ಕೃಷಿ-ಪರಿಸರ

ಪಚೋಲಿ ಪಂಚ್

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಕಾಣಸಿಗುವ ಪಚೋಲಿಯ ಪರಿಚಯ ರಾಜ್ಯದ ಹೆಚ್ಚಿನ ರೈತರಿಗಿಲ್ಲ. ತುಳಸಿ ಗಿಡದ ಗಾತ್ರ ಹೋಲುವ ಪಚೋಲಿ ಗಿಡದ ಎಣ್ಣೆಯನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಹೀಗಾಗಿ ಪಚೋಲಿ ಸಸ್ಯಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ.
ರೇಷ್ಮೆ ಕೃಷಿಗೆ ಗುಡ್ ಬೈ ಹೇಳಿ ಮೂರು ವರ್ಷಗಳಿಂದ ಪಚೋಲಿ ಬೆಳೆಯುತ್ತಿರುವ ಮಂಜುನಾಥರ ಕಾಲು ಎಕರೆ ಜಮೀನಿನಲ್ಲಿ ನಾಲ್ಕು ಸಾವಿರ ಪಚೋಲಿ ಗಿಡಗಳಿವೆ. ಜೂನ್ ಕೊನೆ ವಾರ ಸಸಿ ನಾಟಿ ಮಾಡಿದರೆ ಜನವರಿ ತಿಂಗಳಲ್ಲಿ ಗಿಡವನ್ನು ಬೇರು ಸಹಿತವಾಗಿ ಕೆಜಿವಾರು ಲೆಕ್ಕದಲ್ಲಿ ಮಾರಾಟ ಮಾಡಬಹುದು. ವರ್ಷದಲ್ಲಿ ಎರಡು ಬಾರಿ ಮಳೆ, ನೀರಾವರಿ ಮತ್ತು ಹನಿ ನೀರಾವರಿಯಲ್ಲಿ ಪಚೋಲಿ ಬೆಳೆಯಬಹುದು.
ಮಳೆ, ನೀರಾವರಿಯಲ್ಲಿ ನಾಟಿ ಮಾಡಬಯಸುವವರು ಮೇ ತಿಂಗಳಲ್ಲಿ ನಾಟಿ ಮಾಡಿದರೆ ಡಿಸೆಂಬರ್ನಲ್ಲಿ ಕಟಾವು ಮಾಡಬಹುದು. ಪಚೋಲಿ ಆರು ತಿಂಗಳ ಬೆಳೆ. ನೀರು, ಬೆಳಕು ಅಗತ್ಯ. ನಾಟಿಗೆ ಬೇಕಾದ ಗಿಡಗಳು ಸಿದ್ದಾಪುರದ ಪ್ರಮುಖ ನರ್ಸರಿಗಳಲ್ಲಿ, ಬೆಳೆಗಾರರ ಬಳಿ ಲಭ್ಯ.
ಬೆಳೆಯುವ ವಿಧಾನ
ಒಂದು ಅಡಿ ಅಗಲ, ಒಂದು ಅಡಿ ಎತ್ತರದ ಸಾಲು ಮಾಡಿ ಅದರಲ್ಲಿ ಗಿಡದಿಂದ ಗಿಡಕ್ಕೆ ಎರಡೂವರೆ ಅಡಿ ಅಂತರ ಬಿಟ್ಟು ಸಸಿ ನಾಟಿ ಮಾಡಬೇಕು. ಕಟಾವಿಗಿಂತ ಮುಂಚೆ ಎರಡರಿಂದ ಮೂರು ಬಾರಿ ಸಾವಯವ ಗೊಬ್ಬರ ನೀಡಬೇಕು. ವಾರಕ್ಕೊಮ್ಮೆ ನೀರು ಹಾಯಿಸುವುದು ಅಗತ್ಯ. ರೋಗವೇ ಕಾಡದ ಕೃಷಿ ಎಂಬ ಹೆಗ್ಗಳಿಕೆ ಇದರದ್ದು. ಮರಳು ಮಿಶ್ರಿತ ಮಣ್ಣು ಬೆಳೆಗೆ ಸೂಕ್ತ.
ವಿದೇಶಕ್ಕೆ ರಫ್ತಾಗುತ್ತೆ
ಸುಗಂಧ ದ್ರವ್ಯ, ಎಣ್ಣೆ ತಯಾರಿಯಲ್ಲಿ ಬಳಕೆಯಾಗುವ ಪಚೋಲಿ ವಿದೇಶಕ್ಕೆ ರಫ್ತಾಗುತ್ತದೆ. ಗಿಡವನ್ನು ಕಿತ್ತು ಎರಡು ದಿನಗಳವರೆಗೆ ಬಿಸಿಲಲ್ಲಿ ಒಣಗಿಸಿ ನಂತರ ಮಾರಾಟ ಮಾಡಬೇಕು. ಸಿದ್ದಾಪುರದಲ್ಲಿ ಪಚೋಲಿಯಿಂದ ಎಣ್ಣೆ ತಯಾರಿಸುವ ಕಂಪನಿಗಳಿದ್ದು, ಅವರೇ ಬಂದು ಕೆಜಿಗೆ 35 ದರದಲ್ಲಿ ಖರೀದಿಸುವ ವ್ಯವಸ್ಥೆ ಉಂಟು. ಒಂದು ಗಿಡ ಒಣಗಿದರೆ ಕಾಲು ಕೆಜಿಯಷ್ಟು ತೂಗುತ್ತದೆ. ಗಿಡದ ದಂಟನ್ನು ಊದುಬತ್ತಿ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.  <

ಕೈತುಂಬ ಕಾಸು
ಸಿದ್ದಾಪುರದ ಸೋವಿನಕೊಪ್ಪ, ಕಾನಗೋಡ, ಮಾವಿನಗುಂಡಿ, ಕವಚೂರು, ಮನ್ಮನೆ ಮುಂತಾದ ಊರುಗಳಲ್ಲಿ ಬೆಳೆಗಾರರ ಸಂಖ್ಯೆ ಜಾಸ್ತಿ. ಇನ್ನು ಪಚೋಲಿ ಮಧ್ಯೆ ಕಳೆಗಿಡ ಬೆಳೆಯುವುದು ತೀರಾ ಕಮ್ಮಿ. ದನಗಳು ತಿನ್ನದ ಸಸ್ಯ ಎಂಬ ಹೆಗ್ಗಳಿಕೆ ಕೂಡಾ ಇದರದ್ದು. ಕಾಲು ಎಕರೆಯಲ್ಲಿ ಪಚೋಲಿ ಬೆಳೆಯಲು ಐದರಿಂದ ಆರು ಸಾವಿರ ರುಪಾಯಿ ಖರ್ಚು ತಗಲುತ್ತದೆ. ಅದರಿಂದ ಮೂವತ್ತರಿಂದ ನಲವತ್ತು ಸಾವಿರ ರು. ಆದಾಯ ಗಳಿಸಬಹುದು. ಒಂದು ಕ್ವಿಂಟಲ್ ಸೊಪ್ಪಿನಿಂದ ಒಂದು ಕೆಜಿ ಎಣ್ಣೆ ತಯಾರಾಗುತ್ತದೆ. ಪಚೋಲಿ ಬೆಳೆಯುವವರು ಬೆಳೆಗಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯ ಮಂಜುನಾಥ (8861492927) ಅವರನ್ನು ಸಂಪರ್ಕಿಸಬಹುದು.

- ಚಂದ್ರಹಾಸ ಚಾರ್ಮಾಡಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!