'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

"ನಾನು ಸುದ್ದಿ ಕೇಳಿದ್ದೇನೆ. ನನಗೆ ಗೊತ್ತಾಗಿದೆ. ಆದರೆ... ಇಂದು ನನ್ನ ಕೆಲಸದ ದಿನ. ನಾನು ಕಾರ್ಯಕ್ರಮವೊಂದಕ್ಕಾಗಿ ಲಖನೌಗೆ ತೆರಳುತ್ತಿದ್ದೇನೆ. ಅದರತ್ತ ಗಮನ ಹರಿಸಲು ಬಯಸುತ್ತೇನೆ. ಇದೆಲ್ಲಾ ನಡೆಯಲು ಇಂದೇ ಏಕೆ ಇಂತಹ ದಿನ..
Tanushree Dutta after Nana Patekar's death
ತನುಶ್ರೀ ದತ್ತಾ ಮತ್ತು ನಟ ನಾನಾ ಪಾಟೇಕರ್
Updated on: 

ಮುಂಬೈ: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ (75) ಹೃದಯಾಘಾತದಿಂದ ಅಕ್ಟೋಬರ್ 8ರಂದು ನಿಧನರಾಗಿದ್ದ, ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ದೇಶದ ಖ್ಯಾತನಾಮ ವ್ಯಕ್ತಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಅಚ್ಚರಿ ಎಂದರೆ ನಾನಾ ಪಾಟೇಕರ್ ಸಾವಿನ ಸುದ್ದಿ ಕುರಿತು ಬಾಲಿವುಡ್ ನಟಿ ತನುಶ್ರೀ ದತ್ತಾ ಕೂಡ ಪ್ರತಿಕ್ರಿಯೆ ನೀಡಿದ್ದು, ವಿಚಿತ್ರ ಪೋಸ್ಟ್ ಮೂಲಕ ಗಮನ ಸೆಳೆದಿದ್ದಾರೆ. ನಟಿ ತನುಶ್ರೀ ದತ್ತಾ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಇದೀಗ ವೈರಲ್ ಆಗುತ್ತಿವೆ.

ಭಾರತದ 'ಮೀಟೂ' ಅಭಿಯಾನದ ಸಂದರ್ಭದಲ್ಲಿ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ತನುಶ್ರೀ, ಇದೀಗ ಅವರ ನಿಧನದ ಕುರಿತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

Tanushree Dutta after Nana Patekar's death
Watch | ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ; 45 ನಿಮಿಷ ಸಿಪಿಆರ್, ಆದರೂ ಬದುಕಿಸಲು ಆಗಲಿಲ್ಲ

ವಿಚಿತ್ರ ಪೋಸ್ಟ್

ಗುರುವಾರ ಬೆಳಗ್ಗೆಯೇ ನಾನಾ ಪಾಟೇಕರ್ ನಿಧನದ ಸುದ್ದಿ ಹೊರಬಿದ್ದಿತ್ತು. ಇದೇ ವೇಳೆ ತನುಶ್ರೀ ದತ್ತಾ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರು. ಅವರು ದುರ್ಗಾದೇವಿಯ ಪ್ರಾರ್ಥನೆಯೊಂದನ್ನು ಪೋಸ್ಟ್ ಮಾಡಿದ್ದು, ಹಿಂದಿಯಲ್ಲಿ ಬರೆದಿದ್ದ ಮತ್ತೊಂದು ಸಂದೇಶವನ್ನೂ ಹಂಚಿಕೊಂಡಿದ್ದಾರೆ.

ಅದರ ಅರ್ಥ, "ನಾನು ದೇವಾಲಯಗಳಿಂದ ಗಳಿಸಿಕೊಂಡಿರುವ ಚಿನ್ನದ ನೆರಳೊಂದು ನನ್ನೊಂದಿಗೆ ಸಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಇದಲ್ಲದೆ ಇದರೊಂದಿಗೆ ವಿಮಾನ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುವ ಮತ್ತು ಬ್ರಂಚ್‌ಗೆ ಸ್ಯಾಂಡ್‌ವಿಚ್ ತಿನ್ನುತ್ತಿರುವ ವಿಡಿಯೊಗಳನ್ನೂ ಅವರು ಹಂಚಿಕೊಂಡಿದ್ದಾರೆ.

'ಏನೆಂದು ಪ್ರತಿಕ್ರಿಯಿಸಬೇಕೋ ತಿಳಿದಿಲ್ಲ'

ನಾನಾ ಪಾಟೇಕರ್ ನಿಧನದ ಸುದ್ದಿಯ ಕುರಿತು ತನುಶ್ರೀ ತಮ್ಮ ವಿಡಿಯೊದಲ್ಲಿ ಮಾತನಾಡಿದ್ದಾರೆ. ಆದರೆ ಅವರು ನಾನಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಬದಲಿಗೆ "ನಾನು ಸುದ್ದಿ ಕೇಳಿದ್ದೇನೆ. ನನಗೆ ಗೊತ್ತಾಗಿದೆ. ಆದರೆ... ಇಂದು ನನ್ನ ಕೆಲಸದ ದಿನ. ನಾನು ಕಾರ್ಯಕ್ರಮವೊಂದಕ್ಕಾಗಿ ಲಖನೌಗೆ ತೆರಳುತ್ತಿದ್ದೇನೆ. ಅದರತ್ತ ಗಮನ ಹರಿಸಲು ಬಯಸುತ್ತೇನೆ. ಇದೆಲ್ಲಾ ನಡೆಯಲು ಇಂದೇ ಏಕೆ ಇಂತಹ ದಿನವಾಯಿತು ಎಂಬುದು ವಿಚಿತ್ರವಾಗಿದೆ' ಎಂದು ಹೇಳಿದ್ದಾರೆ.

ಅಲ್ಲದೆ ಲಖನೌನಲ್ಲಿ ನನಗೆ ಬಹಳ ದೊಡ್ಡ ಕಾರ್ಯಕ್ರಮವಿದೆ. ಅದು ನನಗೆ ಬಹಳ ಮುಖ್ಯವಾಗಿತ್ತು. ಇಡೀ ದಿನದ ಯೋಜನೆ ಮಾಡಿಕೊಂಡಿದ್ದೆ. ಲೈವ್‌ಗಳು ಹಾಗೂ ಹಲವು ಕಂಟೆಂಟ್‌ಗಳನ್ನು ಪೋಸ್ಟ್ ಮಾಡಲು ಬಯಸಿದ್ದೆ. ಆದರೆ ಈಗ ಸಂಜೆ ಮಾಧ್ಯಮಗಳ ಗಮನವೆಲ್ಲಾ 'ನಾನಾ ನಿಧನ'ದ (Evil Dead) ಸುದ್ದಿಯ ಮೇಲೆಯೇ ಇರಬಹುದು ಎಂಬ ಚಿಂತೆ ಇದೆ. ಹಾಗಾಗಿ, ನಾನು ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ತಿಳಿದುಕೊಂಡ ಬಳಿಕ ಪ್ರತಿಕ್ರಿಯಿಸುತ್ತೇನೆ. ಕುಟುಂಬಕ್ಕೆ ಖಂಡಿತ ಸಂತಾಪಗಳು, ಆದರೆ..." ಎಂದು ಹೇಳುವಷ್ಟರಲ್ಲಿ ವಿಡಿಯೊ ಸ್ಥಗಿತಗೊಂಡಿದೆ.

ಬಳಿಕ ತನುಶ್ರೀ ಲಖನೌಗೆ ತೆರಳಲು ವಿಮಾನ ಹತ್ತುತ್ತಿರುವ ವಿಡಿಯೊಗಳನ್ನು ಕೂಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Tanushree Dutta after Nana Patekar's death
'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

2018ರಲ್ಲಿ ನಾನಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

2018ರಲ್ಲಿ 'ಮೀಟೂ' ಅಭಿಯಾನದ ಸಂದರ್ಭದಲ್ಲಿ ತನುಶ್ರೀ ದತ್ತಾ, ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. 2009ರಲ್ಲಿ ಬಿಡುಗಡೆಯಾದ 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಸೆಟ್‌ನಲ್ಲಿ ಈ ಘಟನೆ ನಡೆದಿತ್ತು ಎಂದು ಅವರು ಹೇಳಿದ್ದರು.

ತನುಶ್ರೀ ಅವರ ಆರೋಪಗಳು ಭಾರತದಲ್ಲಿ 'ಮೀಟೂ' ಅಭಿಯಾನಕ್ಕೆ ಪ್ರಮುಖ ತಿರುವು ನೀಡಿದ ಬೆಳವಣಿಗೆಗಳಲ್ಲಿ ಒಂದಾಗಿತ್ತು. ಹೈದರಾಬಾದ್‌ನಲ್ಲಿ ನಟಿ ಶ್ರೀರೆಡ್ಡಿ ನಡೆಸಿದ ಪ್ರತಿಭಟನೆಯೊಂದಿಗೆ ಈ ಬೆಳವಣಿಗೆ ಕೂಡ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ವಿರುದ್ಧ ಹಲವು ಮಂದಿಗೆ ಧ್ವನಿ ಎತ್ತಲು ಪ್ರೇರಣೆಯಾಯಿತು.

2008ರಲ್ಲೇ ನಾನಾ ಪಾಟೇಕರ್ ವಿರುದ್ಧ ಸಿನಿ ಆ್ಯಂಡ್ ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್‌ (CINTAA)ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತನುಶ್ರೀ ಹೇಳಿಕೊಂಡಿದ್ದರು. ಬಳಿಕ ನಾನಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ ನಾನಾ ಆರೋಪಗಳನ್ನು ನಿರಾಕರಿಸಿದ್ದರು.

2019ರಲ್ಲಿ ಸಾಕಷ್ಟು ಪುರಾವೆಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚಲಾಗಿತ್ತು. 2025ರಲ್ಲಿ ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಾನೂನು ನಿಗದಿಪಡಿಸಿರುವ ಮಿತಿಯ ಅವಧಿ (limitation period) ಮೀರಿದ ಬಳಿಕ ದೂರು ದಾಖಲಿಸಲಾಗಿದೆ ಎಂಬ ಕಾರಣಕ್ಕೆ ನಾನಾ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ವಜಾಗೊಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com