ಕೃಷಿ-ಪರಿಸರ

ರಾಮಫಲ

ಆ ದಿನ ಮಿತ್ರನೊಂದಿಗೆ ಶಿರಸಿ ತಾಲೂಕಿನ ಹೂತನ್ ಜಾನ್ಮನೆಗೆ ಹೋಗಿದ್ದೆ. ಅಲ್ಲಿ ಸುಮಾರು 68ರ ಇಳಿ ವಯಸ್ಸಿನ ಅಜ್ಜಿ (ಎನ್. ಕೆ. ಭಾನುಮತಿ)ಯ ಗೃಹ ಕೈಗಾರಿಕೆಯ ಕಸುಬನ್ನು ನೋಡಿ ನಿಬ್ಬೆರಗಾಗಿಬಿಟ್ಟೆ. ಅಜ್ಜಿಯ ಕ್ರಿಯಾಶೀಲ ಚಟುವಟಿಕೆಗಳ ಮಾಹಿತಿಯನ್ನು ಸಮಗ್ರವಾಗಿ ಪಡೆದ ನಾನು, ಉತ್ಸಾಹದಿಂದ ಅಜ್ಜಿಯ ಕೈತೋಟವನ್ನು ಆ ಕ್ಷಣ ಸುತ್ತಾಡಿದ್ದೆ.
ಹಾಗೇ ಕೈತೋಟದಲ್ಲಿ ಓಡಾಡುವಾಗ ಅಪರೂಪದ ಹಣ್ಣಿನ ಗಿಡವೊಂದು ನನ್ನ ಕಣ್ಣಿಗೆ ಬಿದ್ದಿತ್ತು. ಅರೆ, ಇದು ಯಾವ ಸೀಮೆಯ ಹಣ್ಣಿನ ಗಿಡವೆಂದು ಅಜ್ಜಿಯಲ್ಲಿ ಆಕ್ಷಣ ಪ್ರಶ್ನಿಸಿಯೇ ಬಿಟ್ಟೆ. ಅದು, ರಾಮಫಲವೆಂದು ಅಜ್ಜಿ ನುಡಿದಾಗ, ಮತ್ತೆಮತ್ತೆ ನೋಡಿ ಖಚಿತಪಡಿಸಿಕೊಂಡೆ.
ಸಾಮಾನ್ಯವಾಗಿ ಮಲೆನಾಡಿನ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ ಸೀತಾಫಲವೇ ಆಗಿರಬಹುದೇ ಎಂಬ ಸಂಶಯ ಆ ಸಮಯದಲ್ಲಿ ಕಾಡಿದ್ದು ಸುಳ್ಳಲ್ಲ. ಸೀತಾಫಲದ ಗಿಡದಂತೆ ರಾಮಫಲದ ಗಿಡವು ಕಾಣುತ್ತಿತ್ತು. ಹಾಗೆ ನೋಡಿದರೆ ಅವೆರಡು ಗಿಡದ ಎಲೆಯು ಒಂದೇ ರೀತಿಯಲ್ಲಿ ಇರುವಂತೆ ತೋರುತ್ತದೆ. ಆದರೆ, ಅವೆರಡರ ಕಾಯಿ, ಹಣ್ಣಿನಲ್ಲಿ ಮಾತ್ರ ಬಹಳ ವ್ಯತ್ಯಾಸ.
ಸೀತಾಫಲದ ಹಣ್ಣಿನ ಗುಳವು ಬಿಳಿ ಬಣ್ಣ ಹೊಂದಿದ್ದು, ಅಧಿಕ ಪ್ರಮಾಣದಲ್ಲಿ ಬೀಜಗಳು ಇರುತ್ತವೆ. ಆದರೆ, ರಾಮಫಲದ ಹಣ್ಣಿನಲ್ಲಿ ಗುಳವು ಹಳದಿ ಬಣ್ಣ ಹೊಂದಿದ್ದು, ಬೆರಳೆಣಿಕೆ ಪ್ರಮಾಣದಲ್ಲಿ ಮಾತ್ರವೇ ಬೀಜವು ಇರುತ್ತವೆ. ಹಿಂದೆ ಶಬರಿಯು ಕಾಡನ್ನು ಸುತ್ತಾಡಿ, ಬಹಳ ರುಚಿಕರವಾದ ಹಣ್ಣನ್ನು ಶ್ರೀರಾಮನಿಗೆ ನೀಡಿದ ಕಥೆ ನೆನಪಿರಬಹುದಲ್ಲಾ. ಅಂದಿನಿಂದ ಇದಕ್ಕೆ ರಾಮಫಲ ಹೆಸರು ಬಂದಿದೆ ಎಂಬ ಪ್ರತೀತಿ.
ನಮಗೆ ವಿಶಿಷ್ಟ ಅನ್ನಿಸುವ ಈ ಹಣ್ಣು ಸವಿಯಲು ಬಹಳ ರುಚಿ. ಅಲ್ಲದೆ, ಜಂತುನಾಶಕ, ಕೆಲವು ಚರ್ಮರೋಗದ ಕಾಯಿಲೆಗೂ ಇದು ರಾಮಬಾಣ ಎಂಬುದು ನಾಟಿ ವೈದ್ಯರ ಅಭಿಮತ.

- ಗಣಪತಿ ಹಾಸ್ಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ