ಕೃಷಿ-ಪರಿಸರ

ಇಲ್ಲೊಬ್ಬ ಗೇಲ್!

ಔಷಧೀಯ ಗುಣವುಳ್ಳ ಗೇಲ್ ಬೆಳೆ ಬೆಳೆಯುವ ಮೂಲಕ ಇಲ್ಲಿನ ರೈತರೊಬ್ಬರು ಸುತ್ತಮುತ್ತಲಿನ ಕೃಷಿಕರ ಗಮನ ಸೆಳೆದಿದ್ದಾರೆ. ಖರ್ಚು ಕಡಿಮೆ ಲಾಭ ಜಾಸ್ತಿಯ ಬೆಳೆ ಇದು. ದೇವದುರ್ಗ ತಾಲೂಕಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯಡಿ ನೀರಾವರಿ ಸೌಲಭ್ಯವಿದೆ. ನೀರಾವರಿ ಯೋಜನೆಯಡಿ ದೊರೆಯುವ ನೀರನ್ನು ಸಮರ್ಪಕ ಬಳಸಿಕೊಳ್ಳಲು ಈಗಲೂ ರೈತರಿಗೆ ಸಾಧ್ಯವಾಗಿಲ್ಲ.
ಇಲ್ಲಿ ಗೇಲ್‌ನಂಥ ಬೆಳೆಯು ಒಣ ಬೇಸಾಯ, ನೀರಾವರಿ ಭೂಮಿಗಳಲ್ಲೂ ಬೆಳೆಯುತ್ತದೆ. ಗೇಲ್ ತೋಟಗಾರಿಕೆ ಬೆಳೆ. ಸದ್ಯ ಪ್ರತಿ ಕ್ವಿಂಟಲ್‌ಗೆ ರು. 10 ಸಾವಿರ ಕನಿಷ್ಠ ಧಾರಣೆ ಇದೆ. ಗೇಲ್ ಬಿತ್ತನೆ ವೇಳೆ ಪ್ರತಿ ಎಕರೆಗೆ 50 ಕೆಜಿ ಕಾಂಪೋಸ್ಟ್ ಗೊಬ್ಬರ ನೀಡಿದರೆ, ಒಂದು ತಿಂಗಳ ನಂತರ 20 ಕೆಜಿ ಯೂರಿಯಾ, 20 ಕೆಜಿ ಪೊಟ್ಯಾಷ್ ನೀಡಬೇಕು.
ಕನಿಷ್ಠ 3- 6 ಅಡಿ ಎತ್ತರ ಬೆಳೆಯುವ ಒಂದು ಗಿಡಕ್ಕೆ 100- 120 ತೆನೆ ಬಿಡುತ್ತದೆ. ಬಿತ್ತನೆ ನಂತರ ಕಳೆ ಮತ್ತು ಕಟಾವಿನ ಕೆಲಸ ಮಾತ್ರ ರೈತರದ್ದು. ಕೃಷಿಕರ ಕೆಲಸ ಮತ್ತು ಖರ್ಚು ಕಡಿಮೆ. ಜತೆಗೆ ಲಾಭವೂ ಇದೆ ಎನ್ನುತಾರೆ ರೈತ ಎಚ್. ರಘುರಾಮ್.
ಗೇಲ್ ಬೆಳೆಯ ಬೀಜಗಳನ್ನು ಆಂಧ್ರ ಮೂಲದ ವಿತರಕರು ಒದಗಿಸಿದ್ದಾರೆ. ಬೆಳೆ ಬಂದ ನಂತರ ವಿತರಕರೆ ಖುದ್ದಾಗಿ ರೈತರ ಹೊಲಕ್ಕೆ ಬಂದು ಪ್ರತಿ ಕ್ವಿಂಟಲ್‌ಗೆ ಕನಿಷ್ಠ 10 ಸಾವಿರದಂತೆ ಖರೀದಿಸುತ್ತಾರೆ. ಗೇಲ್ ಬೆಳೆಗಾರರು ಮಾರುಕಟ್ಟೆಗೆ ಅಲೆಯುವ ಅಗತ್ಯವೂ ಇರದು. ಗೇಲ್ ಬೆಳೆಯಲ್ಲಿ ಉಮೇಜಾ- 3 ಅನ್ನುವ ಪೌಷ್ಟಿಕಾಂಶ ಗುಣ ಶೇ.63ರಷ್ಟು ಇರುತ್ತದಂತೆ. ಆದ್ದರಿಂದಲೇ ಯುರೋಪ್ ರಾಷ್ಟ್ರಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚು.
ವಿವಿಧ ನೀರಾವರಿ ಯೋಜನೆಗಳಡಿ ನಿರಂತರ ಬತ್ತ ಬೆಳೆದು ಲಕ್ಷಾಂತರ ರು. ವೆಚ್ಚ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ರೈತರಿಗೆ, ಗೇಲ್ ಬೆಳೆ ಪರ್ಯಾಯವಾಗಿದೆ. ಚಿನ್ನದ ಬೆಲೆಯ ಗೇಲ್ ಬೆಳೆಯತ್ತ ತಾಲೂಕಿನ ರೈತರು ನಿಧಾನ ಆಕರ್ಷಿತರಾಗುತ್ತಿದ್ದಾರೆ. ಸಂಪರ್ಕ: ಎಚ್. ರಘುರಾಮ್ (9900129440).

- ಮೊಯಿನುದ್ದೀನ್ ಕಾಟಮಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!