ಭತ್ತಕ್ಕೆ ಕೀಟ ಬಾಧೆ ಬಂದರೆ ಫಸಲು ಕುಂಠಿತವಾಗಿ ಹಲವು ರೈತರು ಕೈಸುಟ್ಟುಕೊಂಡಿದ್ದಾರೆ. ಅದಕ್ಕೆ ಸೂಕ್ತ ಕ್ರಮ ಕೈಗೊಂಡರೆ ಭರ್ಜರಿ ಫಸಲು ಕಟ್ಟಿಟ್ಟ ಬುತ್ತಿ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಾಸನ ಗ್ರಾಮದ ಭತ್ತದ ಬೆಳೆಗಾರ ಜಿ.ಎನ್. ಸಿದ್ಧನಗೌಡ, 5 ವರ್ಷದ ಹಿಂದೆ ಕೀಟಗಳ ಕಾಟದಿಂದಾಗಿ ತಲೆಕೆಡಿಸಿಕೊಂಡಿದ್ದರು. ಭತ್ತಕ್ಕೆ ಕೀಟ, ಕಾಂಡಕೊರಕ ಹುಳು ಹಾವಳಿ ಹೆಚ್ಚು. ಸಿದ್ಧನಗೌಡರು ಹಲವು ಬಗೆಯ ಕೀಟನಾಶಕ ಸಿಂಪಡಿಸಿದರೂ ಪ್ರಯೋಜನ ಕಾಣದೆ ಕಂಗೆಟ್ಟಿದ್ದರು. 3- 4 ಸಲ ಕೀಟನಾಶಕ ಸಿಂಪಡಿಸಲೇಬೇಕಾಗಿತ್ತು. ಇಷ್ಟಾದರೂ ಭತ್ತದಲ್ಲಿ ಗರಿಷ್ಠ ಉತ್ಪಾದನೆ ಸಾಧ್ಯವಾಗುತ್ತಿರಲಿಲ್ಲ.
ಮತ್ತೆ... ಮುಂದೆ...
ಒಂದು ಹಂತದಲ್ಲಿ ಭತ್ತದ ಸಹವಾಸವೇ ಬೇಡಪ್ಪಾ ಎಂಬ ಸ್ಥಿತಿಗೆ ಬಂದುಬಿಟ್ಟಿದ್ದರು. ಆಗ ಅವರ ನೆರವಿಗೆ ಬಂದಿದ್ದು ತಂತ್ರಜ್ಞಾನ ಆಧಾರಿತ ಕೀಟನಾಶಕ. ಈಗ ಸಿದ್ಧನಗೌಡರ ಮುಖದಲ್ಲಿ ಮಂದಹಾಸ ಚೆಲ್ಲಿದೆ. ಡ್ಯುಪಾಂಟ್ ಫರ್ಟೆರಾ ಅನ್ನು ಬಳಸಿ ತಮ್ಮ 60 ಎಕರೆ ಗದ್ದೆಯಲ್ಲಿ ಭತ್ತ ಬೆಳೆಯುವ ಸಿದ್ಧನಗೌಡರು ಹಿಂದೆಂದಿಗಿಂತ ಅಧಿಕ ಇಳುವರಿ ಪಡೆದಿದ್ದಾರೆ. ನಾಟಿ ಮಾಡಿದ 10-30 ದಿನಗಳಲ್ಲಿ ಒಂದೇ ಸಲ ಫರ್ಟೆರಾ ಗುಳಿಗೆ ಉಪಯೋಗಿಸಿದರು. ಆಗ ಕಾಂಡ ಕೊರೆಯುವ ಹುಳು (ಸುಳಿ ರೋಗ, ಬಿಳಿ ತೆನೆಗಳು) ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂತು. ಸಿದ್ಧನಗೌಡರ ಅವರ ಅನುಭವ ಹಂಚಿಕೊಳ್ಳಲು ಸಂಪರ್ಕಿಸಿ ಮೊ. 9448460776.
ಬಂಪರ್ ಭತ್ತ
ಫರ್ಟೆರಾ ನನ್ನ ಬಾಳಿನಲ್ಲಿ ಬೆಳಕನ್ನು ತಂದಿದೆ. ನಾನು ಪ್ರತಿವರ್ಷ 60 ಎಕರೆ ಜಮೀನಲ್ಲಿ ಭತ್ತ ಬೆಳೆಯುತ್ತಿದ್ದೇನೆ. ಇದನ್ನು ಪ್ರತಿ ಎಕರೆಗೆ 4 ಕೆಜಿಯಂತೆ 25 ಎಕರೆಯಲ್ಲಿ ಉಪಯೋಗಿಸಿದೆ. ಇದರಿಂದ ಪ್ರತಿ ಎಕರೆಗೆ 10 ಚೀಲದಷ್ಟು ಇಳುವರಿ ಹೆಚ್ಚಾಯಿತು. ಈ ಹಿಂದೆ ಎಕರೆಗೆ 35- 40 ಚೀಲ ಇಳುವರಿ ಪಡೆಯುತ್ತಿದ್ದೆ. ಈಗ ಎಕರೆಗೆ 45- 55 ಚೀಲ ಇಳುವರಿ ಪಡೆಯುತ್ತಿದ್ದೇನೆ.
- ಜಿ.ಎನ್. ಸಿದ್ಧನಗೌಡ
- ಶಿಲ್ಪಾ ಹಿರೇಮಠ್