, ಒಂದು ಕಿಲೋ ತೂಗುವುದರಲ್ಲಿ ಸಂಶಯವೇ ಇಲ್ಲ. ಇಂಥ ಅಲಸಂದೆ ಕೃಷಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಸಮೀಪದ ಪುಲಿತ್ತಡಿಯ ಜಾನಕಿ ಬೆಳೆಯುತ್ತಿದ್ದಾರೆ.

ಉತ್ತಮ ಇಳುವರಿ
ಇವರು ಜೂನ್ ಮತ್ತು ಜುಲೈ ತಿಂಗಳಲ್ಲಿ ತರಕಾರಿ ಬೆಳೆಯುವ ಜಾಗದಲ್ಲಿ ಬತ್ತದ ಕೃಷಿ ಮಾಡುತ್ತಾರೆ. ಉಳಿದ ಸಮಯಗಳಲ್ಲಿ ಅಲಸಂದೆ ಕೃಷಿ ಜೊತೆ ಹರಿವೆಯನ್ನೂ ಬೆಳೆಯುತ್ತಾರೆ. ಸುಮಾರು 5- 6 ವರ್ಷದಿಂದ ಈ ವಿಶಿಷ್ಟ ಅಲಸಂದೆ ಕೃಷಿಯನ್ನು ಮಾಡುತ್ತಿದ್ದಾರೆ. ಅಲ್ಲದೆ, ಉತ್ತಮ ಇಳುವರಿ ಪಡೆಯುತ್ತಾರೆ.

ಖರ್ಚು ಕಮ್ಮಿ
ಇದಕ್ಕೆ ಯಾವುದೇ ಸಾರಜನಕ ಗೊಬ್ಬರ ಬಳಸದೆ, ಕೇವಲ ಹಟ್ಟಿ ಗೊಬ್ಬರ, ಸಗಣಿ ಮತ್ತು ನೀರು ಮಾತ್ರ ಹಾಕುತ್ತಾರೆ. ಸಾರಜನಕ ಗೊಬ್ಬರ ಬಳಸಿದರೆ ಬಳ್ಳಿ ಸೊಕ್ಕಿ ಎಲೆಗಳು ಹೆಚ್ಚಾಗುವುದೇ ವಿನಾ ಕಾಯಿಗಳಾಗುವುದು ಕಮ್ಮಿ. ಎಲೆಗಳು ಹೆಚ್ಚಾದರೆ ಬಳ್ಳಿಯಲ್ಲಿರುವ ದೊಡ್ಡ ಎಳೆಗಳನ್ನು ಸಂಪೂರ್ಣವಾಗಿ ಕೀಳಬೇಕು. ಇವರಿಗೆ ಕೃಷಿಗಾಗಿ ಸರ್ಕಾರವು ಯಾವುದೇ ಸೌಲಭ್ಯ ನೀಡದಿದ್ದರೂ ಅತಿ ಕಡಿಮೆ ಖರ್ಚು ಮಾಡಿ, ಅತ್ಯಲ್ಪ ಶ್ರಮ ವಹಿಸಿ, ಹೆಚ್ಚು ಲಾಭ ಪಡೆದಿದ್ದಾರೆ.

ಹೀಗಿದೆ ಬೆಳೆಯುವ ಕ್ರಮ
ಅಲಸಂದೆ ಬಿತ್ತನೆಗೆ ಮೊದಲು ಮಣ್ಣನ್ನು ಏರು ಹಾಕಿ ಸಾಲು ತಯಾರಿಸಿ 5- 6 ದಿನದ ಬಳಿಕ ಸಗಣಿಯ ನೀರು ಮತ್ತು ಬೂದಿ ಹಾಕಬೇಕು. ನಂತರದ 6 ದಿನಗಳ ಬಳಿಕ ಬೀಜ ಬಿತ್ತಬೇಕು. ಬಳ್ಳಿ ಹಬ್ಬಲು ಒಣ ಕೊಂಬೆಗಳ ಆಧಾರ ಅಗತ್ಯ. ಈ ಕೃಷಿಯಲ್ಲಿ ಮಳೆಗಾಲಕ್ಕಿಂತ ಬೇಸಿಗೆ ಕಾಲದಲ್ಲಿಯೇ ಅಧಿಕ ಬೆಳೆ ದೊರೆಯುವುದು.
ಇವರಿಗೆ ಬೋರ್‌ವೆಲ್ ವ್ಯವಸ್ಥೆ ಇರುವುದರಿಂದ ನೀರಿಗೇನೂ ಕೊರತೆ ಇಲ್ಲ. ಚಂದನ ವಾಹಿನಿಯಲ್ಲಿ ಪ್ರಸಾರವಾದ ಕೃಷಿ ಮಾಹಿತಿಯೇ ಇವರಿಗೆ ಸ್ಫೂರ್ತಿ. ಇವರ ಅಲಸಂದೆ ಕೃಷಿಯ ಮಧ್ಯೆ ಹರಿವೆಯನ್ನೂ ಬೆಳೆಸಿ ಪ್ರತ್ಯೇಕ ಲಾಭದ ಹಾದಿ ಕಂಡುಕೊಂಡಿದ್ದಾರೆ.

ಉತ್ತಮ ಧಾರಣೆ
ಗಿಡ ನೆಟ್ಟ 3 ತಿಂಗಳಲ್ಲಿ ಕಾಯಿ ಕೊಯ್ಲಿಗೆ ಸಿದ್ಧ. ಇವರಿಗೆ ವಾರಕ್ಕೆ ಸುಮಾರು ಒಂದು ಕ್ವಿಂಟಲ್‌ನಷ್ಟು ಕಾಯಿಗಳು ದೊರೆಯುತ್ತವೆ. ಇದು ಸಾವಯವದಲ್ಲಿ ಬೆಳೆದದ್ದು ಎಂದು ಗೊತ್ತಿದ್ದವರು ಹುಡುಕಿಕೊಂಡು ಮನೆಗೆ ಬರುತ್ತಾರೆ. ಆದ್ದರಿಂದ ಇವರ ಅಲಸಂದೆ ಸ್ಥಳೀಯರಿಗೂ ಅನುಕೂಲ. ಕೆಂಪು, ಹಸಿರು, ಬಿಳಿ ಎಂಬ 3 ವಿಧದ ಅಲಸಂದೆ ಬೆಳೆದಿದ್ದಾರೆ. ಇದರಲ್ಲಿ ಕೆಂಪು ಕಾಯಿಗಳು ರುಚಿ ಹೊಂದಿದ್ದರೆ ಅದರ ಬೆಲೆ ಮಾತ್ರ ಕಮ್ಮಿ. ಹಸಿರು ಕಾಯಿಗಳು ಬಹಳ ಬೇಗನೆ ಬೆಳೆಯುವುದರಿಂದ ಜನರು ಅದನ್ನು ಅಷ್ಟೊಂದು ಇಷ್ಟಪಡಲ್ಲ. ಇದರಲ್ಲಿ ಬಿಳಿ ಕಾಯಿಗಳು ಹೆಚ್ಚಾಗಿ ಕಂಡುಬರುತ್ತವೆ.
ಬೆಳೆಗೆ ಸೂರ್ಯನ ಬೆಳಕು ಬೀಳುವ ಮುನ್ನ ನೀರು ಹಾಯಿಸಬೇಕು. ಯಾಕೆಂದರೆ ಅದರಲ್ಲಿರುವ ಹುಳುಗಳನ್ನು ಹೊಡೆದೋಡಿಸುವ ದೃಷ್ಟಿಯಿಂದ. ಮುಂಜಾನೆಯಲ್ಲೇ ಕಾಯಿ ಕೊಯ್ಯುವುದು ಇವರ ಕ್ರಮ. ಯಾಕೆಂದರೆ ಬೆಳಗಿನ ಸಮಯ ಕಾಯಿಗಳು ಹಸಿರು ವರ್ಣದಿಂದ ಕೂಡಿರುತ್ತದೆ.

ಕೇವಲ ಹಟ್ಟಿ ಗೊಬ್ಬರ
ಜಮೀನಿಗೆ ಸಾರಜನಕ ಗೊಬ್ಬರ ಬಳಸದೆ ಕೇವಲ ಹಟ್ಟಿ ಗೊಬ್ಬರ ಬಳಸಿ ಭೂಮಿಯ ಆರೋಗ್ಯ ಕಾಪಾಡಿ. ಕೃಷಿಯನ್ನು ಕಷ್ಟಪಟ್ಟು ಮಾಡುವುದರಿಂದ ಉತ್ತಮ ಆದಾಯ ಪಡೆಯಬಹುದು. ಇತರ ಉದ್ಯೋಗದ ಜೊತೆ ಇಂಥ ಕೃಷಿಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಕಷ್ಟಪಡಬೇಕಾಗಿಲ್ಲ.
- ಜಾನಕಿ

-  ಯಶೋದ ಎ. ಆಲಂಗಾರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!